ಮತ್ತೆ ಹೆಚ್ಚಾಗಲಿದೆ ತುಟ್ಟಿಭತ್ಯೆ, ಈ ತಿಂಗಳು ಸರ್ಕಾರಿ ನೌಕರರಿಗೆ ಸಿಗಲಿದೆ

ನವದೆಹಲಿ: 7th Pay Commission – ಹಬ್ಬದ ಸೀಸನ್ ಆರಂಭವಗುವುದಕ್ಕು ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) ಮತ್ತೊಂದು ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ದೀರ್ಘ ಕಾಲದ ನಿರೀಕ್ಷೆಯ ನಂತರ ತುಟ್ಟಿ ಭತ್ಯೆಯನ್ನು ಶೇ.17 ರಿಂದ ಶೇ.28 ಕ್ಕೆ ಹೆಚ್ಚಿಸಲಾಗಿದೆ. ಇದರ ಜೊತೆಗೆ HRA ಕೂಡ ಶೇ.24 ರಿಂದ ಶೇ.27ಕ್ಕೆ ಹೆಚ್ಚಿಸಲಾಗಿದೆ. ಆದರೆ, ಇವೆಲ್ಲದರ ಬಳಿಕವೂ ಕೂಡ ಇದೀಗ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಸಿಗಲಿದೆ.

ತುಟ್ಟಿ ಭತ್ಯೆ (Dearness Allowance) ಮತ್ತೆ ಏರಿಕೆಯಾಗಲಿದೆ
ಕೇಂದ್ರ ಸರ್ಕಾರಿ ನೌಕರರಿಗೆ (Government Employees) ಶೀಘ್ರದಲ್ಲೇ ಮತ್ತೊಂದು ಉಡುಗೊರೆ ಸಿಗುವ ಸಾಧ್ಯತೆ ಇದೆ. ಜುಲೈ 2021 ರ ತುಟ್ಟಿ ಭತ್ಯೆ ಇನ್ನೂ ಘೋಶಿಸಲಾಗಿಲ್ಲ. ಇದು ಶೇ.3 ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಜೂನ್ 2021 ರಲ್ಲಿ ಎಐಸಿಪಿಐ ದತ್ತಾಂಶವು ಡಿಎ ಅನ್ನು ಶೇ. 31.18 ಎಂಬುದಾಗಿ ಸ್ಪಷ್ಟಪಡಿಸಿದೆ. ಆದರೆ, ಡಿಎ ಲೆಕ್ಕಾಚಾರವನ್ನು ರೌಂಡ್ ಫಿಗರ್ ನಲ್ಲಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಡಿಎ (DA Hike) ಶೇ. 31% ಪಾವತಿಯಾಗಲಿದೆ. ಅಂದರೆ, 3 ಪ್ರತಿಶತದಷ್ಟು ಹೆಚ್ಚಳ ಮಾಡಿದರೆ, ಉದ್ಯೋಗಿಗಳಿಗೆ ಶೇ.31 ರಷ್ಟು ಡಿಯರ್ನೆಸ್ ಭತ್ಯೆಸಿಗಲಿದೆ. ಆದರೆ ಇದುವರೆಗೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲ ಮತ್ತು ಅದನ್ನು ಯಾವಾಗ ಕಾರ್ಯಗತಗೊಳಿಸಲಾಗುವುದು ಎಂಬುದನ್ನು ಹೇಳಲಾಗಿಲ್ಲ.

. ಶೇ.3 ರಷ್ಟು DA ಹೆಚ್ಚಳ ಫಿಕ್ಸ್

ಉದ್ಯೋಗಿಗಳ ಒಕ್ಕೂಟವು ಸರ್ಕಾರವು ಶೀಘ್ರದಲ್ಲೇ 3% ಡಿಯರ್ನೆಸ್ ಭತ್ಯೆಯ ಹೆಚ್ಚಳವನ್ನು ಘೋಷಿಸಬೇಕು (3% ಡಿಎ ಹೆಚ್ಚಳ) ಎಂದು ಹೇಳುತ್ತಿದೆ. ಎಐಸಿಪಿಐ ಸೂಚ್ಯಂಕದ ಮಾಹಿತಿಯ ಪ್ರಕಾರ, ಜೂನ್ 2021 ರ ಸೂಚ್ಯಂಕವು 1.1 ಅಂಶಗಳಷ್ಟು ಹೆಚ್ಚಾಗಿದೆ. ಜೂನ್ ನಲ್ಲಿ ಸೂಚ್ಯಂಕ 121.7 ಕ್ಕೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ, ಜೂನ್ 2021 ರ ಡಿಯರ್ನೆಸ್ ಭತ್ಯೆಯನ್ನು ಶೇಕಡಾ 3 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ.

ಈ ತಿಂಗಳಾಂತ್ಯದೊಳಗೆ ನಿರ್ಧಾರ ಸಾಧ್ಯತೆ

ನೌಕರರ ಸಂಘದ (Employee Union) ಹಿನ್ನೆಲೆ ಜುಲೈ 2021 ಡಿಎ ಇದೆ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ, ಇದಕ್ಕೆ ಇನ್ನೂ ಯಾವದೇ ಡೆಡ್ ಲೈನ್ ನಿಗದಿಪಡಿಸಲಾಗಿಲ್ಲ. ಆದರೆ, ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ಇದರ ಘೋಷಣೆ ಮಾಡಿ, ಅಕ್ಟೋಬರ್ ತಿಂಗಳಿನ ವೇತನದ ಜೊತೆಗೆ ಇದನ್ನು ಪಾವತಿಸಬಹುದು. ನೌಕರರ ಸಂಘದ ಬೇಡಿಕೆಯ ಪ್ರಕಾರ ಒಂದು ವೇಳೆ ಈ ತುಟ್ಟಿಭತ್ಯೆ ಸೆಪ್ಟೆಂಬರ್ ತಿಂಗಳಿನಲ್ಲಿ ಘೋಷಣೆ ಮಾಡಿದರೆ, ಜುಲೈ ನಿಂದ ಸೆಪ್ಟೆಂಬರ್ ವರೆಗೆ ಅರಿಯರ್ ಕೂಡ ಸರ್ಕಾರ ಪಾವತಿಸಬೇಕಾಗಲಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!