ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ತನ್ನ ಬುದ್ದಿ ತೋರಿಸಿದ ಕಳ್ಳ : ಇದೀಗ ಪೊಲೀಸರ ಅತಿಥಿ

ಕೊರಟಗೆರೆ : ದರೋಡೆ ಕಳ್ಳತನ ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸಿದ ಆರೋಪಿಯೊಬ್ಬ ಮತ್ತೆ ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸರಿಗೆ ಸೆರೆಸಿಕ್ಕಿದ ಪ್ರಕರಣ ಶನಿವಾರ ನಡೆದಿದೆ.

ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಚಿಕ್ಕ ಪಾಲನಹಳ್ಳಿಯಲ್ಲಿ ಮತ್ತು ರಾಜ್ಯದ ಹಲವು ಭಾಗಗಳಲ್ಲಿ ಕಳೆದ 6 ತಿಂಗಳ ಹಿಂದೆ 5 ಲಕ್ಷ ಚಿನ್ನಾಭರಣ, ನಗದು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದ ಆಸಾಮಿ ಮತ್ತೆ ಕಳ್ಳತನಕ್ಕೆ ಹೊಂಚು ಹಾಕುವ ಸಂದರ್ಭದಲ್ಲಿ ಕೋಳಾಲ ಪೊಲೀಸರಿಗೆ ಸೆರೆಸಿಕ್ಕಿದ್ದಾರೆ ಎನ್ನಲಾಗಿದೆ.

ಆರೋಪಿ ಮೂಲತಹ ದೊಡ್ಡಬಳ್ಳಾಪುರದ ವೆಂಕಟರಾಮಯ್ಯ ಎಂಬವರ ಮಗ ಆನಂದ್ (35ವರ್ಷ) ಎನ್ನಲಾಗಿ, ನೆಲಮಂಗಲದ ಲಕ್ಕನಹಳ್ಳಿ ಶರತ್ ಹಾಗೂ ಸ್ನೇಹಿತರೊಂದಿಗೆ ಕೊರಟಗೆರೆ ತಾಲೂಕಿನ ಚಿಕ್ಕಪಾಲನಹಳ್ಳಿ ಉಮೇಶ್ ಎಂಬುವರ ಮನೆಯಲ್ಲಿ ಚಿನ್ನಾಭರಣ ಸೇರಿದಂತೆ ನಗದು ಸೇರಿ ಸುಮಾರು 5 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದರು ಎನ್ನಲಾಗಿದೆ.

ಆರೋಪಿ ಆನಂದ ಹಾಗೂ ಸಂಗಡಿಗರು ತುಮಕೂರು ಜಿಲ್ಲೆಯ ಕೆ ಬಿ ಕ್ರಾಸ್, ಬೆಂಗಳೂರಿನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ, ರಾಮನಗರ ಜಿಲ್ಲೆಯ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೇರಿದಂತೆ ಅಂತರ್ ಜಿಲ್ಲಾ ಕಳ್ಳತನ ಹಾಗೂ ಡಕಾಯತಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಆನಂದ್ ಜೈಲುವಾಸ ಅನುಭವಿಸಿ ಇತ್ತೀಚಿಗಷ್ಟೇ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ ಎನ್ನಲಾಗಿದ್ದು , ಈತ ಕೋಳಾಲ ಸರಹದ್ದಿನ ಮಾವತ್ತೂರು ಬಸ್ ನಿಲ್ದಾಣದ ಬಳಿ ಮಾರಕಾಸ್ತ್ರಗಳೊಂದಿಗೆ ಕಳ್ಳತನಕ್ಕೆ ಹೊಂಚುಹಾಕಿ ಹಾಕಿ ಕುಳಿತಿದ್ದ ಸಂದರ್ಭದಲ್ಲಿ ಗಸ್ತಿನಲ್ಲಿದ್ದ HC ಮೋಹನ್ ಕುಮಾರ್ ಮತ್ತು PC ಸೈಯದ್ ರಿಫತ್ ಅಲಿಗೆ ಅನುಮಾನ ಬಂದು ಠಾಣೆಗೆ ಕರೆತಂದು ತನಿಖೆ ನಡೆಸಿದಾಗ ಪ್ರಕರಣಗಳು ಬಯಲಿಗೆ ಬಂದಿದೆ ಎನ್ನಲಾಗಿದೆ.

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಎಡಿಎಸ್ಪಿ ಉದೇಶ್, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣಯ್ಯ, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ಮಹಾಲಕ್ಷ್ಮಮ್ಮ ಮಾರ್ಗದರ್ಶನದಂತೆ ಕೋಳಾಲ ಪೊಲೀಸ್ ನವರು ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ಮಹಾಲಕ್ಷ್ಮಮ್ಮ ಕೇಸು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!