ಎಚ್‌ಡಿ ದೇವೇಗೌಡರಿಗೆ ಜೆಡಿಎಸ್‌ ಕಾರ್ಯಕರ್ತರಿಂದ ಕುರಿ ಗಿಫ್ಟ್‌..!

ರಾಮನಗರ: ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ತೋಟದ ಮನೆ ಕಳೆದೊಂದು ವಾರದಿಂದ ರಾಜಕೀಯವಾಗಿ ಭಾರೀ ಗಮನಸೆಳೆಯುತ್ತಿದೆ. ಮಿಷನ್‌ 123ರ ಅಡಿಯಲ್ಲಿ ಸಾಲು ಸಾಲು ಕಾರ್ಯಗಾರಗಳನ್ನು ಜೆಡಿಎಸ್‌ ನಾಯಕರು ಕೈಗೊಂಡಿದ್ದು, ಕಾರ್ಯಕರ್ತರಿಗೆ ಭರ್ಜರಿ ತರಬೇತಿ ನೀಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಕಾರ್ಯಕರ್ತರು ನಾಯಕರ ಮೇಲಿನ ತಮ್ಮ ಪ್ರೀತಿಯನ್ನು ವಿವಿಧ ರೂಪದಲ್ಲಿ ತೋರಿಸುತ್ತಿದ್ದು, ಮಂಗಳವಾರ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಕುರಿಗಳನ್ನು ಉಡುಗೋರೆಯಾಗಿ ನೀಡಿದ್ದಾರೆ. ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ತಾಲೂಕಿನ ಕಾರ್ಯಕರ್ತರು ಕಂಬಳಿ ಹೊದ್ದು ಬಂದು ಸುಮಾರು 10 ಕ್ಕೂ ಹೆಚ್ಚು ಕುರಿಗಳನ್ನು ಗಿಫ್ಟ್‌ ಆಗಿ ನೀಡಿದ್ದಾರೆ. ಎಚ್‌ಡಿ ಕೋಟೆ ತಾಲೂಕಿನ ಜೆಡಿಎಸ್ ಮುಖಂಡ ಕೃಷ್ಣ ನಾಯಕ ನೇತೃತ್ವದಲ್ಲಿ ಕುರಿಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!