ಈ ಸಂಜೆ ಪತ್ರಿಕೆಯ ತುಮಕೂರು ಜಿಲ್ಲಾ ವರದಿಗಾರ ಚೇಳೂರು ಕುಮಾರ್ ನಿಧನ

ತುಮಕೂರು: ಈ ಸಂಜೆ ಪತ್ರಿಕೆ ತುಮಕೂರು ಜಿಲ್ಲಾ ವರದಿಗಾರ ಚೇಳೂರು ಕುಮಾರ್ ತಡ ರಾತ್ರಿ ನಿಧನರಾಗಿದ್ದರೆ, ಕುಮಾರ್ ಚೇಳೂರಿನ ತಮ್ಮ ಸ್ವಗೃಹದಲ್ಲಿ ರಾತ್ರಿ ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳುವ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, 108 ಅಂಬ್ಯುಲೇನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಸಹೋದರ ಶಿವಣ್ಣ ತಿಳಿಸಿದ್ದಾರೆ.
ಈ ಹಿಂದೆ ಕುಮಾರ್ ಹೃದಯ ಸಂಬಂಧಿತ ಖಾಯಿಲೆಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ. ತುಮಕೂರು ಜಿಲ್ಲೆ ಯ ಪತ್ರಕರ್ತರು ಹಾಗೂ ಪ್ರಜಾಮನ ಪತ್ರಿಕಾ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!