ರೈತರ ಜಮೀನಿನ ಮೇಲೆ ಕೆಐಎಡಿಬಿ ಕಣ್ಣು; ಮೂರು ವರ್ಷಗಳಲ್ಲಿ 9,897ಎಕರೆ ಭೂಸ್ವಾಧೀನ!

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು ಇದಕ್ಕಾಗಿ ರೈತರ ಜಮೀನಿನ ಮೇಲೆ ಕೆಐಎಡಿಬಿ ಕಣ್ಣು ಬಿದ್ದಿದೆ. ಕೈಗಾರಿಕಾ ವಿಸ್ತರಣೆ ಕಾರಣಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ( ಕೆಐಎಡಿಬಿ) ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 9,897 ಎಕರೆ 27 ಗುಂಟೆ ಜಮೀನನ್ನು ರೈತರಿಂದ ಸ್ವಾಧೀನ ಪಡಿಸಿಕೊಂಡಿದೆ. ಈ ಪೈಕಿ ಕೈಗಾರಿಕಾ ಪ್ರದೇಶಕ್ಕಾಗಿ 5252 ಎಕರೆ 32 ಗುಂಟೆ ಹಾಗೂ ಏಕಘಟಕ ಸಂಕೀರ್ಣಕ್ಕೆ 4641 ಎಕರೆ 35 ಗುಂಟೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು?
ಬೆಂಗಳೂರು ನಗರ- 48 ಎಕರೆ 07 ಗಂಟೆ
ಬೆಂಗಳೂರು ಗ್ರಾಮಾಂತರ- 2123 ಎಕರೆ 22 ಗುಂಟೆ
ರಾಮನರ- 912 ಎಕರೆ 12 ಗುಂಟೆ
ಚಿಕ್ಕಬಳ್ಳಾಪುರ- 414-24
ಕೋಲಾರ- 321-25
ತುಮಕೂರು- 205-28
ದಾವಣಗೆರೆ- 378-28
ಬಳ್ಳಾರಿ- 235-34
ಮೈಸೂರು- 198-27
ಮಂಡ್ಯ- 123-39
ಹಾಸನ-197-28
ದಕ್ಷಿಣ ಕನ್ನಡ- 840-32
ಶಿವಮೊಗ್ಗ- 500-08
ಹಾವೇರಿ- 407.03
ಯಾದಗಿರಿ- 1159-01
ರಾಯಚೂರು- 1116-31
ಕೋವಿಡ್ ಬಳಿಕ ಕೈಗಾರಿಕಾ ಅಭಿವೃದ್ಧಿಗೆ ಮತ್ತಷ್ಟು ಒತ್ತು
ರಾಜ್ಯವನ್ನು ಹೂಡಿಕೆದಾರರ ನೆಚ್ಚಿನ ತಾಣವಾಗಿ ರೂಪಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಭೂ ಖರೀದಿಯನ್ನು ಸರಳಗೊಳಿಸಿದೆ. ಹೂಡಿಕೆದಾರರಿಗೆ ಎಲ್ಲ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ. ಕೃಷಿ ಉದ್ದೇಶಕ್ಕೆ ಭೂಮಿ ಹೊಂದಿರುವ ಮಾಲೀಕರು ಆ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತಿಸಲು ಇಚ್ಛಿಸುವವರಿಗೆ ಆನ್‍ಲೈನ್ ಮೂಲಕ ಸರಳ ವಿಧಾನಾ ಜಾರಿಗೆ ತರಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕತೆ ನೆಲಕಚ್ಚಿದ್ದು ಕೈಗಾರಿಕೆಗಳಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಲು ಉತ್ತೇಜನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನೂತನ ಕೈಗಾರಿಕಾ ನೀತಿ 2020-25 ಮೂಲಕ ಕರ್ನಾಟಕದಲ್ಲಿ ಕೈಗಾರಿಕಾ ಶಕ್ತಿಯನ್ನು ಬಳಸಿಕೊಂಡು, ಕೈಗಾರೀಕರಣಕ್ಕಾಗಿ ಪರಿಸರವನ್ನು ಶಕ್ತಗೊಳಿಸುವುದು, ಮೂಲಸೌಕರ್ಯಗಳ ಅಭಿವೃದ್ಧಿ, ರಾಜ್ಯದ ಜನರಿಗೆ ವಿಶೇಷವಾಗಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಹಾಗೂ ಟಯರ್-2 ಮತ್ತು ಟಯರ್-3 ನಗರಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸುವುದು ನಿರ್ಧಾರ ಮಾಡಲಾಗಿದೆ.

ಭೂಸ್ವಾಧೀನಕ್ಕೆ ರೈತರಿಂದಲೂ ವ್ಯಕ್ತವಾಗುತ್ತಿದೆ ವಿರೋಧ

ಕೈಗಾರಿಕಾ ಕಾರಣಕ್ಕಾಗಿ ಭೂಸ್ವಾಧೀನ ಮಾಡುವ ಕೆಐಎಡಿಬಿ ಕ್ರಮಕ್ಕೆ ರೈತರಿಂದ ನಿರಂತರ ವಿರೋಧಿಗಳು ವ್ಯಕ್ತವಾಗುತ್ತಲೇ ಇವೆ. ಎಂ ಆರ್ ಪಿ ಎಲ್ ಗಾಗಿ ಭೂಸ್ವಾಧೀನ ಪಡಿಸಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಮಂಗಳೂರಿನ ಕುತ್ತೆತ್ತೂರು ಪೆರ್ಮುದೆ ಭಾಗದ ರೈತರಿಂದ ವಿರೋಧ ವ್ಯಕ್ತವಾಗುತ್ತಿದೆ. ಇನ್ನು ಉದ್ದೇಶಿತ ಕೈಗಾರಿಕೆ ಉದ್ದಿಮೆಗಳ ಸ್ಥಾಪನೆಗೆಂದು ವಶಪಡಿಸಿಕೊಂಡಿದ್ದ ಭೂಮಿಯನ್ನ ಮರಳಿ ರೈತರಿಗೆ ಹಿಂತಿರುಗಿಸಬೇಕೆಂದು ಆಗ್ರಹಿಸಿ ಬಳ್ಳಾರಿಯಲ್ಲೂ ಜಿಲ್ಲೆಯ ರೈತರು ಪಾದಯಾತ್ರೆ ಮೆರವಣಿಗೆ ಕೈಗೊಂಡಿದ್ದರು.

ಕಳೆದ 11 ವರ್ಷ ಕಳೆದರೂ ಕೂಡ ಉದ್ದೇಶಿತ ಕೈಗಾರಿಕೆ ಉದ್ದಿಮೆಗಳ ಸ್ಥಾಪನೆಗೆ ಮುಂದಾಗದ ಕಾರಣ ರೈತರಿಂದ ವಶಪಡಿಸಿಕೊಂಡ ಭೂಮಿಯನ್ನ ಹಿಂತಿರುಗಿಸಬೇಕೆಂದು ಒತ್ತಾಯಿಸಿ ನಾನಾ ಕೈಗಾರಿಕೆಗಳಿಗೆ ಭೂಮಿ ನೀಡಿದ ಸಂತ್ರಸ್ತರು ನಗರದ ಅಲ್ಲೀಪುರ ತಾತನ‌ ಮಠದಿಂದ ಜಿಲ್ಲಾಧಿಕಾರಿ‌ ಕಚೇರಿವರೆಗೆ ಪಾದಯಾತ್ರೆ ಮೆರವಣಿಗೆ ನಡೆಸಿದ್ದದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!