ಹಿರೇಹಳ್ಳಿ ಟೋಲ್ ಗೇಟ್ ಸಿಬ್ಬಂದಿಯಿಂದ ವಾಹನ ಸವಾರರ ಮೇಲೆ ಗೂಂಡಾಗಿರಿ

ಚಿತ್ರದುರ್ಗ: ವಾಹನ ಸವಾರರ ಮೇಲೆ ಟೋಲ್ ಗೇಟ್ ಸಿಬ್ಬಂದಿ ಮನಬಂದಂತೆ ಹಲ್ಲೆ ನಡೆಸಿ ಗೂಂಡಾಗಿರಿ ಮಾಡಿರುವ ಕೃತ್ಯ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದ ಬಳಿ ನಡೆದಿದೆ.

ಚಳ್ಳಕೆರೆಯ ಯುವಕರಾದ ಶಿವರಾಜು ಹಾಗೂ ಗಣೇಶ್ ಓಮ್ನಿ ಕಾರಿನಲ್ಲಿ ತಮ್ಮ ಸ್ನೇಹಿತರ ಮನೆಗೆ ಊಟಕ್ಕೆಂದು ತೆರಳಿ, ವಾಪಾಸ್ ಚಳ್ಳಕೆರೆಗೆ ಬರುತ್ತಿದ್ದರು. ಈ ವೇಳೆ ಕಾರಿನ ಫಾಸ್ಟ್ ಟ್ಯಾಗ್ ಸ್ಕ್ಯಾನ್ ಆಗಲಿಲ್ಲ. ಆಗ ಹಣ ಕಟ್ಟುತ್ತೇವೆ ಹೀಗಾಗಿ ಸ್ಕ್ಯಾನರ್ ಮಿಷನ್ ತರುವಂತೆ ವಾಹನ ಸವಾರರು ಹೇಳಿದರು. ಆದ್ರೆ ಸ್ಕ್ಯಾನರ್ ತರದೇ ದಿಢೀರ್ ಎಂದು ಆಕ್ರೋಶಗೊಂಡಿರುವ ಟೋಲ್ ಗೇಟ್ ನಲ್ಲಿದ್ದ ಸಿಬ್ಬಂದಿ ವಾಹನ ಬಿಡುಗಡೆ ವಿಳಂಬ ಮಾಡಿದ್ದಲ್ಲದೇ, ವಾಹನ ಸವಾರರೊಂದಿಗೆ ಮಾತಿಗೆ ಮಾತು ಬೆಳೆಸಿ, ವಾಗ್ವಾದ ನಡೆಸಿದ್ದಾರೆ

ಪರಿಣಾಮ ಮಾತಿಗೆ ಮಾತು ಬೆಳೆದು ವಾಗ್ವಾದದಿಂದ ಆಕ್ರೋಶಗೊಂಡ ಟೋಲ್ ಗೇಟ್ ಸಿಬ್ಬಂದಿ ವಾಹನ ಸವಾರರ ಮೇಲೆ ಕುರ್ಚಿಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಟೋಲ್ ಗೇಟ್ ಸಿಬ್ಬಂದಿ ಹಲ್ಲೆ ನಡೆಸಿರೋ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ಈ ಘಟನೆಯಲ್ಲಿ ಚಳ್ಳಕೆರೆಯ ಶಿವರಾಜು, ರಾಜೇಶ್ ಗೆ ಗಾಯಗಳಾಗಿದ್ದೂ, ಗಾಯಾಳುಗಳು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!