ನ.1ರ ‘ಕನ್ನಡ ರಾಜ್ಯೋತ್ಸವ ಆಚರಣೆಗೆ ಮಾರ್ಗಸೂಚಿ ಪ್ರಕಟ

ಕನ್ನಡ ರಾಜೋತ್ಸವ ಆಚರಣಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ರಾಜೋತ್ಸವ ವೇಳೆ ನಡೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನರ ಮಿತಿ 500ಕ್ಕಿಂತ ಹೆಚ್ಚಿರಬಾರದು ಎಂದಿದೆ.

ದೈಹಿಕ ಅಂತರವಿಲ್ಲದೇ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿದ್ದು, ಇನ್ನು ಈ ವೇಳೆ ನಡೆಸುವ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಿದೆ.

ಅದ್ರಂತೆ, ಈ ಕಾರ್ಯಕ್ರಮ ಆಚರಣೆಗೆ ವೇಳೆ ಕೋವಿಡ್‌-19 ನಿಯಮಗನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಸೂಚಿಸಿದೆ. ಇನ್ನು ರಾಜೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳು ಈ ಕೆಳಗಿನಂತಿವೆ.

  • ಸರಳ ಮತ್ತು ಗೌರವ ಪೂರ್ವಕವಾಗಿ ರಾಜೋತ್ಸವ ಆಚರಣೆ
  • ಸಾಮಾಜಿಕ ಅಂತರ, ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ ಕಡ್ಡಾಯ
  • ಕಾರ್ಯಕ್ರಗಳಲ್ಲಿ ಗರಿಷ್ಠ 500 ಜನ ಸೇರಲು ಮಾತ್ರ ಅವಕಾಶ
  • ಸಾಮಾಜೀಕ ಅಂತರವಿಲ್ಲದ ಕಾರ್ಯಕ್ರಮ ನಿಷೇದ
  • ಕಾನೂನು ಸುವ್ಯವಸ್ಥೆ ಯಾವುದೇ ಭಂಗ ಬಾರದಂತೆ ಆಚರಣೆ
  • ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಕಡ್ಡಾಯ
  • ಕನಿಷ್ಠ ಸಾಂಸ್ಕೃತಿಕ ಹಾಗೂ ಮನರಂಜನ ಕಾರ್ಯಕ್ರಮ ಹಮ್ಮಿಕೊಳ್ಳುವುದು
  • ಮಕ್ಕಳು, ಹಿರಿಯ ವಯಸ್ಕರು ಮತ್ತು ಆನಾರೋಗ್ಯದಿಂದ ಬಳಲುತ್ತಿರುವವರು ಕಾರ್ಯಕ್ರಮದಲ್ಲಿ ಬಾಗವಹಿಸಿದಂತೆ ಎಚ್ಚರಿಕೆ
  • ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನ ಕಡ್ಡಾಯ ಪಾಲಿಕೆಗೆ ಸೂಚನೆ

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!