ಕುಡಿದ ಅಮಲಿನಲ್ಲಿ ಲಾರಿಯನ್ನು ರಸ್ತೆ ಪಕ್ಕದಲ್ಲಿದ್ದ ಹೆಲ್ಮೆಟ್ ಅಂಗಡಿಗೆ ಗುದ್ದಿದ ಚಾಲಕ

ಕೊರಟಗೆರೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನ ಬೈಪಾಸ್ ರಸ್ತೆಯಲ್ಲಿ ನಡೆದ ಘಟನೆ.

ಕುಡಿದ ಅಮಲಿನಲ್ಲಿ ಸಿಮೆಂಟ್ ತುಂಬಿದ ಲಾರಿಯೊಂದು ಮಧ್ಯಾಹ್ನ ೨ ರ ಸುಮಾರಿಗೆ ಕಂಠಪೂರ್ತಿ ಕುಡಿದಿದ್ದ ಲಾರಿ ಚಾಲಕ ಲಾರಿಯನ್ನು ಎರ್ರಾಬಿರಿ ಓಡಿಸಿಕೊಂಡು ಬಂದು ಹೆದ್ದಾರಿಯ ಪಕ್ಕದಲ್ಲಿದ್ದ ಹೆಲ್ಮೆಟ್ ಅಂಗಡಿಯೊಂದಕ್ಕೆ ಗುದ್ದಿದ್ದಾನೆ ಗುದ್ದಿದ ರಭಸಕ್ಕೆ ಅಂಗಡಿಯಲ್ಲಿದ್ದ ಹೆಲ್ಮೆಟ್ ಗಳೆಲ್ಲ ಚೆಲ್ಲಾಪಿಲ್ಲಿ ಅದೃಷ್ಟವಶಾತ್ ಹೆಲ್ಮೆಟ್ ಮಾರುವ ವ್ಯಕ್ತಿ ಬಚಾವ್ .

ಲಾರಿ ಗುದ್ದಿದ ರಭಸಕ್ಕೆ ರಸ್ತೆಯ ಬದಿಯಲ್ಲಿ ನಿಂತಿದ್ದ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ .
ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸ್ಥಳದಲ್ಲಿಯೇ ಇದ್ದ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ .

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!