ತುಮಕೂರು- ಯಶವಂತಪುರ ನಡುವೆ ಓಡಲಿವೆ ಹೆಚ್ಚುವರಿ ರೈಲು

ಬೆಂಗಳೂರು: ವಿದ್ಯುದೀಕರಣಗೊಂಡಿರುವ ಬೆಂಗಳೂರಿನ ಯಶವಂತಪು ಮತ್ತು ತುಮಕೂರು ನಡುವಿನ ರೈಲು ಮಾರ್ಗ ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆಗೆ ಸಿದ್ಧವಾಗಿದೆ. ಪರಿಶೀಲನೆ ಪೂರ್ಣಗೊಂಡ ಬಳಿಕ ಯಶವಂತಪುರ- ತುಮಕೂರು ನಡುವೆ ಹೆಚ್ಚುವರಿ ರೈಲುಗಳು ಸಂಚಾರ ನಡೆಸಲಿವೆ.

ಯಶವಂತಪುರ-ತುಮಕೂರು ನಡುವಿನ 69.47 ಕಿ. ಮೀ. ವಿದ್ಯುದೀಕರಣಗೊಂಡಿರುವ ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಶೀಘ್ರದಲ್ಲೇ ಪರಿಶೀಲನೆ ನಡೆಸಲಿದ್ದಾರೆ. ನೈಋತ್ಯ ರೈಲ್ವೆ ಇದಕ್ಕೆ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಕೆ ಮಾಡಿದೆ.

ನೈಋತ್ಯ ರೈಲ್ವೆ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ ಕಳೆದ ತಿಂಗಳಿನಿಂದ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರವನ್ನು ನಡೆಸಿದೆ. ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಸಿಆರ್‌ಎಸ್ ಪರಿಶೀಲನೆಗಾಗಿ ಅಗತ್ಯ ದಾಖಲೆಗಳ ಜೊತೆಗೆ ಆಹ್ವಾನ ನೀಡಲಾಗಿದೆ.

ನೈಋತ್ಯ ರೈಲ್ವೆ ಮುಖ್ಯ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ಈ ಕುರಿತು ಮಾಹಿತಿ ನೀಡಿದ್ದಾರೆ, “ನಾವು ಸಿಆರ್‌ಎಸ್ ಪರಿಶೀಲನೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದು, ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ” ಎಂದು ಹೇಳಿದ್ದಾರೆ.

ಯಶವಂತಪುರ-ತುಮಕೂರು ಮಾರ್ಗದಲ್ಲಿನ ತುಮಕೂರು-ಹಿರೇಹಳ್ಳಿ ಮಾರ್ಗದ ಸಿಆರ್‌ಎಸ್ ಪರಿಶೀಲನೆ ಈಗಾಗಲೇ ಪೂರ್ಣಗೊಂಡಿದೆ. ಕೆಲವು ಬದಲಾವಣೆಗಳನ್ನು ಸೂಚಿಸಿದ್ದು, ಅವುಗಳನ್ನು ಪೂರ್ಣಗೊಳಿಸಲಾಗಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!