ದೇಶದಲ್ಲೇ ಪ್ರಥಮ: ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಫೇಷಿಯಲ್ ರೆಕಾಗ್ನಿಷನ್ ವ್ಯವಸ್ಥೆ; 47 ಮಂದಿ ರೌಡಿ ಶೀಟರ್ ಗಳ ಪತ್ತೆ

ಬೆಂಗಳೂರು: ಐಟಿ ನಗರಿ ಎಂದೇ ಹೆಸರಾದ ಬೆಂಗಳೂರಿನ ಪ್ರಮುಖ ರೈಲುನಿಲ್ದಾಣವಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣದಲ್ಲಿ ಪೊಲೀಸರ ಕಾರ್ಯವನ್ನು ಫೇಷಿಯಲ್ ರೆಕಾಗ್ನಿಷನ್ ತಂತ್ರಜ್ಞಾನ ಮಾಡಿದೆ. 90 ದಿನಗಳ ಹಿಂದೆ ಫೇಷಿಯಲ್ ರೆಕಾಗ್ನಿಷನ್ ವ್ಯವಸ್ಥೆ ಅಳವಡಿಕೆಯಾದ ದಿನದಿಂದ ಇದುವರೆಗೂ 47 ಮಂದಿ ರೌಡಿ ಶೀಟರ್ ಗಳನ್ನು ರೈಲು ನಿಲ್ದಾಣದ ಆವರಣದಲ್ಲಿ ಪತ್ತೆ ಹಚ್ಚಲಾಗಿದೆ ಎನ್ನುವುದು ಗಮನಾರ್ಹ.

ಇದೇ ಮೊದಲ ಬಾರಿಗೆ ಫೇಷಿಯಲ್ ರೆಕಾಗ್ನಿಷನ್ ತಂತ್ರಜ್ಞಾನವನ್ನು(ಎಫ್ ಆರ್ ಎಸ್) ಅಳವಡಿಸಲಾಗಿದೆ. ದೇಶದಲ್ಲೇ ಎಫ್ ಆರ್ ಎಸ್ ತಂತ್ರಜ್ಞಾನವನ್ನು ಅಳವಡಿಸಿಕೊಂಡ ರೈಲು ನಿಲ್ದಾಣ ಹೊಂದಿರುವ ಮೊದಲ ರಾಜ್ಯ ಎನ್ನುವ ಖ್ಯಾತಿಗೆ ಕರ್ನಾಟಕ ಪಾತ್ರವಾಗಿದೆ.

ಇದೊಂದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವಾಗಿದ್ದು, ವ್ಯಕ್ತಿಯ ಮುಖದ ಆಕಾರ, ಲಕ್ಷಣಗಳನ್ನು ಆಧರಿಸಿ ಕಾರ್ಯಾಚರಿಸುತ್ತದೆ ಎಂದು ಸೌತ್ ವೆಸ್ಟ್ ರೈಲ್ವೇಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಾ ಅವರು ತಿಳಿಸಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!