ನಾವು ಕೂಡ ಹಿಂದುಗಳೇ, ಆದರೆ ಹಿಂದುತ್ವ ಮೊದಲ ಅಜೆಂಡಾ ಅಲ್ಲ: RSSಗೆ ತಿರುಗೇಟು ನೀಡಿದ HDK

ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ RSS ವಿರುದ್ಧ ಕಿಡಿಕಾರಿದರು. ಬಿಜೆಪಿಯವರು RSSನ‌ ಕೇಂದ್ರ ಬಿಂದುವಾಗಿ ಇಟ್ಟುಕೊಂಡು ಕೆಲಸ ಮಾಡ್ತಾ ಇದ್ದಾರೆ. ಮೋದಿಯವರು ಕೂಡ RSSನ ಕೀಲುಗೊಂಬೆಯಾಗಿ ಕೆಲಸ ಮಾಡ್ತಾ ಇದ್ದಾರೆ. ಆಡಳಿತವನ್ನು RSS ಮಾಡ್ತಾ ಇದೆ ಬಿಜೆಪಿಯಲ್ಲ ಎಂದು ಗಂಭೀರ ಆರೋಪ ಮಾಡಿದರು. ಈ ದೇಶದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡ್ತಾ ಇದ್ದಾರೆ. RSSಗೆ ಸಂಬಂಧ ಪಟ್ಟ ಪುಸ್ತಕ ಓದುತ್ತಿದ್ದೇನೆ. 1990ರಲ್ಲಿ ಬೆಳವಣಿಗೆ ಪ್ರಾರಂಭವಾಯ್ತು, ಅಡ್ವಾಣಿ ಬಿಜೆಪಿ ಪಕ್ಷ ಕಟ್ಟುವ ಸಮಯ ಅದು. ಜಿನ್ನಾ ಅವರ ಬಗ್ಗೆ ಮಾತನಾಡಿದ್ದರಂತೆ, ಆಗ ಅಡ್ವಾನಿ ಅವರಿಗೆ ಒಂದು ಮೆಸೇಜ್ ಹೋಗುತ್ತೆ. ಅಲ್ಲಿಂದ ಬಂದ ನಂತರ ನೀವು RSS ಕಚೇರಿಗೆ ಬನ್ನಿ ಅಂತ. ಹೀಗೆ ಆ ಬಗ್ಗೆ ಓದ್ತಾ ಇದ್ರೆ ಅವರ ಹಿಡನ್ ಅಜೆಂಡಾ ಗೊತ್ತಾಗುತ್ತಿದೆ ಎಂದರು.

RSS ಪುಸ್ತಕದಲ್ಲಿ ಅವರ ಅಜೆಂಡ್​​ ಗೊತ್ತಾಗುತ್ತೆ

ಆರೇಳು ತಿಂಗಳಿಂದ ಪುಸ್ತಕವನ್ನು ಓದ್ತಾ ಇದ್ದೇನೆ. ಇವತ್ತು ಈ ನಾಡಿನಲ್ಲಿ ಯುವಕರು ಬುದ್ದಿವಂತರಾಗದೇ ಇದ್ದರೆ ಕಷ್ಟವಾಗಲಿದೆ.ವಾಸ್ತವಾಂಶದ ಅರಿವು ಬಂದ ಮೇಲೂ ಅದರ ಬಗ್ಗೆ ಜನತೆಯ ಮುಂದೆ ಇಡದೇ ಇದ್ದರೆ ಜನರಿಗೆ ಮಾಡುವ ದ್ರೋಹ ಅದು. ಕರ್ನಾಟಕದಲ್ಲಿ ಸರ್ವಧರ್ಮ ರಕ್ಷಣೆ ಮಾಡುವ ಸರ್ಕಾರ ತರಬೇಕು. ಮೂಲಭೂತ ಹಕ್ಕುಗಳು ಪ್ರತಿ ಕುಟುಂಬಕ್ಕೆ ಕೊಡಬೇಕಾಗಿದೆ. ದೇಶದ ಬಡತನದ ಬಗ್ಗೆ, ಸಮಸ್ಯೆಗಳ ಬಗ್ಗೆ RSS ಅವರ ಸಂಘದಲ್ಲಿ ಚರ್ಚೆ ಆಗಿಲ್ಲ. ದೇಶವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಒಂದೇ ಅವರ ಅಜೆಂಡಾ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಾವು ಕೂಡ ಹಿಂದುಗಳೇ, ಹಿಂದುತ್ವ ಮೊದಲ ಅಜೆಂಡಾ ಅಲ್ಲ

ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಹರಿಸಿದ ಘಟನೆ ಬಗ್ಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಯಾಕೆ ಈ ಘಟನೆ ನಡೆಯಿತು. RSS ಸಂಘಟನೆಯಿಂದ ಬಿಜೆಪಿ ಸರ್ಕಾರ ರಚಿಸಿದ್ದಾರೆ, ಇಲ್ಲಿರುವುದು RSS ಸರ್ಕಾರ. ಮನುಸ್ಮೃತಿ ಯುಗಕ್ಕೆ ತೆಗೆದುಕೊಂಡು ಹೋಗುವುದೇ RSS ಅಜೆಂಡಾ. ನಾವು ಕೂಡ ಹಿಂದುಗಳೇ, ಹಿಂದುತ್ವ ಮೊದಲ ಅಜೆಂಡಾ ಅಲ್ಲ. ಮೊದಲು ದುಡಿಯುವ ಕೈಗೆ ದುಡಿಮೆ ಕೊಡಿ. ಸರ್ಕಾರ ಈ ರಾಜ್ಯದ ದೇಶದ ಬಡವರ ಬಗ್ಗೆ ಗಮನ ಹರಿಸಿ.

ಒಬ್ಬ ರೈತನನ್ನು ಕರೆದು ಮೋದಿ ಚರ್ಚೆ ಮಾಡಿಲ್ಲ

ರೈತರ ಬಗ್ಗೆ ಗೌರವ ಇದ್ದರೆ ಕಾರು ಹತ್ತಿಸಿದವನನ್ನು ಅರೆಸ್ಟ್ ಮಾಡಬೇಕಿತ್ತು. ಯಾಕೆ ರಕ್ಷಣೆ ಕೊಟ್ಟಿದ್ದೀರಾ..? ಸಾಮಾನ್ಯರು ಈ ಕೆಲಸ ಮಾಡಿದ್ದರೆ ತಕ್ಷಣ ಅರೆಸ್ಟ್ ಮಾಡುತ್ತಿದ್ದರು. ಸಿಎಂ ಆದಿತ್ಯನಾಥ್ ಬಂದ ಮೇಲೆ ಶಾಂತಿಯುತ ಆಗಿದೆ ಉತ್ತರ ಪ್ರದೇಶ ಅಂತಾರೆ. ಇದೇನಾ ಶಾಂತಿಯುತ ಉತ್ತರ ಪ್ರದೇಶ? ಅಧಿಕಾರಕ್ಕೆ ಅಮಾಯಕರನ್ನು ಬಲಿ ಪಡೆಯುವುದು, ರಕ್ತದೋಕುಳಿ ಮಾಡ್ತಾ ಇದ್ದೀರಾ..? ಎಷ್ಟು ದಿನ ಈ ಕೆಲಸ..? ಒಬ್ಬ ರೈತನನ್ನು ಕರೆದು ಚರ್ಚೆ ಮಾಡಿಲ್ಲ ಮೋದಿಯವರು, ಕರೆದು ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತೆ. ಆದರೆ ಆ ಕೆಲಸ ಯಾಕೆ ಮಾಡಿಲ್ಲ, ಇಲ್ಲಿನ ಸಿಎಂ ಹೇಳ್ತಾರೆ ರೈತರ ಹೋರಾಟ ಸ್ಪಾನ್ಸರ್ ಅಂತ. ಇವರು ಹೇಗೆ ಬಂದಿದ್ದು ಹೋರಾಟದಿಂದಲೇ ಅಲ್ವಾ..? ಕಾಂಗ್ರೆಸ್ ಸರಿಯಾಗಿದ್ದಿದ್ದರೆ ಈ ದೇಶ ಹೀಗೆ ಇರ್ತಾ ಇರಲಿಲ್ಲ. ಅವರ ಸ್ವೇಚ್ಛಾವರ್ತನೆಯೇ ಇಂತಹ ವಾತಾವರಣ ನಿರ್ಮಾಣ ಆಗಿರೋದು. ಸುದೀರ್ಘ ಅಧಿಕಾರ ಇದ್ದಾಗ ಯಾವ ರೀತಿ ನಡೆದುಕೊಂಡರು ಗೊತ್ತಿದೆ ಎಂದು ಕುಟುಕಿದರು.

ಎರಡು ರಾಷ್ಟ್ರೀಯ ಪಕ್ಷಗಳಿಂದ ಏನೂ ನಡೆಯಲ್ಲ

ಕಾಂಗ್ರೆಸ್ – ಬಿಜೆಪಿ ನಾಯಕರಿಗೆ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟರು. ಇವರು ಕೊಡುವ ಡೆಡ್ ಲೈನ್ ಯಾವುದೂ ನಡೆಯಲ್ಲ. ಎರಡು ರಾಷ್ಟ್ರೀಯ ಪಕ್ಷಗಳಿಂದ ಏನೂ ನಡೆಯಲ್ಲ, ಇದಕ್ಕೆ ಉತ್ತರ ಜೆಡಿಎಸ್ ಪಕ್ಷ. ಜನತಾದಳಕ್ಕೆ ಮಾತ್ರ ನೀರಾವರಿ ಯೋಜನೆ ಜಾರಿಗೆ ತರಲು ಸಾಧ್ಯ. ಕಾಂಗ್ರೆಸ್ ನಡೆ ಕೃಷ್ಣ ಕಡೆಗೆ ಅಂದರು, ಎಲ್ಲಿ ಬಂದಿದೆ, ಅಧಿಕಾರ ಹಿಡಿಯಲು ಮಾತ್ರ ಇವೆಲ್ಲಾ. ಎತ್ತಿನ ಹೊಳೆ ಎಲ್ಲಿ ಬಂತು. 14 ಸಾವಿರ ಕೋಟಿ ಖರ್ಚು ಅಂತಾರೆ ಸಿದ್ದಾರಾಮಯ್ಯ. ಹಣ ಕೊಟ್ಟಿದ್ದು ಈ ಸಿದ್ದರಾಮಯ್ಯ ಅಂತಾರೆ, ಏನಾಯ್ತು ಆ ಕಥೆ ಎಂದು ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!