ಚಿರತೆ ದಾಳಿ; ರೈತ ಗಂಭೀರ

ಚಿಕ್ಕನಾಯಕನಹಳ್ಳಿ: ತಾಲೂಕಿನ ರಾಮನಳ್ಳಿ ಗ್ರಾಮದ ಪುಟ್ಟಯ್ಯ (54) ಚಿರತೆದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ. ಮಧ್ಯಾಹ್ನ ಹೊಲದಲ್ಲಿ ಕೆಲಸ ಮಾಡುತಿದ್ದಾಗ ಚಿರತೆದಾಳಿ ನಡೆದಿದ್ದು, ಜನರ ಕೂಗಾಟದಿಂದ ಚಿರತೆ ಓಡಿಹೋಗಿದ್ದು, ಗಾಯಾಳು ಪುಟ್ಟಯ್ಯನಿಗೆ ಚಿಕ್ಕನಾಯಕನಹಳ್ಳಿ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಮಂಗಳವಾರ ಸಂಜೆ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

You May Also Like

error: Content is protected !!