ಕಾಲೇಜು ಆವರಣದಲ್ಲಿ ಡ್ರಗ್ಸ್‌ ದಂಧೆಗೆ ಕಡಿವಾಣ: ಸಿವಿಲ್‌ ಡ್ರೆಸ್‌ನಲ್ಲಿ ಪೊಲೀಸರ ಗಸ್ತು!

ಬೆಂಗಳೂರು: ರಾಜ್ಯದ ಕಾಲೇಜು ಆವರಣ ಹಾಗೂ ಪರಿಸರದಲ್ಲಿ ನಡೆಯುತ್ತಿರುವ ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಸಿವಿಲ್‌ ಡ್ರೆಸ್‌ನಲ್ಲಿ ಗಸ್ತು ನಡೆಸುವ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಅವರು ಮಾತನಾಡಿದ ಅವರು, ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕಾಲೇಜು ಕ್ಯಾಂಪಸ್‌ಗಳಲ್ಲೂ ವಿಶೇಷ ಕಣ್ಗಾವಲು ಇಡಲಾಗುತ್ತದೆ ಎಂದರು.

ಜಾಗೃತಿ ಆಂದೋಲನ
ವಿದೇಶದಿಂದ ವ್ಯಾಸಂಗಕ್ಕೆ ಬಂದು, ಅಧ್ಯಯನದ ಅನಂತರ ಇಂಥ ದಂಧೆಯಲ್ಲಿ ತೊಡಗಿಸಿಕೊಂಡಿರುವ ವರನ್ನು ಟ್ರ್ಯಾಕ್‌ ಮಾಡುವ ವ್ಯವಸ್ಥೆಯೂ ಆಗಲಿದೆ. ಡ್ರಗ್ಸ್‌ ವಿರುದ್ಧ ದೊಡ್ಡ ಮಟ್ಟದ ಜನ ಜಾಗೃತಿ ಆಂದೋಲನ ನಡೆಸಲಿದ್ದೇವೆ. ಅತ್ಯಾಚಾರಿಗಳಿಗೆ ಹಾಗೂ ಡ್ರಗ್ಸ್‌ ದಂಧೆಕೋರರಿಗೆ ಗರಿಷ್ಠ ಶಿಕ್ಷೆ ನೀಡಲು ಸರಕಾರ ಬದ್ಧವಾಗಿದೆ ಎಂದು ವಿವರಿಸಿದರು.

 ಪೊಲೀಸ್‌ ಬೀಟ್‌ಗೆ ಶಕ್ತಿ
ಅಪರಾಧ ಪ್ರಕರಣಗಳು ತಡೆಯಲು, ಅನಾಹುತಗಳನ್ನು ತಪ್ಪಿಸಲು ಆ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು “ಪೊಲೀಸ್‌ ಬೀಟ್‌’ ವ್ಯವಸ್ಥೆ ಅತ್ಯಂತ ಪರಿಣಾಮಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಈಗಿರುವ ಪೊಲೀಸ್‌ ಬೀಟ್‌ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಲಾಗುವುದು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!