ಮನೆಯಲ್ಲಿದ್ದ ಗೃಹಣಿ ನಾಪತ್ತೆ


ಕೊರಟಗೆರೆ:- ಜಂಪೇನಹಳ್ಳಿ ಗ್ರಾಮದಲ್ಲಿನ ಬಾಡಿಗೆ
ಮನೆಯಲ್ಲಿ ಹನುಮಂತರಾಯನ ಜೊತೆ ವಾಸವಿದ್ದ
ಗೃಹಿಣಿ ಪುಪ್ಪ ಎಂಬಾಕೆ ಜೂ.17ರಂದು ಕಾಣೆ ಆಗಿರುವ
ಬಗ್ಗೆ ಆಕೆಯ ತಾಯಿ ರಂಗಮ್ಮ ಕೊರಟಗೆರೆ ಪೊಲೀಸ್
ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಿಸಿರುವ ಘಟನೆ
ನಡೆದಿದೆ.
ಪುಪ್ಪ ಮೂಲತಃ ಕೊರಟಗೆರೆ ತಾಲೂಕು
ಹೊಳವನಹಳ್ಳಿ ಹೋಬಳಿ ವಡ್ಡಗೆರೆ ಗ್ರಾಪಂ
ವ್ಯಾಪ್ತಿಯ ಯಾದಗೆರೆ ಗ್ರಾಮದ ವಾಸಿ. ಪ್ರಸ್ತುತ
ಜಂಪೇನಹಳ್ಳಿ ಗ್ರಾಮದಲ್ಲಿ ವಾಸವಿದ್ದಳು. ಮನೆಯಲ್ಲಿ
ಹೊರಗಡೆ ಹೋದಾಕೆ ಮತ್ತೇ ಮನೆಗೆ ಬರದೇ ಕಾಣೆ
ಆಗಿರುವ ಬಗ್ಗೆ ಆಕೆಯ ತಾಯಿ ದೂರು ನೀಡಿದ್ದಾಳೆ.
ಕಾಣೆಯಾದ ಪುಪ್ಪ ಸುಮಾರು 5 ಅಡಿ ಎತ್ತರ,
ಗೋಧಿಬಣ್ಣ, ದುಂಡುಮುಖ, ಬಲಕತ್ತಿನ ಭಾಗದಲ್ಲಿ
ಕಪ್ಪುಗುಳ್ಳೆ ಇದೆ. ಕೆಂಪುಬಣ್ಣದ ಚೂಡಿದಾರ
ಧರಿಸಿದ್ದಾಳೆ. ಮೇಲ್ಕಂಡ ಮಹಿಳೆಯ ಬಗ್ಗೆ ಮಾಹಿತಿ
ಸೀಕ್ಕಿದ್ದಲ್ಲಿ ಕೊರಟಗೆರೆ ಸಿಪಿಐ 9480802954 ಅಥವಾ ಪಿಎಸೈ
9480802988ನಂಬರಿಗೆ ಕರೆ ಮಾಡಲು ಮನವಿ
ಮಾಡಲಾಗಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!