ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟೈಕ್ ನಡೆಸುತ್ತೇವೆ: ಅಮಿತ್ ಶಾ ಎಚ್ಚರಿಕೆ

ಭಾರತ ಪಾಕಿಸ್ತಾನದ ಉಗ್ರನೆಲೆಗಳ ಮೇಲೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್​ ಇಂದಿಗೂ ಮೈನವಿರೇಳಿಸುವ ಒಂದು ಸಂದರ್ಭ. ಉರಿಯಲ್ಲಿ ಯೋಧರ ಮೇಲೆ ನಡೆದ ಉಗ್ರದಾಳಿಗೆ ಪ್ರತೀಕಾರವಾಗಿ 2016ರ ಸೆಪ್ಟೆಂಬರ್ 29ರಂದು ಭಾರತ ಪಾಕಿಸ್ತಾನದ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿತ್ತು.

ಗೃಹಸಚಿವ ಅಮಿತ್​ ಶಾ ಪಾಕಿಸ್ತಾನಕ್ಕೊಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ. ‘ಗಡಿಯಲ್ಲಿ ಯಾವುದೇ ರೀತಿಯ ಉಪಟಳ, ದಾಳಿಗಳನ್ನೂ ನಾವು ಸಹಿಸುವುದಿಲ್ಲ. ನೀವು ಪದೇಪದೆ ನಿಯಮ ಉಲ್ಲಂಘನೆ ಮಾಡಿದರೆ, ನಾವು ಇನ್ನಷ್ಟು ಸರ್ಜಿಕಲ್​ ಸ್ಟ್ರೈಕ್​ ನಡೆಸುತ್ತೇವೆ’ ಎಂದು ನೆರೆರಾಷ್ಟ್ರಕ್ಕೆ ಕಟುವಾಗಿ ಎಚ್ಚರಿಸಿದ್ದಾರೆ. ಗೋವಾದ ಧರ್‌ಬಂದೋರಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತಿಕ್ರಮಣ, ನಿಯಮ ಉಲ್ಲಂಘನೆ, ಕಾಶ್ಮೀರದಲ್ಲಿ ನಾಗರಿಕರ ಹತ್ಯೆಯಂಥ ಕೃತ್ಯಗಳು ಮುಂದುವರಿದರೆ ಇನ್ನೊಮ್ಮೆ ಸರ್ಜಿಕಲ್​ ಸ್ಟ್ರೈಕ್​ ನಿಶ್ಚಿತ ಎಂದಿದ್ದಾರೆ.

ಮನೋಹರ್​ ಪರಿಕ್ಕರ್​ ಅವರು ರಕ್ಷಣಾ ಮಂತ್ರಿಯಾಗಿದ್ದಾಗ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಸಿದ ಸರ್ಜಿಕಲ್​ ಸ್ಟ್ರೈಕ್​ ಒಂದು ಮಹತ್ವದ ಹೆಜ್ಜೆ. ಭಾರತದ ಗಡಿ ಪ್ರದೇಶಕ್ಕೆ ತೊಂದರೆ ನೀಡುವ ಯಾರನ್ನೂ ಬಿಡುವುದಿಲ್ಲ ಎಂದು ಆ ಸರ್ಜಿಕಲ್​ ಸ್ಟ್ರೈಕ್​ ಮೂಲಕ ಸಂದೇಶ ನೀಡಿದ್ದೇವೆ. ಹಿಂದೆ ಮಾತುಕತೆಗೆ ಸಮಯವಿತ್ತು. ಆದರೆ ಈಗ ಏನಿದ್ದರೂ ತೆಗೆದುಕೊಂಡಿದ್ದನ್ನು ಕೊಡುವುದಷ್ಟೇ ನಮಗೆ ಗೊತ್ತಿದೆ ಎಂದು ಶಾ ಹೇಳಿದ್ದಾರೆ.

ಭಾರತ ಪಾಕಿಸ್ತಾನದ ಉಗ್ರನೆಲೆಗಳ ಮೇಲೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್​ ಇಂದಿಗೂ ಮೈನವಿರೇಳಿಸುವ ಒಂದು ಸಂದರ್ಭ. ಉರಿಯಲ್ಲಿ ಯೋಧರ ಮೇಲೆ ನಡೆದ ಉಗ್ರದಾಳಿಗೆ ಪ್ರತೀಕಾರವಾಗಿ 2016ರ ಸೆಪ್ಟೆಂಬರ್ 29ರಂದು ಭಾರತ ಪಾಕಿಸ್ತಾನದ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿತ್ತು. ಉರಿಯಲ್ಲಿ ದಾಳಿ ನಡೆಸಿದ್ದು ಜೈಷ್​ ಎ ಮೊಹಮ್ಮದ್​ ಸಂಘಟನೆ ಎಂಬುದು ಸಾಬೀತಾಗಿತ್ತು. ಇವರ ದಾಳಿಗೆ ಸುಮಾರು 19 ಯೋಧರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಸೇನೆ ನಡೆಸಿದ ದಾಳಿಯಲ್ಲಿ 20ಕ್ಕೂ ಹೆಚ್ಚಿನ ಉಗ್ರರು ಮೃತರಾಗಿದ್ದರು. ಅದಾದ ನಂತರ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಆತ್ಮಾಹುತಿ ಬಾಂಬ್​ ದಾಳಿ ನಡೆಸಿ, ಸುಮಾರು 40 ಸೈನಿಕರನ್ನು ಹತ್ಯೆ ಮಾಡಿದ್ದ ಉಗ್ರರಿಗೆ ಭಾರತ ಬಾಲಾಕೋಟ್​ ಏರ್​ಸ್ಟ್ರೈಕ್​ ಮೂಲಕ ಪಾಠ ಕಲಿಸಿತ್ತು. ಇದೀಗ ಪಾಕ್​ ಅಂಥ ಕೃತ್ಯ ಮುಂದುವರಿಸಿದರೆ ಸರ್ಜಿಕಲ್​ ಸ್ಟ್ರೈಕ್​ ಮುಂದುವರಿಯುತ್ತದೆ ಎಂದು ಅಮಿತ್​ ಶಾ ಎಚ್ಚರಿಸಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!