ಸಮಗ್ರತೆ ಮತ್ತು ಐಕ್ಯತೆಯ ಮಾಹಾನಾಯಕ : ಲಾಲ್ ಬಹಾದ್ದೂರ್ ಶಾಸ್ತ್ರಿ

ಲಾಲ್‌ ಬಹಾದ್ದೂರ ಶಾಸ್ತ್ರಿ ಈ ದೇಶ ಕಂಡ ಸೌಮ್ಯ, ಸರಳ , ಸಜ್ಜನಿಕೆಯ ಧೀಮಂತ ರಾಜಕೀಯ ನೇತಾರರು . ಭಾರತ ದೇಶದ ಪ್ರಧಾನಿಯಾಗಿ ರಾಷ್ಟ್ರ ಕ್ಕೆ ನಿಜವಾಗಿ ಸಲ್ಲಬೇಕಾದ ಗೌರವವನ್ನು, ಸಲ್ಲಿಸಿ ಕೀರ್ತಿ ವಿಶ್ವದ ಮೂಲೆ ಮೂಲೆಗಳಿಗೂ ತಲುಪಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಭಾರತದ ಏಕೈಕ ಜನಪರ ನಿಸ್ವಾರ್ಥ ಸೇವಯ ಜನನಾಯಕ,ಮೌಲ್ಯ ಬದ್ಧ ರಾಜಕಾರಣಿ, ಪ್ರಾಮಾಣಿಕತೆಗೆ ಮತ್ತೊಂದು ಹೆಸರೆ ಲಾಲ್ ಬಹದ್ದೂರ್ ಶಾಸ್ತ್ರಿಜಿ. ಇವರ ಅಚಲ ನಿರ್ಧಾರ, ಅದಮ್ಯ ಅಭಿವೃದ್ಧಿ ಚೇತನ,ಸಮಯ ಪ್ರಜ್ಞೆ,ನುಡಿದಂತೆ – ನಡೆಯುವುದು, ಸತ್ಯ, ನ್ಯಾಯ, ಶ್ರದ್ಧೆ, ಸ್ವಾಭಿಮಾನದ ಹರಿಕಾರ, ಪ್ರೀತಿ – ಸ್ನೇಹದ ಮುಖಂಡ, ಜ್ಞಾನ – ಅರಿವು ಇವುಗಳಿಂದ ತುಂಬಿ ,ಅಧಿಕಾರದುದ್ದಕ್ಕೂ ಎದುರಾದ ಎಲ್ಲ ರಾಷ್ಟ್ರೀಯ, ರಾಜಕೀಯ ಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸಿ, ಸರ್ವರಿಂದಲೂ ಭೇಷ್ ಎನಿಸಿಕೊಂಡವರು. ದೇಶದ ಆರ್ಥಿಕ ಹಾಗೂ ಸಮಾಜಿಕ ಅಭಿವೃದ್ಧಿಯ ಮುನ್ನೆಡೆಗಾಗಿ ಶ್ರಮಿಸಿದವರು. ‘ಭಾರತದ ಸಮಗ್ರತೆ ಮತ್ತು ಐಕತಗೆ ಹಾಗೂ ರಾಷ್ಟ್ರ ಗೌರವ ಕಾಪಾಡಲು ಅವರ ಬದುಕಿನ ಕೊನೆ ಕ್ಷಣದ ವರೆಗೂ ಹೋರಾಡಿದ ಹೋರಾಟಗಾರ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ ಯವರು ಎಂದರೆ ತಪ್ಪಾಗಲಾರದು.


ಉತ್ತರ ಪ್ರದೇಶದ ರಾಜ್ಯದ ವಾರಾಣಸಿ ಸಮೀಪದ ಪುಟ್ಟ ಹಳ್ಳಿ ಮುಗಲ್ಸರಾಯಿಯಲ್ಲಿ ಅಕ್ಟೋಬರ್ 2, 1904ರಂದು ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಜನಿಸಿದರು. ಲಾಲ್ ಬಹಾದ್ದೂರ್ ಶಾಸ್ತ್ರಿಯವರ ತಂದೆ ಒಬ್ಬ ಶಾಲಾ ಶಿಕ್ಷಕರಾಗಿದ್ದರು ಮತ್ತು ಶಾಸ್ತ್ರಿಯವರು ಒಂದೂವರೆ ವರ್ಷದವರಾಗಿರುವಾಗಲೇ ಅವರ ತಂದೆ ತೀರಿಕೊಂಡರು. ಆಗ ಇಪ್ಪತ್ತು ವಯಸ್ಸಿನ ಅವರ ತಾಯಿ ತಮ್ಮ ಹದಿಮೂರು ಮಕ್ಕಳ ಜತೆ ತವರು ಮನೆ ಸೇರಿ ಅಲ್ಲೇ ಉಳಿದರು.
ಲಾಲ್ ಬಹಾದ್ದೂರ್ ಅವರ ಪುಟ್ಟ ಹಳ್ಳಿಯ ಶಿಕ್ಷಣ ಯಾವ ರೀತಿಯಲ್ಲೂ ಗಮನಾರ್ಹವಾಗಿಲಿಲ್ಲ ಎನ್ನುವುದು ಇಲ್ಲಿ ಉಲ್ಲೇಖ ಮಾಡುವುದು ಅವಶ್ಯಕತೆ ಇದೆ. ಕಿತ್ತು ತಿನ್ನುವ ಬಡತನವೊಂದನ್ನು ಬಿಟ್ಟರೆ ಅವರ ಬಾಲ್ಯ ಸಂತಸಮಯವಾಗಿತ್ತು. ಉರಿ ಬಿಸಿಲಲ್ಲಿ ಕಾದ ರಸ್ತೆ ಮೇಲೆ ಚಪ್ಪಲಿಗಳಿಲ್ಲದೆ ಮೈಲುಗಟ್ಟಲೆ ನಡೆದು ಲಾಲ್ ಬಹಾದ್ದೂರ್ ಶಾಲೆ ಹೋಗಿರುವುದು ನಾವು ಅವರ ಜೀವನದ ಕುರಿತು ತಿಳಿಯಲು ಸಾಧ್ಯ.ಹೀಗೆ ಲಾಲ್ ಬಹಾದ್ದೂರ್ ಕೇವಲ ಹನ್ನೊಂದು ವರುಷ ವಯಸ್ಸಿನವರಾಗಿದಾಗಲೇ ವಿದೇಶಿಯರ ಹಿಡಿತದಲ್ಲಿರುವ ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಹೆಚ್ಚು ಆಸಕ್ತಿ ಹೊಂದಿದರು. ಶಾಲೆ ಹತ್ತುವ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟದ ಕಳೆ ಅವರಲ್ಲಿ ಮೊಳಗಿತ್ತು.
ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಬೆಂಬಲಿಸಿದ ದೇಶದ ರಾಜರುಗಳ ವಿರುದ್ಧ ಮಹಾತ್ಮಾ ಗಾಂಧಿ ಅವರ ತತ್ತ್ವ ಮತ್ತು ಸಿದ್ದಾಂತ್ ದಿಂದ ಮನಸೋತು ಹೋದರು. ಮುಂದೆ ಗಾಂಧೀಜಿ ತನ್ನ ದೇಶದ ನಾಗರಿಕರನ್ನು ಅಸಹಕಾರ ಚಳುವಳಿಗೆ ಸೇರಲು ಕರೆ ನೀಡಿದ ಸಂದರ್ಭದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ಕೇವಲ ಹದಿನಾರು ವರುಷ ವಯಸ್ಸು. ಮಹಾತ್ಮಾ ಅವರ ಕರೆಗೆ ಪ್ರತಿಕ್ರಿಯೆಯಾಗಿ ತನ್ನ ಓದನ್ನು ಬಿಟ್ಟು ಚಳುವಳಿಗೆ ಸೇರಲು ಶಾಸ್ತ್ರಿ ನಿರ್ಧರಿಸಿದರು. ಅವರ ನಿರ್ಧಾರ ತಾಯಿಯ ನಿರೀಕ್ಷೆಗಳನ್ನು ನುಚ್ಚುನೂರಾಗಿಸಿತು.ತಾಯಿಯ ಆಸೆಗಳು ಕಮರಿದವು. ಈ ಎಲ್ಲ ನೋವುಗಳನ್ನು ತಾಳಿಕೊಂಡು,ಲಾಲ್ ಬಹಾದ್ದೂರ್ ರವರು ದೇಶದ ಸ್ವಾತಂತ್ರ್ಯ ಕ್ಕಾಗಿ ಧುಮುಕಿದರು. ಹೀಗಾಗಿ ಗಾಂಧಿಯವರ ಕೊಗಿಗೆ ಸ್ವಂದಿಸುವ ಮೂಲಕ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದರು.

ಹೋರಾಟದ ಹಾದಿ : ಲಾಲ್ ಬಹಾದ್ದೂರ್ ಶಾಸ್ತ್ರಿ ತಮ್ಮ ಅಗಾಧ ಜ್ಞಾನ – ಶಕ್ತಿಯೊಂದಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಪ್ರಯುಕ್ತ ಬ್ರಿಟಿಷ್ ರ ವಿರುದ್ಧ ಅನೇಕ ಹೋರಾಟಗಳು – ಆಂದೋಲನಗಳಲ್ಲಿ ಭಾಗಿಯಾಗುವ ಮೂಲಕ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಏಳು ವರುಷಗಳ ಕಾಲ ಬ್ರಿಟಷ್ ಹೀನಕೃತ್ಯದ ಕಾರಾಗೃಹದ ಸರೆವಾಸ ಅನುಭವಿಸಿದರು. ಹೋರಾಟದ ಕಿಚ್ಚಿನ ಉರಿಯಲ್ಲಿ ಬೆಂದರು ಶಾಸ್ತ್ರಿ ಯವರು. ಹೀಗೆ ಇವರ ಹತ್ತು ಹಲವು ಹೋರಾಟದ ಪ್ರತಿಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು.
ತದನಂತರ ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ, ಸೌಮ್ಯ ಮತ್ತು ನಿರ್ಗವಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ವಾತಂತ್ರ್ಯ ಹೋರಾಟದ ನಾಯಕರುಗಳಿಂದ ಅದಾಗಲೇ ಗುರುತಿಸಿಕೊಂಡಿದರು.
ಶಾಸ್ತ್ರಿ ಅವರನ್ನು ಅವರ ಸ್ಥಳಿಯ ರಾಜ್ಯ ಉತ್ತರ ಪ್ರದೇಶದ ಸಂಸದೀಯ ಕಾಯದರ್ಶಿಯಾಗಿ ನೇಮಿಸಲಾಯಿತು. ಇವರ ನಿಸ್ವಾರ್ಥ ಸೇವೆ ಪರಿಗಣಿಸಿ ಗೃಹ ಸಚಿವವನ್ನು ಹಿರಿಯ ನಾಯಕರು ಕರುಣಿಸಿದರು. ಇವರ ಸಾಮಥ್ರ್ಯ ಮತ್ತು ಕಠಿಣ ಪರಿಶ್ರಮ ಉತ್ತರ ಪ್ರದೇಶದಲ್ಲಿ ಮನೆಮಾತಾಯಿತು ಜೊತೆಗೆ ಪ್ರಸಿದ್ಧಯನ್ನು ಹೊಂದಿದರು. ಹೀಗೆ ಕೇಂದ್ರ ಮಂತ್ರಿಮಂಡಲದ ವಿವಿಧ ಖಾತೆಗಳಲ್ಲಿ ಅಧಿಕಾರ ವಹಿಸಿಕೊಂಡರು ಇವುಗಳಲ್ಲಿ ಪ್ರಮುಖವಾದವು ಎಂದರೆ – ರೈಲ್ವೆ , ಸಾರಿಗೆ ಮತ್ತು ಸಂಪರ್ಕ ಸಚಿವ, ವಾಣಿಜ್ಯ ಮತ್ತು ಕೈಗಾರಿಕಾ , ಗೃಹ ಖಾತೆ ಸಚಿವರಾಗಿ ಜನಪರ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಿದರು. ಇನ್ನು ನೆಹರು ಅವರ ಅನಾರೋಗ್ಯದ ಸಂದರ್ಭದಲ್ಲಿ ಖಾತೆಯಿಲ್ಲದೆ ಸಚಿವರಾಗಿದ್ದರು. ಶಾಸ್ತ್ರಿ ಅವರು ನಿರಂತರವಾಗಿ ಜನಪ್ರಿಯರಾಗುತ್ತಿದ್ದರು. ಹಲವಾರು ಜನರನ್ನು ಬಲಿ ತೆಗೆದುಕೊಂಡ ರೈಲ್ವೆ ಅಪಘಾತವೊಂದ್ಕಕೆ ತಾನು ಜವಾಬ್ಧಾರಿಯೆಂದು ಅನಿಸಿದ್ದರಿಂದ ಅವರು ತಮ್ಮ ರೈಲೆ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇಂತಹ ರಾಜಕೀಯ ನಾಯಕರು ಸೀಗುವುದು ವಿಶೇಷವಾಗಿ ಇಂದಿನ ದಿನಗಳಲ್ಲಿ ಸೀಗುವುದು ವಿರಳ ಎಂದೇ ಹೇಳಬಹುದು. ಇಮ್ಮವರ ಈ ನಿರ್ಧಾರ ಸಂಸತ್ತು ಮತ್ತು ಇಡೀ ರಾಷ್ಟ್ರದಲ್ಲೇ ಪ್ರಶಂಸೆಗೆ ಪಾತ್ರವಾಯಿತು. ಆಗಿನ ಪ್ರಧಾನಮಂತ್ರಿ ಶ್ರೀ ಜವಾಹರ್ ಲಾಲ್ ನೆಹರು ಘಟನೆಯ ಕುರಿತು ಸಂಸತ್ತಿನಲ್ಲಿ ಮಾತನಾಡುತ್ತಾ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಉನ್ನತ ಆದರ್ಶಗಳು ಮತ್ತು ದೃಢನಿಷ್ಠೆಯನ್ನು ಪ್ರಶಂಸಿಸಿದರು. ರಾಜಿನಾಮೆಯನ್ನು ಸ್ವೀಕರಿಸಿದ ನೆಹರು ಅವರು ತಾನು ಈ ರಾಜೀನಾಮೆಯನ್ನು ಸ್ವೀಕರಿಸುತ್ತಿರುವುದು ಏಕೆಂದರೆ ಈ ರಾಜೀನಾಮೆ ಸಾಂವಿಧಾನಿಕ ಔಚಿತ್ಯಕ್ಕೆ ಉದಾಹರಣೆಯಾಗಲಿದೆ ಎಂದು ವಿನಹಃ ಶಾಸ್ತ್ರಿ ಅವರು ಈ ಅವಘಢಕ್ಕೆ ಜವಾಬ್ಧಾರರೆಂದಲ್ಲ ಎಂದು ಆ ಸಂದರ್ಭದಲ್ಲಿ ಹೇಳಿದರು. ರೈಲು ದುರಂತದ ಕುರಿತು ನಡದ ದೀರ್ಘ ಚರ್ಚೆಗೆ ಪ್ರತಿಕ್ರಿಯಿಸಿದ ಶಾಸ್ತ್ರಿ ಅವರು ” ನಾನು ಗಾತ್ರದಲ್ಲಿ ಸಣ್ಣ ಮತ್ತು ಮೃದು ನಾಲಿಗೆ ಉಳ್ಳವನಾದುದರಿಂದ ಜನರು ನನಗೆ ಸ್ಥಿರವಾಗಿರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ದೈಹಿಕವಾಗಿ ನಾನು ಸದೃಢನಲ್ಲದಿದ್ದರೂ, ಆಂತರಿಕವಾಗಿ ಅಷ್ಟೊಂದು ನಿಶಕ್ತನಲ್ಲ ಅಂದೊಕೊಂಡಿದ್ದೇನೆ’. ಎಂದರು. 1964ರಲ್ಲಿ ಅಂದಿನ ಪಂಡಿತ್‌ ಜವಾಹರ್‌ಲಾಲ್‌ ನೆಹರೂರವರು ಹಠಾತ್‌ ನಿಧನಗೊಂಡಾಗ ಅವರ ಸ್ಥಾನ ತುಂಬುವುದು ಕಷ್ಟದ ಕೆಲಸವಾಗಿತ್ತು ಇಂತಹ ಸಂದರ್ಭದಲ್ಲಿ ಎಲ್ಲರ ಕಣ್ಣಿಗೆ ಬಿಂದವರು ಶಾಸ್ತ್ರಿ ಯವರು, ಶಾಸ್ತ್ರಿ ಯವರ ಸರಳ ವ್ಯಕ್ತಿತ್ವ ಹಾಗೂ ಅಧಿಕಾರ ಮೋಹ ಇಲ್ಲದ ಧಿಮಂತ ನಾಯಕ ಎಂಬುದು ಎಲ್ಲಾ ನಾಯಕರಿಗೊ ಗೊತ್ತೀದ ಸತ್ಯವಾಗಿತ್ತು.ಹಾಗಾಗಿ ಎಲ್ಲಾ ನಾಯಕರು ಇವರೆ ದೇಶದ ಪ್ರಧಾನಿ ಯಾಗಲಿ ಎಂದು ಆಶಿಸುವ ಮೂಲಕ ಅವರನ್ನು ಭಾರತದ ಪ್ರಧಾನಿಯಾನ್ನಾಗಿ ಮಾಡಿದರು. ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಆದರೆ ಅವರ ಪಾಲಿಗೆ ಅದು ಸಂಭ್ರಮದ ಕಾಲವಾಗಿರಲಿಲ್ಲ. ಬದಲಿಗೆ ವ್ಯಂಗ್ಯದ ನಗೆಬೀರುತ್ತಿದ್ದ ಸಾಲು ಸಾಲು ಸವಾಲು ಮತ್ತು ಸಮಸ್ಯೆಗಳು ಎದುರಿಸಬೇಕಾದ ಸಂಧರ್ಭ ಅದಾಗಿತ್ತು . ಕ್ಲಿಷ್ಟತೆಗಳಿಗೆ ಅವರು ಎಂದು ಧೃತಿಗೆಡಲಿಲ್ಲ. ಮೇಲ್ನೋಟಕ್ಕೆ ಅತಿ ಮೃದು ಧೋರಣೆಯ ವ್ಯಕ್ತಿಯಂತೆ ಕಾಣಿಸುತ್ತಿದ್ದ ಶಾಸ್ತ್ರಿಯವರು ಆಂತರ್ಯದಲ್ಲಿ ವಜ್ರ ಕಠಿಣವಾಗಿ ತಮ್ಮ ಜೀವವನ್ನು ರೂಪಿಸಿಕೊಂಡಿದ್ದರು.ಬಹುಶಃ ಭಾರತ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದು ದೇಶದ ಇತಿಹಾಸದ ಪುಟಗಳಲ್ಲಿ ಅಜರಾಮವಾಗಿದೆ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂಹತದ್ದು ಎಂದರೆ ತಪ್ಪಾಗಲಾರದು. ಇನ್ನು 1965ರಲ್ಲಿ ಪಾಕಿಸ್ತಾನ ವಿರುದ್ಧ ಯುದ್ಧ ನಡೆದಾಗ ಶಾಸ್ತ್ರಿ ಎದೆಗುಂದದೆ ದೇಶವನ್ನು ಮುನ್ನಡೆಸಿದರು. ಸೇನಾ ಪಡೆಗಳು ಎದುರಾಳಿಗಳನ್ನು ಮಟ್ಟ ಹಾಕಿದರು. ಆಗಲೇ ಶಾಸ್ತ್ರಿ ಹೇಳಿದ್ದು, ಜೈ ಜವಾನ್‌ ಜೈ ಕಿಸಾನ್‌ ಎಂಬ ಘೋಷ ವಾಕ್ಯವನ್ನು ಮತ್ತು ರೈತರು – ಸೈನಿಕರು ಈ ದೇಶದ ಆಸ್ತಿ ಅಲ್ಲದೆ ನನ್ನ ಎರಡು ಕಣ್ಣುಗಳಂತೆ ಅಂತಾ ಘಂಟಾ ಘೋಶವಾಗಿ ಘೋಷಣೆ ಮಾಡಿದರು. ಈ ದೇಶಕ್ಕೆ ಮೂವತ್ತು ವರುಷಗಳ ಕಾಲ ಸಮರ್ಪಣಾ ಸೇವೆಯನ್ನು ಸಲ್ಲಿಸುವ ಮೂಲಕ ದೇಶ ಸೇರಿ ವಿಶ್ವಕ್ಕೆ ಮಾದರಿ ಜೊತೆಗೆ ಪ್ರೇರಣೆಯಾದರು.ಶಾಸ್ತ್ರಿಯವರ ಪ್ರಮಾಣಿಕ ಸೇವೆ ಮತ್ತು ಅತ್ಯಂತ ಸಾಮಥ್ರ್ಯವಿರುವ ವ್ಯಕ್ತಿಯಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಶಾಸ್ತ್ರಿ ಅವರು ವಿನಮ್ರತೆ, ಸಹಿಷ್ಣುತೆ, ಮಹಾನ್ ಆಂತರಿಕ ಶಕ್ತಿಯುಳ್ಳ ಮತ್ತು ದೃಢನಿಶ್ಚಯವುಳ್ಳ, ಜನರ ಭಾಷೆಯನ್ನು ಅರ್ಥೈಸಿಕೊಂಡ ಜನಸಾಮಾನ್ಯರ ವ್ಯಕ್ತಿಯಾದರು. ಪ್ರಗತಿಯೆಡೆಗೆ ರಾಷ್ಟ್ರವನ್ನು ಮುನ್ನಡೆಸಿದ ಕೀರ್ತಿ ಇವರದು ಅಲ್ಲದೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ದೂರದೃಷ್ಠಿಯುಳ್ಳ ವ್ಯಕ್ತಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರಾಗಿ ನಮ್ಮೆಲ್ಲರ ಪ್ರೇರಣದಾಯಕರಾಗಿದಾರೆ.

ಶಾಸ್ತ್ರಿ ಯವರಿಗೆ ಸಂಧ ಪ್ರಶಸ್ತಿ – ಗೌರವ:
೧೯೨೬ ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾಪೀಠದಿಂದ ಕೊಡಲ್ಪಟ್ಟಿತು. ಹಾಗೂ ಇವರ ಮರಣಾನಂತರ ಭಾರತ ರತ್ನ
ಪ್ರಧಾನ ಮಾಡಲಾಯಿತು ಅಲ್ಲದೆ ಇವರ ಸ್ಮರಣೆಗೆ ದೆಹಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಇವರ ಜನಪ್ರಿಯ ವಾಕ್ಯ ಜೈ ಜವಾನ್, ಜೈ ಕಿಸಾನ್ ಇಂದಿಗೂ ಚಿರವಾಗಿ ಉಳಿದಿದೆ.

ಕೊನೆಯ ಮಾತು : ಗಾಂಧಿಜಿ ಹುಟ್ಟಿದ ದಿನವೇ ಲಾಲ್ ಬಹದ್ದೂರ್ ಶಾಸ್ತ್ರಿ ಯವರು ಹುಟ್ಟಿದ ದಿನ ಬಂಧುಗಳೆ, ಹಾಗಾಗಿ ಅವರನ್ನು ಸ್ಮರಣೆ ಮಾಡುವುದು ಯಾರು ಮರೆಯಬೇಡಿ, ಅವರ ಆದರ್ಶ ನಿಲುವುಗಳನ್ನು ದೇಶಕ್ಕೆ ತಿಳಿಸುವಂತಹ ಕೆಲಸ ನಮ್ಮಿಂದ ಆಗಲಿ , ಗಾಂಧೀಜಿ ಯವರು ಹೇಳುತಿದ್ದ ಆದರ್ಶಗಳನ್ನು ವಾಸ್ತವಕ್ಕೆ ತರುತಿದ್ದ ಶಾಸ್ತ್ರಿಗಳ ಜೀವನ ನಮ್ಮಗೆಲ್ಲರಿಗೊ ಮಾದರಿಯಾಗಲೆಂದು ಆಶಿಸುತ್ತೇವೆ. ಶಾಸ್ತ್ರಿಯವರ ಕನಸಿನಂತೆ ಭ್ರಷ್ಟಾಚಾರ,ಕಂಧಾಚಾರ ಮತ್ತು ಮೂಡನಂಬಿಕೆಗಳಿಗೆ ಕಡಿವಾಣ ಹಾಕಿ, ಭವ್ಯ ಭಾರತದ ನಿರ್ಮಾಣಕ್ಕೆ ಸಹಕಾರಿಯಾಗೋಣ, ಕಾಯಕಜೀವಿಗಳಾಗಿ ಬಾಳೋಣ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!