ತಾಯಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತೇನೆ ಎಂದವನನ್ನು ಕೊಂದ ಗುಬ್ಬಿಯ ಯುವಕ

ಗುಬ್ಬಿ: ಮಹಿಳೆಯೊಬ್ಬರ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳುವ ಕಾರಣಕ್ಕೆ ಒಲವು ವ್ಯಕ್ತಪಡಿಸಿದ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ತುಮಕೂರಿನ ಗುಬ್ಬಿ ತಾಲ್ಲೂಕು ಕಸಬಾ ಹೋಬಳಿ ಮುದಿಗೆರೆ ಗ್ರಾಮದ ವಾಸಿ ರಾಜಣ್ಣ(55 )ಕೊಲೆಯಾದ ವ್ಯಕ್ತಿಯಾಗಿದ್ದು, ಈತ ‘ನನಗೆ ನನ್ನ ಹೆಂಡತಿ ಇಲ್ಲ, ನಾನು ನಿನ್ನ ತಾಯಿಯ ಜೊತೆ ಸಂಬಂಧ ಇಟ್ಟುಕೊಳ್ಳುತ್ತೇನೆ ಸಹಕರಿಸು ಎಂದು ಆಕೆಯ ಮಗನ ಜೊತೆಯೇ ಕೇಳಿದ್ದು, ಇದರಿಂದ ರೊಚ್ಚಿಗೆದ್ದ ಮಹಿಳೆಯ ಮಗ ರಾಜಣ್ಣ ಎಂಬಾತನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಘಟನೆ ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯ ಮುದಿಗೆರೆ ಗ್ರಾಮದಲ್ಲಿ ಭಾನುವಾರ 10:00 ಗಂಟೆಯ ವೇಳೆಗೆ ನಡೆದಿದೆ.

ಘಟನೆಯ ವಿವರ:
ಗುಬ್ಬಿ ತಾಲ್ಲೂಕು ಕಸಬಾ ಹೋಬಳಿ ಮುದಿಗೆರೆ ಗ್ರಾಮದ ವಾಸಿ ರಾಜಣ್ಣ ಎಂಬಾತ ತನ್ನ ಕುಟುಂಬದ ಜೊತೆ ಜಗಳ ಮಾಡಿಕೊಂಡು ಕಳೆದ ಎರಡು ವರ್ಷಗಳಿಂದ ಹೆಂಡತಿಯಿಂದ ದೂರವಾಗಿ ಬೇರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಅದೇ ಗ್ರಾಮದ ವಾಸಿ ಮಹೇಶ್ ಎಂಬುವನ ಜೊತೆ ಭಾನುವಾರ ಸಂಜೆ 7:00 ಸಮಯದಲ್ಲಿ ಮದ್ಯ ಸೇವಿಸುವಾಗ ‘ಮಹೇಶ ನಾನು ನಿನ್ನ ತಾಯಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತೇನೆ. ನನಗೆ ಹೆಂಡತಿ ಇಲ್ಲ, ದಯವಿಟ್ಟು ನನಗೆ ಸಹಕರಿಸು’ ಎಂದು ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹೇಶ, ರಾಜಣ್ಣ ಜೊತೆ ಜಗಳಕ್ಕಿಳಿದಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಮರ ಕಡಿಯುವ ಮಚ್ಚಿನಿಂದ ಮಹೇಶ ರಾಜಣ್ಣನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

ಇದಲ್ಲದೇ, ಭಾನುವಾರ ಸಂಜೆ ನಾಲ್ಕು ಗಂಟೆಯ ವೇಳೆಗೆ ಮಹೇಶನ ಮನೆಗೆ ಹೋಗಿ ರಾಜಣ್ಣ ಕಾಫಿ ಮಾಡಿಸಿಕೊಂಡು ಬಂದಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾನಾ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಕುಮಾರಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!