ಬೆಮೆಲ್ ಕಾಂತರಾಜುಗೆ ಜೆಡಿಎಸ್ ಬಾಗಿಲು ಮುಚ್ಚಿದ್ದು ರಾಜಕೀಯ ಭವಿಷ್ಯಕ್ಕಾಗಿ ಡಿಕೆಶಿ, ಸಿದ್ದರಾಮಯ್ಯ ಸಂಪರ್ಕ

ತುಮಕೂರು: ಜೆಡಿಎಸ್ ನಿಂದ ಬಾಗಿಲು ಮುಚ್ಚಿದೆ ಎಂದ ಮೇಲೆ ಬೇರೆ ಬಾಗಿಲು ತಟ್ಟಬೇಕಲ್ಲ. ಖಂಡಿತವಾಗಿ ಜೆಡಿಎಸ್ ಬಾಗಿಲು ಮುಚ್ಚಿದ್ದು, ನನ್ನ ರಾಜಕೀಯ ಭವಿಷ್ಯಕ್ಕಾಗಿ ನಾನು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರ ಸಂಪರ್ಕದಲ್ಲಿ ಇದ್ದೇನೆ ಎಂದು ಜೆಡಿಎಸ್ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುರುವೇಕೆರೆಯಲ್ಲಿ ನಾನು ವಿಧಾನಸಭೆಗೆ ಸ್ಪರ್ಧಿಸಬೇಕು. ಕುಮಾರಸ್ವಾಮಿ ಎಮ್ ಟಿ ಕೃಷ್ಣಪ್ಪಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಇಂಥಹ ಮಾತುಗಳು ನಾವು ಹಿಂದಿನಿಂದಲೂ ನೋಡುತಿದ್ದೇವೆ. ಅವರು ಒಂದೊಂದು ಸಾರಿ ಒಂದೊಂದು ಮಾತು ಹೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ಹೆಚ್‍ಡಿಕೆಗೆ ಈ ಮಾತುಗಳು ಎಷ್ಟು ಶೋಭೆ ತರುತ್ತದೆ ಅನ್ನೋದು ಅವರೇ ಯೋಚನೆ ಮಾಡಲಿ. ಒಂದು ಕ್ಷೇತ್ರದಲ್ಲಿ ಇಬ್ಬಿಬ್ಬರು ನಾಯಕರನ್ನು ಬೆಳೆಸೋದು ಅವರಿಗೆ ರೂಢಿಯಾಗಿದೆ. ಮುಂದಿನ ದಿನಗಳಲ್ಲಿ ಜನರ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!