ದೀಪಾವಳಿಗೆ ಕಿಸಾನ್‌ ಸಮ್ಮಾನ್‌ ಹಣ ದುಪ್ಪಟ್ಟು? ವಾರ್ಷಿಕ 6000 ಬದಲು 12,000 ನೆರವು!

ಹೊಸದಿಲ್ಲಿ: ದೀಪಾವಳಿ ಹಬ್ಬಕ್ಕೆ ಕೇಂದ್ರ ಸರಕಾರ ರೈತರಿಗೆ ಸಿಹಿ ಸುದ್ದಿ ನೀಡುವ ಸಾದ್ಯತೆ ಹೆಚ್ಚಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನ ದುಪ್ಪಟ್ಟು ಮಾಡುವ ಕುರಿತ ಪ್ರಸ್ತಾವನೆ ಸರಕಾರದ ಮುಂದಿದೆ. ಒಂದು ವೇಳೆ ಕೇಂದ್ರವು ಈ ಪ್ರಸ್ತಾವನೆಗೆ ಒಪ್ಪಿದರೆ ರೈತರಿಗೆ ವಾರ್ಷಿಕವಾಗಿ 6000 ರೂಪಾಯಿ ಬದಲು 12000 ರೂಪಾಯಿ ಲಭ್ಯವಾಗಲಿದೆ. ಅಂದರೆ ವರ್ಷದಲ್ಲಿ ಮೂರು ಕಂತುಗಳಲ್ಲಿ ತಲಾ 2000 ರೂಪಾಯಿ ಜಮೆ ಮಾಡಲಾಗುತ್ತಿತ್ತು, ಇನ್ಮುಂದೆ ತಲಾ 4000 ರೂ. ಜಮೆಯಾಗಲಿದೆ.

ಪಿಎಂ ಕಿಸಾನ್ ಸಮ್ಮಾನ್‌ ಯೋಜನೆ(PM Kisan Samman Nidhi Yojana)ಯ ಮೊತ್ತವನ್ನು ದ್ವಿಗುಣಗೊಳಿಸಿದರೆ, ರೈತರ ಕಂತನ್ನು 2000 ರೂ. ನಿಂದ 4000 ರೂಪಾಯಿಗೆ ಹೆಚ್ಚಿಸಲಾಗುತ್ತದೆ. 2021ರ ದೀಪಾವಳಿಗೂ ಮುನ್ನವೇ ನರೇಂದ್ರ ಮೋದಿ ಸರ್ಕಾರ ಈ ಕುರಿತು ಘೋಷಣೆ ಹೊರಡಿಸಬಹುದು ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ, ಬಿಹಾರದ ಕೃಷಿ ಸಚಿವ ಅಮರೇಂದ್ರ ಪ್ರತಾಪ್ ಸಿಂಗ್ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ದಿಲ್ಲಿಯಲ್ಲಿ ಭೇಟಿಯಾಗಿದ್ದಾರೆ. ನಂತರ ಮಾಧ್ಯಮಗಳ ಮಾತನಾಡಿ ಪಿಎಂ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಮೊತ್ತವನ್ನು ದ್ವಿಗುಣಗೊಳಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಪಿಎಂ ಕಿಸಾನ್ ಮೊತ್ತ ದ್ವಿಗುಣಗೊಳಿಸುವ ಊಹಾಪೋಹಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ. ಅಲ್ಲದೆ ಇದಕ್ಕಾಗಿ ಸರ್ಕಾರವು ಸಿದ್ಧತೆಯಲ್ಲಿ ತೊಡಗಿದೆ ಎನ್ನಲಾಗಿದೆ.

ನೀವು ಅದರ ವಿವರಗಳನ್ನು ಪಿಎಂ ಕಿಸಾನ್ ಆನ್ಲೈನ್ ಪೋರ್ಟಲ್ www.pmkisan.gov.in ಅಥವಾ ಮೊಬೈಲ್ ಆಪ್ ಮೂಲಕ ಪರಿಶೀಲಿಸಬಹುದು. ಅದರ ವ್ಯಾಪ್ತಿಯನ್ನು ವಿಸ್ತರಿಸಲು, NIC (ರಾಷ್ಟ್ರೀಯ ಮಾಹಿತಿ ಕೇಂದ್ರ) ಒಂದು ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಿದೆ.

You May Also Like

error: Content is protected !!