ಯಡಿಯೂರಪ್ಪ ವ್ಯಕ್ತಿ ಅಲ್ಲ ದೊಡ್ಡ ಶಕ್ತಿ: ಶ್ರೀರಾಮುಲು

ಚಿತ್ರದುರ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವ್ಯಕ್ತಿ ಅಲ್ಲ, ಅವರೊಂದು ದೊಡ್ಡ ಶಕ್ತಿ. ಹೀಗಾಗಿ ದೊಡ್ಡ ಶಕ್ತಿ ಕೆಳಗೆ ಅವರ ಮಾರ್ಗದರ್ಶನದಲ್ಲಿ ನಾವು ಸಾಗಿದ್ದೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಬಿಎಸ್‍ವೈ ಅವರನ್ನು ಹೊಗಳಿದ್ದಾರೆ.

ಮೊಳಕಾಲ್ಮೂರು ತಾಲೂಕು ದೇವರಾಯಸಮುದ್ರ ಗ್ರಾಮದಲ್ಲಿ ಅಲೆಮಾರಿ, ಅರೆ ಅಲೆಮಾರಿಗಳಿಗೆ ಆಶ್ರಯ ಯೋಜನೆಯಡಿ ಗೃಹ ನಿರ್ಮಾಣಕ್ಕೆ ಕಾರ್ಯಾದೇಶ ಪತ್ರ ವಿತರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಬಗ್ಗೆ ಬೇರೆ ಬೇರೆ ಪಕ್ಷದವರಿಂದ ಅವರಿಗನ್ನಿಸಿದಂತೆ ಹೇಳಿಕೆ ನೀಡುತ್ತಿದ್ದಾರೆ. ಆದರೆ ನಾವೆಲ್ಲರೂ ಅವರ ಮಾರ್ಗದರ್ಶನದಲ್ಲೇ ಸಾಗುತ್ತಿದ್ದೇವೆ. ಹಾಗೆಯೇ ಐಟಿ ದಾಳಿ ಬಗ್ಗೆ ಕೂಡ ಅವರವರ ಮನಸ್ಥಿತಿ ಮೇಲೆ ಹೇಳಿಕೆ ನೀಡ್ತಿದ್ದಾರೆ. ರಾಜಕಾರಣದಲ್ಲಿ ಒಬ್ಬರ ಮೇಲೊಬ್ಬರು ಹಾಕುವುದು ಸಹಜ. ಅದರಲ್ಲೂ ಕಾಂಗ್ರೆಸ್ಸಿಗರಿಗೆ ಉಪಚುನಾವಣೆ ಸೋಲುವ ಹತಾಶೆ ಆರಂಭವಾಗಿದ್ದು, ಸೋಲುವ ಭೀತಿಯಿಂದಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು

ಸಿಂದಗಿ ಹಾಗು ಹಾನಗಲ್ ಉಪಚುನಾವಣೆ ಗಳಲ್ಲಿ ಸೋಲುವ ಹತಾಶೆ ಕಾಂಗ್ರೆಸ್ ಗೆ ಕಾಡುತ್ತಿದ್ದು, ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ 20 ಸಲ ಸೋಲಿನ ಬಗ್ಗೆ ಹೇಳಿಕೆ ನೀಡಿದ್ದಾರೆ. ಇನ್ನು ಜೆಡಿಎಸ್ ಮುಸ್ಲಿಂ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸಿದೆ ಎಂದು ಹೊಸ ರಾಗ ತೆಗೆದಿದ್ದು, ಕಾಂಗ್ರೆಸ್ ಸೋಲುತ್ತದೆ ಎಂದು ಸಿದ್ದರಾಮಯ್ಯ ಅವರಿಂದಲೇ ಘೋಷಣೆಯಾಗಿದೆ ಎಂದರು.

ಈ ಸಿದ್ದರಾಮಯ್ಯ ಅವರಿಗೆ ಚುನಾವಣೆ ಬಂದಾಗ ಮಾತ್ರ ಅಹಿಂದ ನೆನಪಾಗುತ್ತದೆ. ಚುನಾವಣೆ ಬಳಿಕ ಅಹಿಂದ ಮರೆತು ಅರಾಮದಲ್ಲಿರುತ್ತಾರೆ. ಜೊತೆಗೆ ರಾಜ್ಯವನ್ನು ಪಂಜಾಬ್ ಮಾಡಲು ಹೊರಟಿದ್ದು, ಪಂಜಾಬ್ ನಲ್ಲೂ ಒಬ್ಬ ಸಿದ್ದು ಇದ್ದಾನೆ. ಇಲ್ಲೂ ಕೂಡ ಸಿದ್ದು ಇದ್ದಾನೆ. ಅಲ್ಲೂ ಸಿದ್ದು ಕ್ಯಾಪ್ಟನ್, ಇಲ್ಲೂ ಸಿದ್ದು ಕ್ಯಾಪ್ಟನ್ ಆಗಿದ್ದಾರೆ. ರಾಜ್ಯದ ಕಾಂಗ್ರೆಸ್ ಪಕ್ಷ ಒಂದು ಮನೆ ಮೂರು ಬಾಗಿಲು ಆಗಿವೆ ಎಂದು ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗು ದಲಿತರಾದ ಪರಮೇಶ್ವರ್ ಸಿಎಂ ಆಗುವ ಕನಸು ಕಾಣ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಗೆ ತಾಕತ್ತಿದ್ದರೆ ದಲಿತ ಸಿಎಂ ಅಭ್ಯರ್ಥಿ ಯಾರೆಂದು ಘೋಷಿಸಲಿ ಎಂದು ಸವಾಲು ಹಾಕಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!