ಗಲ್ಲಿ ಗಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೆಚ್ಚಾದ ಮಟ್ಕಾ ಸಾರಾಯಿ ಇಸ್ಪೀಟ್: ಅಕ್ರಮ ಚಟುವಟಿಕೆಗೆ ಬ್ರೇಕ್ ಯಾವಾಗ

ಮಸ್ಕಿ ರೈಚೂರ್ ಜಿಲ್ಲೆ ದೇವದುರ್ಗ ಸಿಂಧನೂರ್ ಮಸ್ಕಿ ಲಿಂಗಸೂರ್ ಮಾನ್ವಿ ರೈಚೂರ್ ಗ್ರಾಮೀಣ ಪ್ರದೇಶದ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದು ನೂತನವಾಗಿ ಬಂದಿರುವ ಎಸ್ಪಿ ಅವರೇ ನಿಗಾವಹಿಸಿ ಬಡಕುಟುಂಬಗಳ ಉಳಿಸಬೇಕು ಹಾಗೂ ಸುತ್ತಮುತ್ತಲಿನ ವಿವಿಧ ಹಳ್ಳಿಗಳಲ್ಲಿ ಹೆಚ್ಚಾಗುತ್ತಿದೆ. ಮಟ್ಕಾ, ಸಾರಾಯಿ ಜೂಜಾಟ, ಇಸ್ಪಟ್ ಚಟುವಟಿಕೆ ಯಾವುದೇ ಅಡೆತಡೆ ಇಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. ಪಟ್ಟಣದ ಯುವಪೀಳಿಗೆ ಸಾರಾಯಿ, ಮಟ್ಕಾ ಜೂಜಾಟದ ದಾಸರಾಗುತ್ತಿದ್ದಾರೆ. ಆದರೆ ಪೊಲೀಸ್ ಇಲಾಖೆ ನಿಗ ವಹಿಸಬೇಕು ಮಾತ್ರ ತಾಲೂಕು ಮಟ್ಟದ ಪೋಲಿಸ್ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಪೋಲಿಸ್ ಇಲಾಖೆಯ ಅಧಿಕಾರಿಗಳಿಗೆ ಅಕ್ರಮ ಚಟುವಟಿಕೆಗಳು ಪಟ್ಟಣದಲ್ಲಿ ಎಲ್ಲಿ ಎಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಇದ್ದರೂ ಕೂಡ ಮೌನವಹಿಸಿದ್ದಾರೆ, ಇದಕ್ಕೆ ನೂತನ ಎಸ್ಪಿ ಅವರೇ ಕಡಿವಾಣ ಹಾಕಬೇಕು ಇದು ಹಲವಾರು ಅನುಮಾನಕ್ಕೆ ಕಾರಣವಾಗಿದೆ, ಪಟ್ಟಣದ ಪ್ರತಿ ಗ್ರಾಮಗಳಲ್ಲಿ, ದೊಡ್ಡಿಗಳಲ್ಲಿ, ಓಣಿಗಳಲ್ಲಿ, ಮಟ್ಟಗಳಲ್ಲಿ ಅಕ್ರಮ ಚಟುವಟಿಕೆಗಳು ಜೋರಾಗಿ ನಡೆಯುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ನಾಗರಿಕರು ಒಬ್ಬರು ಪತ್ರಿಕೆಗೆ ತಿಳಿಸಿದ್ದಾರೆ,

ಆದರೆ ಪೊಲೀಸ್ ಇಲಾಖೆ ಸುಮ್ಮನಾಗಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿ ಕೊಟ್ಟಿದೆ. ಸಾರ್ವಜನಿಕ ವಲಯದಲ್ಲಿ ಚರ್ಚೆಗೂ ಕಾರಣವಾಗಿದೆ.ಬಡ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳಗ್ಗೆ ಟೀ ಕುಡಿಯದಿದ್ದರೂ ಪರವಾಗಿಲ್ಲ.ಯುವಕರಿಗೆ ಸಾರಾಯಿ ಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ, ಇಂದಿನ ದಿನಗಳಲ್ಲಿ ದುಡಿದರು ಜೀವನ ಸಾಯಿಗಿಸುವುದು ಕಷ್ಟ. ಹಾಗಿರುವಾಗ ಬೆಳಗ್ಗೆನೇ ಯುವಕರು ಮದ್ಯಕ್ಕೆ ಮೊರೆ ಹೋದರೆ ಹೇಗೆ ಎಂದು ಹಿರಿಯರು ತಲೆ ಬಿಸಿ ಮಾಡಿಕೊಳ್ಳುತ್ತಾರೆ. ಸಾರಾಯಿ ಜತೆ ಗ್ರಾಮೀಣ ಭಾಗದಲ್ಲಿ ಮಟ್ಕಾ ದಂಧೆಯೂ ಬಹಳಷ್ಟು ಸಕ್ರೀಯವಾಗಿದೆ. ಹೆಂಡಿತಿಯ ಬಂಗಾರ ಮಾರಿ ಮಟ್ಕಾ ಆಟವಾಡುತ್ತಿರುವ ಹಲವು ಪ್ರಸಂಗಗಳು ಬೆಳಕಿಗೆ ಬಂದಿವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡು ಬಡ ಕುಟುಂಬಗಳನ್ನು ರಕ್ಷಿಸು ಅಧಿಕಾರಿಗಳು ಇದರಲ್ಲಿ ಒಪ್ಪಂದ ಇದ್ದಾರೆ ಅಂತ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಕಾಣದ ಕೈಗೊಂಬೆ ಆದ ಅಧಿಕಾರಿಗಳು:

ಅಧಿಕಾರಿಗಳಿಗೆ ಅಕ್ರಮ ಚಟುವಟಿಕೆಗಳು ತಡೆಯಬೇಕು ಅಂದ್ರೆ ಮುಂಚೆನೇ ಇಲ್ಲಿಯ ಕಾಣದ ಕೈಗಳ ಜೊತೆ ಒಪ್ಪಂದ ಮಾಡಿಕೊಂಡು ಬರುತ್ತಾರೆ ಆದರೆ ಇಲ್ಲಿ ಬಂದು ನಾನು ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸುತ್ತೇನೆ ಅಂತ ಅಂದ್ರೆ ಅದು ಇಲ್ಲಿ ನಡಯಲ್ಲ ಹಾಗಾಗಿ ನಮಗೆ ಯಾಕ ಬೇಕು ಪಟ್ಟಣದಲ್ಲಿ ಏನು ಆದರು ನಡಲಿ ಅದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ತಾಲೂಕು ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಕಾಣದ ಕೈಗಳ ಮಾತು ಕೇಳುತ್ತಾ ಸುಮ್ಮನೆ ಕುಳಿತು ಕೊಂಡಿದ್ದಾರೆ ಅಂತ ಸಾರ್ವಜನಿಕರು ಆರೋಪಿಸಿದ್ದಾರೆ, ಅಲ್ಲದೆ ಬಡ ಕುಟುಂಬಗಳು ಊಟಕ್ಕೆ ಗತಿ ಇಲ್ಲದೆ ಸಂದರ್ಭದ ಆ ಕುಟುಂಬದ ವ್ಯಕ್ತಿ ಕುಟುಂಬದ ವಸ್ತುಗಳ ಮಾರಲು ಸಿದ್ದವಾಗುತ್ತಾನೆ ಹೀಗಾದರೆ ಕುಟುಂಬದ ಬೀದಿಗೆ ಬರಲ್ವಾ ಯಾವುದೇ ಅನುಮಾನವಿಲ್ಲದೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ

ಮರಳು ದಂಧೆ : ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳ ಪಟ್ಟಣಕ್ಕೆ ಸಮೀಪ ಇರುವ ಲಿಂಗದಹಳ್ಳಿ, ಚಿಂಚೋಡಿ, ಬಾಗೂರು, ಮುದಗೋಟ, ಈ ಊರುಗಳ ಪಕ್ಕದಲ್ಲಿ ಹರಿಯುವ ಕೃಷ್ಣಾ ನದಿಯ ಮರಳು ಬಗೆದು ದೂರ ದೂರದ ಊರುಗಳಿಗೆ ಸರ್ಕಾರಕ್ಕೆ ಕಣ್ಣು ತಪ್ಪಿಸಿ ರಾಜಸ್ವಧನ ಪಾವತಿಸಿದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಇದನ್ನು ನಿಲ್ಲಿಸಬೇಕದ ಅಧಿಕಾರಿಗಳು ತಮಗೆ ವಾಹನ ಮಾಲೀಕರು ಕೈ ಬಿಸಿ ಮಾಡಿದರೆ ಸಾಕು ನೀವು ಎಷ್ಟು ಬೇಕಾದ್ರೂ ಸಾಗಿಸಬಹುದು ಎನ್ನುವ ಸ್ಥಿತಿ ಇದೆ, ಈ ಅಕ್ರಮ ಮರಳು ದಂಧೆಕೋರರ ಜೊತೆ ಕೆಲವು ತಾಲೂಕು ಅಧಿಕಾರಿಗಳು ಸಾಮಿಲ್ ಆಗಿರುವುದರಿಂದ ಈ ದಂಧೆ ಹೆಗ್ಗಲದೆ ನಡಯಿತಿದೆ, ತಾಲೂಕಿನ ಅಭಿವೃದ್ಧಿ ಹರಿಕಾರು ಕಣ್ಣಿಗೆ ಕಂಡರೂ ತಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುವಂತೆ ಕುಳಿತು ಕೊಂಡಿದ್ದಾರೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ,

ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಲೇವಾದೇವಿಗಾರರ ಹಾವಳಿ:

ಪಟ್ಟಣದಲ್ಲಿ ಅನಧಿಕೃತ ವಾಗಿ ಲೇವಾದೇವಿಗಳ ಸಂಖ್ಯೆ ಹೆಚ್ಚಾಗಿದೆ. ಅತಿಹೆಚ್ಚಿನ ದರದಲ್ಲಿ ಬಡ್ಡಿ ವಸೂಲಿ ಮಾಡಲಾಗುತ್ತಿದೆ. ಇವರ ಕಾಟ ತಾಳದೆ ಕೆಲವು ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ಗುಳೆ ಹೊಗಿದ್ದಾರೆ. ಇದರಿಂದ ಅವರ ಕುಟುಂಬಗಳು ಬೀದಿ ಪಾಲಾಗುತ್ತಿವೆ. ತಕ್ಷಣವೇ ಜಿಲ್ಲಾ ಸಹಕಾರ ಇಲಾಖೆಯಿಂದ ಪರಾವನಿಗೆ ಇಲ್ಲದೇ ಹಣಕಾಸು ವ್ಯವಾಹರ ಮಾಡುತ್ತಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಪಟ್ಟಣದ ಜನತೆ ಉಳಿಸಬೇಕೆಂದು ಗ್ರಾಮಸ್ಥರು ಒತ್ತಾತಿಸಿದ್ದಾರೆ.

ಗಲ್ಲಿ ಗಲ್ಲಿನ ಪಾನ್ ಶಾಪ್ ನಲ್ಲಿ ಸಾರಾಯಿ :

ಹೌದು ಪಟ್ಟಣ ಹಾಗೂ ಹಳ್ಳಿಗಳಲ್ಲಿ ಇರುವ ಪಾನ್ ಶಾಪ್ ಅಂಗಡಿಗಳಲ್ಲಿ ಸಾರಾಯಿ ಸಿಗುತ್ತದೆ ಮತ್ತು ಅಂಗಡಿಗೆ ವರ್ಜಿನಲ್ ಚಾಯಿಸ್ ಅಂತ ಜಾಹೀರಾತು ಹಾಕಿ ಮಧ್ಯ ಪ್ರಿಯರನ್ನು ಕೈ ಮಾಡಿ ಕರೆಯುತ್ತಿದ್ದಾರೆ ಹಾಗಾಗಿ ಯುವಕರು ಹೆಚ್ಚು ಹೆಚ್ಚು ಕುಡಿಯುವ ಅಭ್ಯಾಸ ಮಾಡಿಕೊಂಡು ಹಾಳಾಗುತ್ತಿದ್ದಾರೆ. ತಂದೆ-ತಾಯಿಯರ ಕೇಳೋರೆ ಇಲ್ಲ. ಬಡ ಕುಟುಂಬಗಳು ಬೀದಿಗೆ ಬರಬಾರದು, ಯುವಕರು ಹಾಳಾಗಬಾರದು ಎಂದರೆ ಜಿಲ್ಲೆಯ ಸಂಬಂಧ ಪಟ್ಟ ಅಧಿಕಾರಿಗಳು ತಾವೇ ಖುದ್ದಾಗಿ ಫೀಲ್ಡಿಗಿಳಿದು ಮಧ್ಯೆ ಮಾರಾಟ ಮಾಡುವರ ಮೇಲೆ ಕ್ರಮ ಜರುಗಿಸಬೇಕು ಮತ್ತು ಇದಕ್ಕೆ ಸಾತ್ ನೀಡುತ್ತಿರುವ ಅಧಿಕಾರಿಗಳನ್ನು ಕ್ರಮ ಕೈಗೊಳ್ಳಬೇಕು ಎಂದು ಎಸ್ ಎಫ್ ಹಾಯ್ ಸಂಘಟನೆಯ ತಾಲೂಕು ಕಾರ್ಯದರ್ಶಿ ಮಹಾಲಿಂಗ್ ದೊಡ್ಡಮನಿ ಬಡಕುಟುಂಬಗಳಿಗೆ ದಾರಿದೀಪವಾಗಬೇಕು ಸಾಯುವ ಜೀವಗಳನ್ನು ತಿಳಿಸಿಕೊಡಬೇಕೆಂದು ನೂತನವಾಗಿ ಜಿಲ್ಲೆಗೆ ಆಗಮಿಸಿ ಎಸ್ಪಿ ಅವರಿಗೆ ಪತ್ರಿಕೆ ಪ್ರಕಟಣೆ ಮೂಲಕ ಸಾರ್ವಜನಿಕರ ಪರವಾಗಿ ಒತ್ತಾಯವಾಗಿದೆ,

ವರದಿ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ✍️

You May Also Like

error: Content is protected !!