ತುಮಕೂರಿನಲ್ಲಿ ಮಟ್ಕಾ ದಂಧೆ ಮಟ್ಟಹಾಕಲು ಮಾಹಿತಿ ತಂತ್ರಜ್ಞಾನದ ಮೊರೆ ಹೋದ ಪೊಲೀಸರು

ತುಮಕೂರು: ಸಾಮಾನ್ಯ ಜನರು ಕೋವಿಡ್​ನಿಂದಾಗಿ ಉದ್ಯೋಗ, ವ್ಯಾಪಾರ ನಷ್ಟವಾಗಿ ಖರ್ಚಿಗೆ ಕಾಸಿಲ್ಲ ಎಂದು ಪರದಾಡುತ್ತಿದ್ದಾರೆ. ಆದರೆ ಬೆಟ್ಟಿಂಗ್‌, ಮಟ್ಕಾ, ಜೂಜುಕೋರರು ಮಾತ್ರ ಪೊಲೀಸರ ಕಣ್ಣು ತಪ್ಪಿಸಿ ಯಾವ ಚಿಂತೆಯೂ ಇಲ್ಲದೆ ಭರ್ಜರಿ ಹಣ ಮಾಡುತ್ತಿದ್ದು, ಮಟ್ಕಾ ದಂಧೆಯನ್ನು ಮಟ್ಟಹಾಕಲು ಪೊಲೀಸರು ಮಾಹಿತಿ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ಜಿಲ್ಲೆಯ ಪಾವಗಡದಲ್ಲಿ ಇತ್ತೀಚೆಗೆ ಮಿತಿಮೀರಿದ ಮಟ್ಕಾ ದಂಧೆಯನ್ನು ಪೊಲೀಸರು ಒಂದು ಹಂತಕ್ಕೆ ನಿಯಂತ್ರಣಕ್ಕೆ ತಂದಿದ್ದರು. ಆದರೆ, ದಂಧೆಕೋರರು ಮಾತ್ರ ಪೊಲೀಸರ ಕಣ್ಣು ತಪ್ಪಿಸಿ ತಂತ್ರಜ್ಞಾನದ ಮೂಲಕ ದಂಧೆಯನ್ನು ಮುಂದುವರಿಸಿದ್ದರು. ಪ್ರತ್ಯೇಕ ಆ್ಯಪ್​ಗಳನ್ನು ಕ್ರಿಯೇಟ್​ ಮಾಡಿಕೊಂಡು ತಮ್ಮ ಗ್ರಾಹಕರ ಮೊಬೈಲ್​ಗೆ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಆರೋಪಿಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ

ಇದೀಗ ಆನ್​ಲೈನ್​ ಮಟ್ಕಾ ದಂಧೆಯನ್ನು ಮಟ್ಟಹಾಕಲು ತುಮಕೂರಿನ ಪೊಲೀಸರು ಮಾಹಿತಿ ತಂತ್ರಜ್ಞಾನದ ಮೊರೆ ಹೋಗಿದ್ದು, ಇದಕ್ಕಾಗಿ ನುರಿತ ತಂತ್ರಜ್ಞರನ್ನು ಸಂಪರ್ಕಿಸಿದ್ದಾರೆ ಮೂರು ತಿಂಗಳ ಹಿಂದಷ್ಟೇ ಪಾವಗಡದಲ್ಲಿ ಮಟ್ಕಾ ದಂಧೆಕೋರ ಅಶ್ವಥ್ ಮತ್ತು ಆತನ ಸಹಚರರನ್ನು ಹಾಗೂ ಸಹೋದರನ್ನು ಪೊಲೀಸರು ಬಂಧಿಸಿ, ಅಪಾರ ಪ್ರಮಾಣದ ಹಣ ಮತ್ತು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಇದೀಗ ಮತ್ತೆ ಮಟ್ಕಾ ದಂಧೆಕೋರರು ಆನ್​ಲೈನ್ ಮೂಲಕ ವಹಿವಾಟು ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಇದಕ್ಕೆ ಬ್ರೇಕ್​ ಹಾಕಲು ಸಿದ್ಧರಾಗಿದ್ದಾರೆ

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!