ಎತ್ತಿನಹೊಳೆ ಯೋಜನೆ ಗುತ್ತಿಗೆದಾರ ಕಂಪನಿ ಮೇಲೆ ಐಟಿ ದಾಳಿ!

ಕೊರಟಗೆರೆ:- ಎತ್ತಿನಹೊಳೆ ಯೋಜನೆ ಕಾಮಗಾರಿ ಮಾಡುತ್ತೀರುವ SNC ಒಡೆತನದ ಖಾಸಗಿ ಕಂಪನಿಯ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ಗುರುವಾರ ಬೆಳಿಗ್ಗೆ ನಡೆಸಿದೆ.

ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ಸಿಂಗ್ರಿಹಳ್ಳಿ ಸಮೀಪ ಇರುವಂತಹ SNC ಕಂಪನಿಯ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಕೊರಟಗೆರೆ ತಾಲೂಕಿನ ಎಲೆರಾಂಪುರದಿಂದ ರಾಮನಗರದ ತಿಪ್ಪಗೊಂಡನಹಳ್ಳಿ ಕೆರೆವರೇಗೆ ಮಾಡುತ್ತೀರುವ ಸುಮಾರು 245ಕೋಟಿ ವೆಚ್ಚದ 244ಕೀಮೀ ದೂರದ ಎತ್ತಿನಹೊಳೆ ಯೋಜನಾ ಕಾಮಗಾರಿ

ಸತ್ಯನಾರಾಯಣ ಕಂಟ್ರಸ್ಟನ್ ಪ್ರೈವೇಟ್ ಲೀಮಿಟೆಡ್ ನಿಂದ
ಎಲೆರಾಂಪುರ ಸಮೀಪದ 2019ರಲ್ಲಿ ಪ್ರಾರಂಭ ಆಗಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ

ಕಂಪನಿಯ ಗುತ್ತಿಗೆಯ ದಾಖಲೆ, ಕಾಮಗಾರಿ ವಿವರದ ಅಂಕಿಅಂಶ, ಯೋಜನೆಯ ರೂಪುರೇಷು ಮತ್ತು ಯೋಜನೆಯ ಅನುಧಾನದ ಸಮಗ್ರ ಮಾಹಿತಿ ಕಲೆಹಾಕಿದ್ದಾರೆ.

ಬೆಂಗಳೂರು 6ಜನ ಐಟಿ ಅಧಿಕಾರಿಗಳ ತಂಡ SNC ಕಂಪನಿಗಳ ದಾಖಲೆ ಪರಿಶೀಲನೆ ನಡೆಸಿ ಕಂಪನಿ ಇಂಜಿನಿಯರ್ ಗಳಿಂದ ಮಾಹಿತಿ ಪಡೆದಿದ್ದಾರೆ.. ಕೋಳಾಲ ಪೊಲೀಸರ ತಂಡ ಸ್ಥಳದಲ್ಲಿಯೇ ಮೊಕ್ಕಂ ಹೋಡಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!