ಶಾಕಿಂಗ್ ನ್ಯೂಸ್: ಶಿಕ್ಷಣ ಸಚಿವರ ತವರಲ್ಲೇ ಹತ್ತುದಿನದಲ್ಲೆ 73 ಮಕ್ಕಳಿಗೆ ಕೋವಿಡ್

ತುಮಕೂರು: ಶಾಲೆ ಶುರುವಾದ ಹತ್ತೆ ದಿನದಲ್ಲಿ ತುಮಕೂರಿನಲ್ಲಿ 73 ಮಕ್ಕಳಿಗೆ ಕೋವಿಡ್‌ ಸೊಂಕು ಇರೋದು ಪತ್ತೆಯಾಗಿದೆ. ಸದ್ಯ ರಾಜ್ಯದಲ್ಲಿ 6 ರಿಂದ 8 ತರಗತಿಗಳು ಶುರುವಾಗಿದ್ದು, ಅದರಂತೆ ತುಮಕೂರು ಜಿಲ್ಲೆಯಲ್ಲೂ ಕೂಡ ಶಾಲೆಗಳು ಶುರುವಾಗಿದ್ದಾವೆ.

ಈ ನಡುವೆ ಶಾಲೆಗೆ ಬಂದ ಜಿಲ್ಲೆಯ ವಿವಿಧ ತಾಲೂಕಿನ 39 ಜನ ಹೆಣ್ಣುಮಕ್ಕಳಿಗೆ ಹಾಗೂ 34 ಜನ ಗಂಡುಮಕ್ಕಳಲ್ಲಿ ಕೊರೋನಾ ಸೊಂಕು ಇರೋದು ಧೃಡಪಟ್ಟಿರುವುದು ಗ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಾಮಿಸಿದೆ.

ಇನ್ನೂ ಮಕ್ಕಳಲ್ಲಿ ಕರೋನ ಹರಡುತ್ತಿರುವುದು ಜಿಲ್ಲಾಡಳಿತದ ನಿದ್ದೆ ಕೆಡಿಸಿದ್ದು, ಮಕ್ಕಳಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡುವುದಕ್ಕೆ ಮುಂದಾಗುತ್ತಿದೆ. ಇವೆಲ್ಲದರ ನಡುವೆ ಮಕ್ಕಳಿಗೆ ಕರೋನ ಸೊಂಕು ಎಲ್ಲಿಂದ ಹೇಗೆ ಬಂತು ಎನ್ನುವುದು ಕೂಡ ಸದ್ಯಕ್ಕೆ ಉದ್ಬವಿಸಿರುವ ಪ್ರಶ್ನೆಯಾಗಿದ್ದು, ಸೊಂಕಿನ ಮೂಲದ ಬಗ್ಗೆ ಕೂಡ ಸಂಬಂಧಪಟ್ಟ ಇಲಾಖೆಯವರು ಈಗ ಹುಡುಕಾಟ ನಡೆಸ ಬೇಕಾಗಿದೆ.

ಕೋವಿಡ್ ನಿಯಮಗಳನ್ನ ಪಾಲನೆ ಮಾಡಿದ್ರೂ ಕೂಡ ಮಕ್ಕಳಿಗೆ ಕೋವಿಡ್ ಹೇಗೆ ಹರಡುತ್ತಿದೆ ಎನ್ನುವುದು ಈಗ ಪ್ರಶ್ನೆಯಾಗಿದ್ದು, ಖುದ್ದು ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಹೀಗಾದ್ರೆ ಬೇರೆ ಕಡೆ ಹೇಗೆ ಎನ್ನುವ ಅನುಮಾನ ಈಗ ಮೂಡ ತೊಡಗಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!