ಐಎಂಎ ಹಗರಣದಲ್ಲಿ ಜಮೀರ್‌ನ ರಕ್ಷಿಸುವಂತೆ ಸಿದ್ದರಾಮಯ್ಯ ನನ್ನ ಬಳಿ ಕಳಿಸಿದ್ದರು; ಎಚ್‌ಡಿಕೆ ಗಂಭೀರ ಆರೋಪ

ರಾಮನಗರ: ಐಎಂಎ ಬಹುಕೋಟಿ ಹಗರಣದ ಉರುಳಿನಿಂದ ರಕ್ಷಿಸುವಂತೆ ತಮ್ಮ ರೈಟ್‌ಹ್ಯಾಂಡ್‌(ಜಮೀರ್‌ ಅಹ್ಮದ್‌ ಖಾನ್‌) ಅನ್ನು ಸಿಎಂ ಆಗಿದ್ದ ನನ್ನ ಬಳಿ ಸಿದ್ದರಾಮಯ್ಯ ಕಳಿಸಿದ್ದರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬಿಡದಿಯ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಅವರ ಎಲ್ಲಾ ಆರೋಪಗಳಿಗೂ ತೀಕ್ಷ್ಮ ಪದಗಳಿಂದ ತಿರುಗೇಟು ನೀಡಿದರು. ‘ಅವರನ್ನು(ಜಮೀರ್‌) ಸೇವ್‌ ಮಾಡಿ ಎಂದು ಆಗ ನೀವೇ ನನ್ನ ಹೇಳಿದ್ದೀರಿ. ಅದನ್ನು ನೆನಪು ಮಾಡಿಕೊಳ್ಳಿ’ ಎಂದು ಸಿದ್ದರಾಮಯ್ಯ ಅವರಿಗೆ ನೆನಪಿಸಿದ ಎಚ್‌ಡಿಕೆ, ಧರ್ಮಸಿಂಗ್‌ ಸರಕಾರವನ್ನು ಪತನಗೊಳಿಸಿದ್ದು ಯಾರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದರು

.ಅಧಿಕಾರದ ರಾಜಕಾರಣ:
ಸಿದ್ದರಾಮಯ್ಯ ಅವರದ್ದು ಅಧಿಕಾರದ ರಾಜಕಾರಣ. ಜನರು ಉದ್ದಾರವಾಗುವುದು ಇವರಿಗೆ ಬೇಕಿಲ್ಲ. ಮಧ್ಯಾಹ್ನಕ್ಕೆ ಮನೆ ಸೇರಿ ಸಂಜೆವರೆಗೆ ನಿದ್ದೆ ಹೊಡೆದು, ಸಂಜೆ 6ಗಂಟೆಗೆ ಎದ್ದು ಎಲ್ಲಿಗೆ ಹೋಗುತ್ತಿದ್ದರು ಎಂಬುದು ನನಗೆ ಗೊತ್ತಿದೆ. ಈಗ ಒಬಿಸಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಅಧಿಕಾರಕ್ಕಾಗಿಯೇ ಹೊರತು ರಾಜ್ಯದ ಉದ್ದಾರಕ್ಕಾಗಿ ಅಲ್ಲ. ಜೆಡಿಎಸ್‌ನಲ್ಲಿದ್ದಾಗಲೂ ಅಹಿಂದ ರಾಜಕೀಯ ಮೂಲಕ ಪಕ್ಷವನ್ನು ದುರ್ಬಲಗೊಳಿಸಿದ್ದರು, ಈಗಲೂ ಅದೇ ಕೆಲಸ ಮಾಡುತ್ತಾ ಕಾಂಗ್ರೆಸ್‌ ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ದೂರಿದರು.

ನಿಮ್ಮಿಂದ ಕಲಿಯಬೇಕಿಲ್ಲ:
ರಾಜಕೀಯವನ್ನು ನಿಮ್ಮಿಂದ ನಾನು ಕಲಿಯಬೇಕಿಲ್ಲ. ಮಂಡ್ಯ ಚುನಾವಣೆಯಲ್ಲಿ ನಿಖಿಲ್‌ ಸೋಲಿಸಲು ನೀವೆಲ್ಲರೂ ಸೇರಿಕೊಂಡು ರಚಿಸಿದ ಚಕ್ಯವ್ಯೂಹ ಗೊತ್ತಿದೆ. ಜೆಡಿಎಸ್‌ ಸ್ಟ್ರಾಂಗ್‌ ಆಗಿದೆಯೋ, ವೀಕ್‌ ಆಗಿದೆಯೋ ಎಂಬ ಚಿಂತೆ ನಿಮಗೇಕೆ. ನಮ್ಮನ್ನು ಪದೇ ಪದೇ ಕೆಣಕಬೇಡಿ. ನಿಮ್ಮ ಬಂಡವಾಳವೆಲ್ಲ ನನಗೆ ಗೊತ್ತಿದೆ. ಅದೆಲ್ಲವನ್ನೂ ಬಿಚ್ಚಿಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!