ಎಚ್ಚರ..! ಮತ್ತೆ ಅಬ್ಬರಿಸುತ್ತಿದೆ ಡೆಂಘೀ : ಮಕ್ಕಳೇ ಟಾರ್ಗೆಟ್

ರಾಜ್ಯದಲ್ಲಿ ಬಿಟ್ಟು ಬಿಡದೇ ಸುರಿದ ಮಳೆಯಿಂದಾಗಿ ಮತ್ತೆ ಡೆಂಘೀ ಹಾವಳಿ ಹೆಚ್ಚಾಗಿದೆ. ಕ್ಷಣ ಕ್ಷಣಕ್ಕೂ ಬದಲಾಗುತ್ತಿರೊ ಸಿಲಿಕಾನ್ ಸಿಟಿಯ ಹವಮಾನದಿಂದ ಡೆಂಘೀ ಅಬ್ಬರಿಸುತ್ತಿದೆ. ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಮಕ್ಕಳಿಗೆ ಇದು ಹೆಚ್ಚಾಗಿ ಕಾಡ್ತಿದೆ. ಅನಾರೋಗ್ಯ ಪುಟಾಣಿಗಳಿಗೆ ನೆಗಡಿ, ಕೆಮ್ಮು ಹಾಗೂ ಕಫ ಹೆಚ್ಚಾಗ್ತಿದ್ದು, ನಿರಂತರ ಮಳೆಯಿಂದಾಗಿ ನಗರದಲ್ಲಿ‌ 717 ಪ್ರಕರಣ ದಾಖಲಾಗಿದೆ.

ಕಳೆದ ಒಂದು ವಾರದಿಂದ ಡೆಂಘೀ ಪ್ರಕರಣ ಹೆಚ್ಚಾಗಿದೆ. ರಾಜ್ಯದಲ್ಲಿ ಒಟ್ಟು 3707 ಪ್ರಕರಣ ದಾಖಲಾಗಿದೆ. ಕಳೆದ ವರ್ಷ 3823 ಮಂದಿಗೆ ಡೆಂಘೀ ಕಂಡು ಬಂದಿತ್ತು. ಆದ್ರೆ ಈ ವರ್ಷ ಡೆಂಘಿ ಕೇಸ್ ಗಳು ಹೆಚ್ಚಳವಾಗುತ್ತಿರುವುದು ಆತಂಕಕಾರಿಯಾಗಿದೆ.

ಗ್ರಾಮೀಣ ಪ್ರದೇಶದಗಳಿಗೆ ಹೋಲಿಸಿದ್ರೆ ರಾಜಾಧಾನಿಯಲ್ಲಿಯೇ ಹೆಚ್ಚು ಕೇಸ್ ದಾಖಲಾಗಿದೆ. ಬೆಂಗಳೂರು ನಗರದಲ್ಲಿದಲ್ಲಿ 717 ಪ್ರಕರಣ ದಾಖಲಾದ್ರೆ, ಉಡುಪಿಯಲ್ಲಿ 312,ಶಿವಮೊಗ್ಗದಲ್ಲಿ 329,ಕೊಪ್ಪಳದಲ್ಲಿ 26,ಹಾವೇರಿಯಲ್ಲಿ 177,ದಕ್ಷಿಣ ಕನ್ನಡದಲ್ಲಿ 369,ದಾವಣಗೆರೆಯಲ್ಲಿ 209,ಬಳ್ಳಾರಿಯಲ್ಲಿ 200,ವಿಜಯಪುರದಲ್ಲಿ 200 ಪ್ರಕರಣ ದಾಖಲಾಗಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!