ಡಿ ಕೆ ಶಿವಕುಮಾರ್ ದೊಡ್ಡ ಡೀಲ್ ಗಿರಾಕಿ: ಸೊಗಡು ಶಿವಣ್ಣ

ತುಮಕೂರು: ಡಿ ಕೆ ಶಿವಕುಮಾರ್ ದೊಡ್ಡ ಡೀಲ್ ಗಿರಾಕಿ, ಕೋಟಿ ಕೋಟಿ ಡೀಲ್ ಮಾಡ್ತಾರೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಗೆ ಮುನ್ನ ಅನಧಿಕೃತವಾಗಿ ಕಾಂಗ್ರೆಸ್ ನಾಯಕ ವಿ ಎಸ್ ಉಗ್ರಪ್ಪ ಅವರ ಬಳಿ ಪಕ್ಷದ ಮಾಧ್ಯಮ ಸಂಯೋಜಕರಾಗಿದ್ದ ಸಲೀಂ ಹೇಳಿದ್ದು ಭಾರೀ ಸುದ್ದಿಯಾಗಿ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡದ್ದು ಹಳೆ ನಿನ್ನೆಯ ಸುದ್ದಿ.

ಇದೀಗ ಅವರ ಮಾತಿಗೆ ಪೂರಕವಾಗಿ ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿದ್ದಾರೆ. ಎಂ.ಎ.ಸಲೀಂ ಮತ್ತು ಉಗ್ರಪ್ಪ ಮಾತನಾಡಿರುವುದು ಸತ್ಯ. ಡಿಕೆಶಿ ರೀಟೇಲ್ ವ್ಯಾಪಾರಿಯಲ್ಲ, ಹೋಲ್ ಸೇಲ್ ವ್ಯಾಪಾರಿ, ಬೇನಾಮಿ ಹೆಸರಿನಲ್ಲಿ ಬೇಕಾದಷ್ಟು ಆಸ್ತಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ತುಮಕೂರಿನಲ್ಲಿ ಕೋಟ್ಯಂತರ ರೂಪಾಯಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ. ಕೃಷ್ಣಮೂರ್ತಿ ಅವರ ಹೆಸರಿನಲ್ಲಿ ಬೇನಾಮಿ ಆಸ್ತಿಗಳಿವೆ. ಪಾವಗಡದಲ್ಲಿ ಸೋಲಾರ್ ಪಾರ್ಕ್, 100 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಂಚಿನ ಫ್ಯಾಕ್ಟರಿ, ಗಣಿ ತಯಾರಿಕೆ ಕಾರ್ಖಾನೆಗಳಿವೆ. ಇವೆಲ್ಲಾ ಬೇನಾಮಿ ಹೆಸರುಗಳಲ್ಲಿದ್ದು ಡಿಕೆಶಿ ಅಕ್ರಮವಾಗಿ ಸಂಪಾದನೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಹಿಂದೆ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಡಿ ಕೆ ಶಿವಕುಮಾರ್ ಸಂಪಾದಿಸಿಕೊಂಡ ಅಕ್ರಮ ಆಸ್ತಿಗಳಿವು ಎಂದು ಕೂಡ ಸೊಗಡು ಶಿವಣ್ಣ ಆರೋಪಿಸಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!