ಕಾರುಗಳಲ್ಲಿರುವ ಸನ್ ಫಿಲ್ಮ್ ತೆಗೆಯುವಂತೆ ಆದೇಶ ನೀಡಿದ ಹೈಕೋರ್ಟ್

ಭಾರತದಲ್ಲಿ ವಾಹನಗಳನ್ನು ಮಾಡಿಫೈ ಮಾಡುವುದು ಕಾನೂನು ಬಾಹಿರ. ವಾಹನಗಳನ್ನು ಮಾಡಿಫೈ ಮಾಡಿರುವವರು ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ದಂಡ ತೆರುವುದು ಖಚಿತ. ಸುಪ್ರೀಂ ಕೋರ್ಟ್ ಆದೇಶದನ್ವಯ ಕಾರುಗಳ ವಿಂಡೋಗಳಲ್ಲಿ ಸನ್ ಫಿಲ್ಮ್ ಅಳವಡಿಸುವಂತಿಲ್ಲ. ಪೊಲೀಸರು ಸನ್ ಫಿಲ್ಮ್ ಹೊಂದಿರುವ ಕಾರುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಲೇ ಇದ್ದರೂ ಕೆಲವರು ತಮ್ಮ ಕಾರುಗಳಲ್ಲಿರುವ ಸನ್ ಫಿಲ್ಮ್ ಗಳನ್ನು ತೆಗೆದೇ ಇಲ್ಲ.

ಈ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ತಮಿಳುನಾಡು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿದ್ದು, ಕಾರುಗಳಲ್ಲಿ ಅಳವಡಿಸಿರುವ ಸನ್ ಫಿಲ್ಮ್ ಗಳನ್ನು ತೆಗೆದು ಹಾಕಲು 60 ದಿನಗಳ ಕಾಲಾವಕಾಶ ನೀಡಿದೆ. ಈ ಗಡುವಿನೊಳಗೆ ಕಾರು ಮಾಲೀಕರು ಸನ್ ಫಿಲ್ಮ್ ಅನ್ನು ತೆಗೆದು ಹಾಕಬೇಕು. ಇಲ್ಲದಿದ್ದರೇ ಸನ್ ಫಿಲ್ಮ್ ಹೊಂದಿರುವ ವಾಹನಗಳನ್ನು ಜಪ್ತಿ ಮಾಡುವಂತೆ ಮದ್ರಾಸ್ ಹೈಕೋರ್ಟ್ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದೆ.

ಕಾರುಗಳಲ್ಲಿ ಸನ್ ಫಿಲ್ಮ್ ಬಳಸುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಈಗ ಮದ್ರಾಸ್ ಹೈಕೋರ್ಟ್ ಸಹ ಸನ್ ಫಿಲ್ಮ್ ಹೊಂದಿರುವ ಕಾರುಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಸನ್ ಫಿಲ್ಮ್ ಹೊಂದಿರುವ ಕಾರುಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಗಳಿವೆ.

ಇತ್ತೀಚಿಗೆ ಗುಜರಾತ್ ನಲ್ಲಿ ಸನ್ ಫಿಲ್ಮ್ ಹೊಂದಿರುವ ವಾಹನಗಳ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಹಲವಾರು ಜನರು ತಮ್ಮ ಕಾರುಗಳ ವಿಂಡೋ ಹಾಗೂ ಗಾಜುಗಳ ಮೇಲೆ ಸನ್ ಫಿಲ್ಮ್ ಅಳವಡಿಸುತ್ತಾರೆ. ಇಂತಹ ಕಾರುಗಳ ವಿರುದ್ಧ ಸೂರತ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!