ಸಿಹಿಸುದ್ದಿ : ಶೀಘ್ರವೇ 7 ಸಾವಿರ ಶಿಕ್ಷಕರ ನೇಮಕಾತಿ

ಕುಂದಾಪುರ : ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರದಲ್ಲೇ ರಾಜ್ಯದಲ್ಲಿ 7 ಸಾವಿರ ಶಿಕ್ಷಕರ ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ.ನಾಗೇಶ್ ಅವರು, ಹಿಂದಿನ ಶಿಕ್ಷಣ ಸಚಿವರು 10 ಸಾವಿರ ಶಿಕ್ಷಕರ ನೇಮಕಕ್ಕೆ ಪ್ರಯತ್ನಪಟ್ಟಿದ್ದರು. ನಮಗೆ ಸಿಕ್ಕಿದ್ದು ಮೂರು ಸಾವಿರ ಮಾತ್ರ. ಮತ್ತೆ ಈಗ ಪರೀಕ್ಷೆ ನಡೆಯಲಿದ್ದು, ಸದ್ಯದಲ್ಲೇ ಏಳು ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ ಎಂದು ತಿಳಿಸಿದ್ದಾರೆ

ಇನ್ನು ಪ್ರಾಥಮಿಕ ಶಾಳೆಗಳಲ್ಲಿ ಶಿಕ್ಷಕರ ಸಮಸ್ಯೆಯಾಗದಂತೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ತರಗತಿ ಮಾಡಲಾಗುವುದು. ಯಾವ ಶಾಲೆಯಲ್ಲಾದರೂ ಹುದ್ದೆ ಖಾಲಿ ಇದ್ದು, ಶಿಕ್ಷಕರಿಲ್ಲ ಎಂದಾದರೆ ಸಂಬಂಧಿಸಿದ ಡಿಡಿಪಿಐ, ಬಿಒ ಗಮನಿಸಿ ಎಲ್ಲಿ ಹೆಚ್ಚುವರಿ ಶಿಕ್ಷಕರಿದ್ದಾರೋ ಅಲ್ಲಿಂದ ಎರಡು ಮೂರು ದಿನಕ್ಕೆ ಪ್ರಭಾರಿ ಆಗಿ ತೆಗೆದುಕೊಂಡು ಸರಿ ಹೊಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!