ಭಾರತ್ ಬಂದ್‍ಗೆ ಕೊರಟಗೆರೆಯಲ್ಲಿ ಮಿಶ್ರಪ್ರತಿಕ್ರಿಯೆ.

ಕೊರಟಗೆರೆ ;- ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ
ನೀತಿಯ ವಿರುದ್ದ ಸಂಯುಕ್ತ ಕಿಸಾನ್ ಮೋರ್ಚಾ ಫೋಷಿಸಲಾಗಿದ್ದು ಭಾರತ್ ಬಂದ್ ಕೊರಟಗೆರೆ ಪಟ್ಟಣದಲ್ಲಿ ಮಿಶ್ರಪ್ರತಿಕ್ರಿಯೆ ವ್ಯೆಕ್ತವಾಗಿದ್ದು ಪಟ್ಟಣದಲ್ಲಿ ರಾಜ್ಯ ಸರ್ಕಾರಿ ಕಛೇರಿಗಳು, ಪೆಟ್ರೋಲ್ ಬಂಕ್‍ಗಳು, ತರಕಾರಿ ವಾರದ ಸಂತೆ,
ಹೋಟೆಲ್‍ಗಳು ಸೇರಿದಂತೆ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ
ಕಾರ್ಯನಿರ್ವಹಿಸಿದ್ದು ರೈತ ಸಂಘದ ಪದಾಧಿಕಾರಿಗಳು
ಪ್ರಧಾನ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಎಸ್‍ಎಸ್‍ಆರ್ ವೃತ್ತದಲ್ಲಿ
ಮಾನವ ಸರಪಳಿ ರಚಿಸಿ ಕೇಂದ್ರ ಸರ್ಕರದ ವಿರುದ್ದ ರೈತ
ಸಂಘದ ಮುಖಂಡರು ಟೀಕಾ ಪ್ರಹಾರ ಮಾಡಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ತಾಲೂಕು ರೈತ ಸಂಘ
ಹರಿಸು ಸೇನೆ ಅಧ್ಯಕ್ಷ ಸಿದ್ದರಾಜು ದೇಶದಲ್ಲಿ ರೈತಪರ ಆಡಳಿತ
ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಮತ್ತು
ರಾಜ್ಯ ಸರ್ಕಾರ ಆಡಳಿತಕ್ಕೆ ಬಂದ ನಂತರ ರೈತನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದು, ದೇಶದ ಅಸ್ತಿಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆ
ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ನಿರಂತರ
ಪ್ರತಿಭಟನೆಯಲ್ಲಿ ತೊಡಗಿರುವ ರೈತ ಮುಖಂಡರನ್ನು ಬೇಟಿ
ಮಾಡಿ ಬೇಡಿಕೆ ಈಡೇರಿಸುವ ಪ್ರಯತ್ನ ಕೊಡ ಕೇಂದ್ರ ಸರ್ಕಾರ
ಮಾಡುತ್ತಿಲ್ಲ ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ
ಹಲವು ರೀತಿಯಲ್ಲಿ ದೌರ್ಜನ್ಯಗಳನ್ನು ಮಾಡುತ್ತಿರುವ ಹಿನ್ನಲೆಯಲ್ಲಿ ಹಾಗೂ ಮಾರಕ ಕೃಷಿ ವಿರೋಧಿ ಕಾಯ್ದೆಗಳನ್ನು ವಾಸಪ್ ಪಡೆಯುವಂತೆ ಆಗ್ರಹಿಸಿದ ಅವರು ಕೊರಟಗೆರೆ ತಾಲೂಕು ಮತ್ತು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸರಿ ಹದ್ದಿನಲ್ಲಿ ನಿರ್ಮಾಣವಾಗುತ್ತಿರುವ ಎತ್ತಿನಹೊಳೆ ಯೋಜನೆಯ ಬಫ್ ಡ್ಯಾಂ ನಿರ್ಮಾಣಕ್ಕೆ ಮುಳುಗಡೆಯಾಗುತ್ತಿರುವ ರೈತರ ಜಮೀನುಗಳಿಗೆ ದೊಡ್ಡಬಳ್ಳಾಪುರ ಜಿಲ್ಲೆ ರೈತರಿಗೆ ಒಂದು ರೀತಿ,
ಕೊರಟಗೆರೆ ತಾಲೂಕಿನ ರೈತರಿಗೆ ಒಂದು ರೀತಿಯ ಬೆಲೆ ನಿಗಧಿ
ಪಡಿಸುವ ಮೂಲಕ ಅನ್ಯಾಯ ಮಾಡುತ್ತಿದ್ದಾರೆ, ಕೊರಟಗೆರೆ
ತಾಲೂಕಿನ ಏಳು ಗ್ರಾಮಗಳು ಮುಳುಗಡೆಯಾಗುತ್ತಿದೆ,
ಅದರೂ ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣ ಸದೇ
ರೈತರನ್ನು ಕಡೆಗಣಿಸಲಾಗುತ್ತಿದೆ ತಕ್ಷಣ ಸರ್ಕಾರ ರೈತ ಸಮಸ್ಯೆಗಳಿಗೆ ಸ್ಪಂದಿಸಿ ರೈತ ಕೃಷಿ ನೀತಿ ವಾಪಸ್ ಪಡೆಯಬೇಕು
ಎಂದು ಆಗ್ರಹಿಸಿದರು.
ರೈತ ಮುಖಂಡ ನಯಾಜ್‍ಅಹಮದ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸಂಘಗಳಿಂದ ದೇಶದ ರೈತರ ಕೃಷಿ ಮಾರಕ
ಕಾಯ್ದೆಗಳಿಂದ ಅನ್ಯಾಯವಾಗಿದ್ದು ತಕ್ಷಣ ಸರ್ಕಾರ ರೈತರ
ಬೇಡಿಕೆಗಳನ್ನು ವಾಪಸ್ ಪಡೆಯಬೇಕು ಹಾಗೂ ಕೊರಟಗೆರೆ
ತಾಲೂಕಿನ ಎಪಿಎಂಸಿ ಯನ್ನು ತುಮಕೂರು ಎಪಿಎಂಸಿಗೆ ವಿಲಿನ
ಮಾಡಿರುವುದನ್ನು ಖಂಡಿಸಿ ಜಿಲ್ಲಾ ಸಚಿವರು ಹಾಗೂ ಸಂಬಂದಿಸಿದ ಅಧಿಕಾರಿಗಳು ಮತ್ತೆ ಕೊರಟಗೆರೆ ಎಪಿಎಂಸಿ ಯನ್ನು ವಾಪಸ್ ನೀಡಬೇಕು ತಪ್ಪಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಉಪಾಧ್ಯಕ್ಷ ಪುಟ್ಟರಾಜು,
ಕಾರ್ಯದರ್ಶಿ ಪ್ರಸನ್ನಕುಮಾರ್, ಬಿಎಸ್‍ಪಿ ಪಕ್ಷದ ತಾಲೂಕು
ಅಧ್ಯಕ್ಷ ಅಗ್ರಹಾರನಾಗರಾಜು, ಲೋಕೇಶ್, ರವಿಕುಮಾರ್,
ಲಕ್ಷ್ಮನಾಯ್ಕ, ಕಾಂತೇಗೌಡ, ದಾಸಗಿರೀಯಪ್ಪ, ರಂಗಣ್ಣ,
ಮಲ್ಲೇಶಯ್ಯ, ಶಿವಾನಂದಯ್ಯ ಶಿವಣ್ಣ, ವೀರಣ್ಣ, ರುದ್ರೇಶ್‍ಗೌಡ
ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

You May Also Like

error: Content is protected !!