ಮೊಬೈಲ್‌ನಲ್ಲೇ ರೇಷನ್ ಕಾರ್ಡ್‌ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಹೇಗೆ?

ನಿಮ್ಮ ರೇಷನ್ ಕಾರ್ಡ್‌ಗೆ ಕುಟುಂಬದ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡಿಸಬೇಕಾದ ಸಂದರ್ಭ ಬಂದಿದೆಯಾ ಅಥವಾ ಹೆಸರು ತಿದ್ದುಪಡಿ ಮಾಡಬೇಕಾಗಿದೆಯಾ?. ಚಿಂತಿಸಸಬೇಡಿ. ನೀವು ಇದೀಗ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಮೂಲಕವೇ ಈ ಎರಡೂ ಕಾರ್ಯಗಳನ್ನು ಸುಲಭವಾಗಿ ನೆರವೇರಿಸಬಹುದಾಗಿದೆ. ಯಾವುದೇ ಕಚೇರಿಗಳಿಗೆ ಅಲೆದಾಡದೇ ಆನ್‌ಲೈನ್ ಸಹಾಯದಿಂದ ನಿಮ್ಮ ಮನೆಯಲ್ಲೇ ಕುಳಿತು ರೇಷನ್ ಕಾರ್ಡ್‌ಗೆ ಕುಟುಂಬದ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಬಹುದು ಹಾಗೂ ಹೆಸರು ತಿದ್ದುಪಡಿ ಮಾಡಬಹುದು.

ಹೌದು, ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿ ಇಲ್ಲದಿದ್ದರೆ ಆಗುವಂತಹ ಸಮಸ್ಯೆಗಳು ಹೆಚ್ಚು ಎಂದೇ ಹೇಳಬಹುದು. ಸರ್ಕಾರದಿಂದ ಪೂರೈಕೆ ಆಗುವ ಆಹಾರ ಧಾನ್ಯಗಳನ್ನು ಪಡೆಯಲು ಮಾತ್ರವಲ್ಲದೇ, ಗುರುತಿನ ಪತ್ರವಾಗಿ, ಸರ್ಕಾರದ ಯೋಜನೆಗಳಿಗಾಗಿ, ವಿಮೆ ಸೌಲಭ್ಯಗಳಿಗಾಗಿ ಪಡಿತರ ಚೀಟಿ ಅತ್ಯಗತ್ಯವಾಗಿದೆ. ಆದರೆ, ಪಡಿತರ ಚೀಟಿಯಲ್ಲಿ ಕೆಲವೊಮ್ಮೆ ಹೆಸರು ತಪ್ಪಾಗಿ ಈ ಸೇವೆಗಳಿಗೆ ಅಲಭ್ಯವಾಗಿರಬಹುದು ಹಾಗೂ ಕುಟುಂಬದ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡಿಸದೇ ದಾಖಲಾತಿ ಇಲ್ಲದಂತಾಗಿ ಹಲವು ಯೋಜನೆಗಳಿಂದ ವಂಚಿತವಾಗಬಹುದು.

ಈ ಎರಡೂ ಕಾರ್ಯಗಳು ಅತ್ಯಗತ್ಯವಾಗಿರುವುದರಿಂದ, ನಾವಿಂದು ರೇಷನ್ ಕಾರ್ಡ್‌ಗೆ ಕುಟುಂಬದ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡಿಸುವುದು ಹಾಗೂ ಹೆಸರನ್ನು ತಿದ್ದುಪಡಿ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ. ಇದಕ್ಕಾಗಿ, ನೀವು ನಿಮ್ಮ ಪಡಿತರ ಚೀಟಿಯ ಮೂಲ ದಾಖಲೆ ಮತ್ತು ಮಗುವಿನ ಜನನ ಪ್ರಮಾಣಪತ್ರ ಜೊತೆಗೆ ಮಗುವಿನ ಪೋಷಕರ ಆಧಾರ್ ಕಾರ್ಡ್‌ ಅನ್ನು ಹೊಂದಿರಬೇಗುತ್ತದೆ. ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವಾಗ ಆ ಮಹಿಳೆಯ ಆಧಾರ್ ಮತ್ತು ಗಂಡನ ಮನೆಯ ಪಡಿತರ ಚೀಟಿ ಪ್ರತಿಯನ್ನು ನೀಡಬೇಕಾಗುತ್ತದೆ.

ಈ ಎರಡು ದಾಖಲೆಗಳು ಇದ್ದರೆ ನೀವು ಆನ್‌ಲೈನ್ ಮುಖಾಂತರ ರೇಷನ್ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಸೇರಿಸಬಹುದು. ಇದಕ್ಕಾಗಿ, ನೀವು https://ahara.kar.nic.in/home ಅಧಿಕೃತ ವೆಬ್ ಸೈಟ್ ಗೆ ಲಾಗ್‌ ಇನ್ ಆಗಿ. ಲಾಗ್‌ಇನ್‌ ಮಾಡಿದ ನಂತರ ಮುಖ್ಯ ಪುಟದಲ್ಲಿ ಇ-ಸೇವೆಗಳನ್ನು ಆಯ್ಕೆ ಮಾಡಿ. ಅಲ್ಲಿ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಿ. ಹೊಸ ಪೇಜ್ ತೆರೆಯುತ್ತದೆ. ಅಲ್ಲಿನ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ನಂತರ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ.

ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿದ ನಂತರ ಅಪ್‌ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್‌ಮೀಟ್ ಮಾಡಿ. ತಡೆಯಿರಿ. ಕೆಲಸ ಇಲ್ಲಿಗೆ ನಿಲ್ಲುವುದಿಲ್ಲ. ನೀವು ಫಾರ್ಮ್ ಅನ್ನು ಸಬ್‌ಮಿಟ್ ಮಾಡಿದ ನಂತರ ನೋಂದಣಿ ಸಂಖ್ಯೆ ಸಿಗುತ್ತದೆ. ಆ ನೋಂದಣಿ ಸಂಖ್ಯೆ ಮೂಲಕ ವೆಬ್‌ಸೈಟ್ ಗೆ ಲಾಗ್‌ಇನ್‌ ಆಗಬಹುದು ಹಾಗೂ ಫಾರ್ಮ್ ಅನ್ನು ಟ್ರ್ಯಾಕ್ ಮಾಡಬಹುದು. ಅರ್ಜಿ ಸಲ್ಲಿಸುವ ವೇಳೆ ನೀವು ನೀಡಿರುವಂತಹ ಎಲ್ಲ ದಾಖಲಾತಿಗಳು ಸರಿಯಾಗಿದ್ದರೆ, ನಿಮ್ಮ ಮನೆಗೆ ಅಪ್‌ಡೇಟ್ ಆಗಿರುವ ಹೊಸ ಪಡಿತರ ಚೀಟಿಯನ್ನೂ ಕಳಿಸಲಾಗುತ್ತದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!