ರಾಯಲ್ ಓಕ್ ಫರ್ನಿಚರ್ ಶೋ ರೂಂಗೆ ಸಿದ್ಧಲಿಂಗಶ್ರೀ ಚಾಲನೆ

ತುಮಕೂರು: ನಗರದ ಶಿರಾಗೇಟ್ ರಸ್ತೆಯ ತುಮಕೂರು ಅಮಾನಿಕೆರೆ ಏರಿಗೆ ಹೊಂದಿಕೊಂಡಂತೆ ರಾಯಲ್ ಓಕ್ ಫರ್ನಿಚರ್‍ಸ್ ಮಳಿಗೆ ಶನಿವಾರ ಉದ್ಘಾಟನೆಗೊಂಡಿತು.

ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ ಈ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಹೊಸ ಮನೆಗೆ ಬೇಕಾದ ಅತ್ಯುಪಯುಕ್ತ ಉಪಕರಣಗಳು, ಅಡುಗೆ ಮತ್ತು ಮಲಗುವ ಕೋಣೆಗೆ ಬೇಕಾದ ಫರ್ನಿಚರ್ ಮಳಿಗೆ ಇದಾಗಿದ್ದು, ಅಂತಾರಾಷ್ಟ್ರೀಯ ಗುಣ ಮಟ್ಟದ ಪರಿಕರಗಳು ಇದರಲ್ಲಿ ದೊರೆಯುತ್ತಿವೆ ಎಂದರು.

ತುಮಕೂರು ನಗರದ ಜನತೆಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಕಡಿಮೆ ಬೆಲೆಯಲ್ಲಿ ಉತ್ತಮ ಗುಣ ಮಟ್ಟದ ಫರ್ನಿಚರ್‌ಗಳನ್ನು ಖರೀದಿಸಬಹುದಾಗಿದೆ ಎಂದ ಅವರು, ಈ ಸಂಸ್ಥೆ ಸಾಕಷ್ಟು ನಿರುದ್ಯೋಗಿಗಳಿಗೆ ಕೆಲಸ ನೀಡಿರುವುದು ಶ್ಲಾಘನೀಯ ಎಂದರು.

ಈ ಭಾಗದಲ್ಲಿ ಇಂತಹ ಉತ್ತಮ ಶೋರೋಂ ತೆರೆದು ಗ್ರಾಹಕರಿಗೆ ಅತ್ಯುತ್ತಮ ಪೀಠೊಪಕರಣಗಳನ್ನು ನೀಡುತ್ತಿರುವುದರ ಜೊತೆಗೆ ಹತ್ತಾರು ಮಂದಿಗೆ ಉದ್ಯೋಗ ಕಲ್ಪಿಸಿರುವುದು ಅತ್ಯಂತ ಶ್ಲಾಘನೀಯ, ಈ ಸಂಸ್ಥೆ ಇನ್ನೂ ಅತ್ಯುತ್ತಮವಾಗಿ ಬೆಳೆಯಲಿ ಎಂದು ಆಶಿಸಿದರು.

ರಾಯಲ್‌ಓಕ್ ಸಂಸ್ಥೆಯ ಛೇರ್ಮನ್ ವಿಜಯ ಸುಬ್ರಹ್ಮಣ್ಯಂ ಮಾತನಾಡಿ, ನಮ್ಮ ಸಂಸ್ಥೆ ಅಮೇರಿಕಾ, ಇಟಲಿ, ಮಲೇಷಿಯಾ ಮುಂತಾದ ದೇಶಗಳ ಕಲೆಕ್ಷನ್‌ಗಳನ್ನು ಇಲ್ಲಿ ಮಾರುತ್ತಿದ್ದು, ದೇಶದಾದ್ಯಂತ 99 ಮಳಿಗೆಗಳನ್ನು ತೆರೆದಿದೆ ಎಂದರು.

ಕರ್ನಾಟಕ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ದೆಹಲಿ, ಹರಿಯಾಣ ಮುಂತಾದ ಕಡೆ ಮಳಿಗೆಗಳನ್ನು ತೆರೆಯಲಾಗಿದ್ದು, ಬೆಂಗಳೂರು, ಹೈದರಾಬಾದ್, ಚನ್ನೈ, ದೆಹಲಿ, ಗುರುಗ್ರಾಮ್, ಮುಂಬೈ, ಕೋಲ್ಕತ್ತ ಮುಂತಾದ ಮಹಾನಗರಗಳಲ್ಲಿ ನಮ್ಮ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

ಕರ್ನಾಟಕ ರಾಜ್ಯದಲ್ಲಿ ಸುಮಾರು 3೦ ಮಳಿಗೆಗಳು ಆರಂಭಗೊಂಡಿದ್ದು, ಬೆಂಗಳೂರಿನಲ್ಲೇ ಸುಮಾರು 24 ಮಳಿಗೆಗಳು ಆರಂಭಗೊಂಡು ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ರಿಯಾಯಿತಿ ಧರದಲ್ಲಿ ನೀಡುತ್ತಿರುವ ಉತ್ತಮ ಮಳಿಗೆಯಾಗಿ ರೂಪುಗೊಂಡಿದೆ ಎಂದು ತಿಳಿಸಿದರು.

ಸುಮಾರು 2೦೦ಕ್ಕೂ ಹೆಚ್ಚು ರೀತಿಯ ಸೋಫಾಸೆಟ್, 1೦೦ಕ್ಕೂ ಹೆಚ್ಚು ರೀತಿಯ ಡೈನಿಂಗ್‌ಸೆಟ್, ಬೆಡ್‌ರೂಂ ಸೆಟ್‌ಗಳು ಮಾರಾಟಕ್ಕೆ ಲಭ್ಯವಿವೆ ಎಂದರು. ಈ ಸಂದರ್ಭದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಎಸ್.ನಾಗಣ್ಣ ಸೇರಿದಂತೆ ರಾಯಲ್ ಓಕ್ ಶೋರೂಂನ ವ್ಯವಸ್ಥಾಪಕರು, ಸಿಬ್ಬಂದಿವರ್ಗ ಹಾಜರಿದ್ದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!