ಮಕ್ಕಳ ಶಾಲಾ ಶುಲ್ಕ ಕಟ್ಟುವ ಆತಂಕದಲ್ಲಿದ್ದ ಪೋಷಕರಿಗೆ ಗುಡ್ ನ್ಯೂಸ್

ನವದೆಹಲಿ: ಶಾಲಾ ಆಡಳಿತ ಮಂಡಳಿಗಳಿಂದ ಬಾಕಿ ವಸೂಲಿ ಬಗ್ಗೆ ಮಹತ್ವದ ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್ ಕಾಲಾವಕಾಶ ನೀಡುವ ಬಗ್ಗೆ ಪರಿಶೀಲಿಸಬೇಕು ಎಂದು ಹೇಳಿದೆ.

ಶಾಲಾ ಮಕ್ಕಳ ಶುಲ್ಕ ಪಾವತಿಸಲು ಪೋಷಕರು ಕಾಲಾವಕಾಶ ಕೇಳಿದರೆ, ಸಹಾನುಭೂತಿಯಿಂದ ಪರಿಶೀಲನೆ ನಡೆಸಿ ಬೇಡಿಕೆಯ ಅನುಸಾರ ಹೆಚ್ಚಿನ ಸಮಯ ನೀಡಲು ಶಾಲೆಗಳು ಪರಿಗಣಿಸಬೇಕೆಂದು ತಿಳಿಸಿದೆ.

ಶುಲ್ಕವನ್ನು ಬಾಕಿ ಉಳಿಸಿಕೊಂಡ ಪೋಷಕರಿಂದ ವಸೂಲಿ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬಹುದು ಎಂದು ಕೂಡ ಕೋರ್ಟ್ ತಿಳಿಸಿದೆ.

ರಾಜಸ್ಥಾನದ ಪ್ರೋಗ್ರೆಸಿವ್ ಸ್ಕೂಲ್ ಅಸೋಸಿಯೇಷನ್ ಮತ್ತು ಸರ್ಕಾರದ ನಡುವಿನ ಮೊಕದ್ದಮೆ ಕುರಿತಂತೆ ಮೇ 3 ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು ಪಾವತಿಸದ ವಿದ್ಯಾರ್ಥಿಗಳನ್ನು ಶಾಲೆಯಿಂದ ಕೈಬಿಡುವಂತಿಲ್ಲ. ಫಲಿತಾಂಶವನ್ನು ತಡೆಯುವ ಉದ್ದೇಶದಿಂದ ಯಾವುದೇ ಕ್ರಮ ಕೈಗೊಳ್ಳುವುದನ್ನು ನಿರ್ಮಿಸಿರಲಿಲ್ಲ.

ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿನ್ ಲ್ಕರ್ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ಈ ಕುರಿತಾಗಿ ಆದೇಶ ನೀಡಿದೆ. ಮಂಗಳವಾರ ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿಸಲು ಕಾಲಾವಕಾಶ ಕೇಳಿದರೆ ಪೋಷಕರ ಬೇಡಿಕೆಯನ್ನು ಪರಿಗಣಿಸಬೇಕೆಂದು ಮಂಗಳವಾರ ತಿಳಿಸಲಾಗಿದೆ

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!