ಚಾಲಕನ ನಿರ್ಲಕ್ಷಕ್ಕೆ ಶಾಲಾ ವ್ಯಾನ್ ಪಲ್ಟಿ 10ವಿದ್ಯಾರ್ಥಿಗಳಿಗೆ ಗಾಯ

ಕೊರಟಗೆರೆ : ಕುಡಿದ ಅಮಲಿನಲ್ಲಿ ವಾಹನ ಚಲಾಯಿತ್ತೀದ್ದ ಚಾಲಕನ ನಿರ್ಲಕ್ಷಕ್ಕೆ ಶಾಲೆ ವ್ಯಾನ್ ಪಲ್ಟಿಯಾಗಿ 10ವಿದ್ಯಾರ್ಥಿಗಳಿಗೆ ಗಾಯ ಆಗಿರುವ ಘಟನೆ ನಡೆದಿದೆ.

ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಪಂ ವ್ಯಾಪ್ತಿಯ ಕಾಶಪುರ ಕ್ರಾಸಿನಲ್ಲಿ SVG ಖಾಸಗಿ ಶಾಲೆಯ ವ್ಯಾನ್ ಪಲ್ಟಿಯಾಗಿದೆ.

ಚಿಕ್ಕನಹಳ್ಳಿ ಶ್ರೀಹರಿ ಎಜುಕೇಶನ್ ಚಾರಿಟಬಲ್ ಟ್ರಸ್ಟ್ ಶಾಲೆಯ ವ್ಯಾನ್ ಚಾಲಕ ಗೊವಿಂದಯ್ಯನ ಮಧ್ಯದ ಅಮಲು ಹೆಚ್ಚಾಗಿ 15ಜನ ಮಕ್ಕಳಿದ್ದ ಶಾಲೆಯ ವ್ಯಾನ್ ಪಲ್ಟಿ ಹೊಡೆದಿದೆ.

ಗಾಯಗೊಂಡ 10 ವಿದ್ಯಾರ್ಥಿಗಳನ್ನು ಸ್ಥಳೀಯರು ಕೊರಟಗೆರೆ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಮದ್ಯಪಾನ ಸೇವಿಸಿ ಅತಿವೇಗ ಮತ್ತು ಅವೈಜ್ಞಾನಿಕವಾಗಿ ಚಾಲನೆ ಮಾಡಿದ ವಾಹನ ಚಾಲಕ ಅಪಘಾತ ಆದ ಕೊಡಲೇ ಮಕ್ಕಳನ್ನು ರಕ್ಷಣೆ ಮಾಡದೇ ಸ್ಥಳದಿಂದ ಪರಾರಿ ಆಗಿದ್ದಾನೆ.

ಎ.ಎಸ್ ಐ ಶಂಕರನಾರಾಯಣ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊರಟಗೆರೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!