ನೀವು ಹಿಂದೂ ವಿರೋಧಿಗಳ ಐಕಾನ್ ಆಗಿದ್ದೀರಿ: ಸಿದ್ದರಾಮಯ್ಯಗೆ ಬೊಮ್ಮಾಯಿ ತಿರುಗೇಟು

ಬೆಂಗಳೂರು: ಮತೀಯ ಗೂಂಡಾಗಿರಿ ಕುರಿತು ‘ಕ್ರಿಯೆ-ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕ‌ೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬೊಮ್ಮಾಯಿ ರಾಜೀನಾಮೆಗೆ ಪಟ್ಟು ಹಿಡಿದಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಬೊಮ್ಮಾಯಿ, ಆಡಳಿತ ಪಾಠ ನಿಮ್ಮಿಂದ ಕಲಿಯಬೇಕಿಲ್ಲ ಎಂದು ಹೇಳಿದ್ದಾರೆ.

ನೀವು ಸಿಎಂ ಆಗಿದ್ದಾಗ ಟಿಪ್ಪು ಸುಲ್ತಾನರ ಆಳ್ವಿಕೆಯಲ್ಲಿ ಮಾಡಿದ್ದಂತೆ ಹಿಂದೂ ಕಾರ್ಯಕರ್ತರನ್ನು ಸಾಯಿಸುವ ಮೂಲಕ ಹಿಂದೂ ವಿರೋಧಿಗಳ ‘ಐಕಾನ್’ ಆಗಿದ್ದೀರಿ. ಪೊಲೀಸ್ ಅಥವಾ ಆಡಳಿತ ಪಾಠವನ್ನು ನಾನು ನಿಮ್ಮಿಂದ ಕಲಿಯಬೇಕಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಮ್ಮಲ್ಲಿ ಸಮರ್ಥ ಪೊಲೀಸ್ ಪಡೆ ಇದೆ’ ಎಂದು ಹೇಳಿದ್ದಾರೆ.

‘ನಿಮ್ಮ ಆಡಳಿತದಲ್ಲಿ ‘ಜಂಗಲ್ ರಾಜ್’ ನಿರ್ಮಾಣವಾಗಿತ್ತು. ಹಿಂದೂಗಳ ಹತ್ಯೆ ವೇಳೆ ನೀವು ಕುರುಡ, ಕಿವುಡ ಮತ್ತು ಮೂಕರಾಗಿದ್ದೀರಿ. ನನ್ನ ಆಡಳಿತದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ನಿಮ್ಮ ಜಂಗಲ್ ರಾಜ್‌ನಲ್ಲಿ ಹಿಂದೂಗಳನ್ನು ಕೊಲ್ಲಲಾಯಿತು ಮತ್ತು ಅನೇಕ ಗಲಭೆಗಳು ನಡೆದವು’ ಎಂದು ಆರೋಪಿಸಿದ್ದಾರೆ.

ನಮ್ಮ ಸಮಾಜದಲ್ಲಿ ಪ್ರತಿಯೊಂದು ಕ್ರಿಯೆಗೂ ತಕ್ಕ ಪ್ರತಿಕ್ರಿಯೆ ಇರುತ್ತದೆ ಮತ್ತು ಕಾನೂನು ತನ್ನದೇ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದು ನಾನು ಹೇಳಿದ್ದೆ. ಆದರೆ ನಿಮ್ಮ ಆಳ್ವಿಕೆಯಲ್ಲಿ ಎಲ್ಲ ಕಡೆ ಹಿಂದೂಗಳನ್ನು ಕೊಲ್ಲಲಾಗಿತ್ತು. ನೀವು ಕನ್ನಡಿಯನ್ನು ನಿಮ್ಮ ಕಡೆಗೆ ತಿರುಗಿಸಿಕೊಳ್ಳಬೇಕಿದೆ. ನಿಮ್ಮ ಕೈಗಳಲ್ಲಿ ರಕ್ತ ಅಂಟಿಸಿಕೊಂಡು ಹೇಗೆ ಮಲಗುತ್ತಿರೋ ಎಂದು ದೇವರಿಗೇ ಗೊತ್ತು’ ಎಂದು ತಿರುಗೇಟು ನೀಡಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!