ಕೊರಟಗೆರೆ ಬ್ರೇಕಿಂಗ್ ನ್ಯೂಸ್:ಅಕ್ರಮವಾಗಿ ಬೆಳೆದ ಗಾಂಜಾ ವಶ

ಪಟ್ಟಣದ 5ನೇ ವಾರ್ಡಿನಲ್ಲಿ ವಾಸವಾಗಿದ್ದ ಹನುಮಂತರಾಯಪ್ಪ ಬಿನ್ ನಾಗರಾಜು ಸುಮಾರು 52 ವರ್ಷದ ವ್ಯಕ್ತಿ ಅಕ್ರಮವಾಗಿ ಮನೆಯ ಹಿಂಭಾಗದ ಹಿತ್ತಲಲ್ಲಿ ಬೆಳೆದಿದ್ದ ಗಾಂಜಾವನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಿರುವ ಕೊರಟಗೆರೆ ಪೊಲೀಸ್ ಅಧಿಕಾರಿಗಳು .

ಖಚಿತ ಮಾಹಿತಿ ಮೇರೆಗೆ ಪಟ್ಟಣದ ೫ನೇ ವಾರ್ಡನ ನಿವಾಸಿ ಹನುಮಂತರಾಯಪ್ಪನನ್ನು ಬಂಧಿಸಿ ಆತನ ಬಳಿಯಿದ್ದ ಸುಮಾರು 6ಕೆಜಿ 9೦೦ ಗ್ರಾಂಗಳಷ್ಟು ಹಸಿ ಹಾಗೂ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆತನು ಬೆಳೆದ ಗಾಂಜಾವನ್ನು ಸ್ಥಳೀಯ ತನ್ನ ಏರಿಯಾದ ಯುವಕರಿಗೆ ಮಾರಾಟ ಮಾಡುತ್ತಿದ್ದ ಎಂಬ ಸುದ್ದಿಯನ್ನು ಕೇಳಿ ಸ್ಥಳೀಯರು ಪೋಷಕರು ಅಚ್ಚರಿ ವ್ಯಕ್ತಪಡಿಸಿದರು.

ಪೊಲೀಸರ ಕಾರ್ಯಾಚರಣೆಯನ್ನು ಮೆಚ್ಚಿ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದರು.

ದಾಳಿ ವೇಳೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಸಿದ್ಧರಾಮೇಶ್ವರ್ ,ಸಬ್ ಇನ್ಸ್ ಪೆಕ್ಟರ್ ನಾಗರಾಜು ,ಎ.ಎಸ್.ಐ ಯೋಗೇಶ್,ಹೆಡ್ ಕಾನ್ ಸ್ಟೆಬಲ್ ನಾರಾಯಣ್ , ಗಂಗಾಧರ್ ,ಕಾನ್ ಸ್ಟೆಬಲ್ ಗಳಾದ ಧರ್ಮಪಾಲ್, ರಂಗನಾಥ್ ,ಮತ್ತು ವಾಹನದ ಚಾಲಕರು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು .

ವರದಿ :-ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ

You May Also Like

error: Content is protected !!