ಸಿಹಿ ಸುದ್ದಿ: ಮತ್ತೆ ಒಂದಾಗುತ್ತಿದ್ದಾರೆ ಡಿಬಾಸ್ ದರ್ಶನ್ – ಕಿಚ್ಚ ಸುದೀಪ್!

ಇಂದಿನ ಪೀಳಿಗೆಯಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಟರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ತಮ್ಮದೇ ಶೈಲಿಯಲ್ಲಿ ಸಿನಿಮಾಗಳನ್ನು ಮಾಡಿಕೊಂಡು, ಕೋಟ್ಯಾಂತರ ಅಭಿಮಾನಿಗಳು, ಯಶಸ್ಸು, ಕೀರ್ತಿ ಎಲ್ಲವನ್ನು ಸಂಪಾದಿಸಿದ್ದಾರೆ ದರ್ಶನ್ ಮತ್ತು ಸುದೀಪ್. ನಮಗೆಲ್ಲ ತಿಳಿದಿರುವ ಹಾಗೆ ಈ ಇಬ್ಬರು ಒಂದು ಕಾಲದಲ್ಲಿ ಬಹಳ ಆತ್ಮೀಯ ಗೆಳೆಯರಾಗಿದ್ದರು. ಇವರಿಬ್ಬರನ್ನು ಕುಚಿಕುಗಳು ಎಂದೇ ಕೆರೆಯಲಾಗಿತ್ತು.

ಸುದೀಪ್ ಮತ್ತು ದರ್ಶನ್ ಅವರ ಅಭಿಮಾನಿಗಳು ಇವರಿಬ್ಬರನ್ನು ಕನ್ನಡದ ಶ್ರೇಷ್ಠ ನಟರಾದ ಸಾಹಸಸಿo-ಹ ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ನೇಹಕ್ಕೆ ಹೋಲಿಕೆ ಮಾಡುತ್ತಿದ್ದರು. ಇವರಿಬ್ಬರ ಪತ್ನಿಯರು ಕೂಡ ಒಳ್ಳೆಯ ಸ್ನೇಹಿತರಾಗಿದ್ದರು. ಹಲವಾರು ಸಭೆ ಸಮಾರಂಭಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು, ಈ ಇಬ್ಬರು ನಟರನ್ನು ಜೊತೆಯಾಗಿ ನೋಡುವುದೇ ಅಭಿಮಾನಿಗಳಿಗೆ ಒಂದು ರೀತಿ ಹಬ್ಬದಂತೆ ಇರುತ್ತಿತ್ತು.

ಆದರೆ ಈ ಸ್ನೇಹದ ಮೇಲೆ ಯಾರ ಕೆ-ಟ್ಟ ದೃಷ್ಟಿ ಬಿ’ತ್ತೋ, ಇವರಿಬ್ಬರ ನಡುವೆ ಮ-ನಸ್ತಾಪಗಳು ಮೂಡಿ, ದರ್ಶನ್ ಮತ್ತು ಸುದೀಪ್ ಸ್ನೇಹ ಮು-ರಿದು ಬಿ’ತ್ತು. ಇನ್ನು ಮುಂದೆ ಇವರಿಬ್ಬರು ಮೊದಲಿನ ಹಾಗೆ ಆಗುತ್ತಾರೆ ಎನ್ನುವುದರ ಬಗ್ಗೆ ಯಾವುದೇ ಸೂಚನೆ ಅಥವಾ ನಂಬಿಕೆ ಇಲ್ಲ. ಆದರೆ ಇವರ ಅಭಿಮಾನಿಗಳು ಮಾತ್ರ ಇಂದಲ್ಲ ನಾಳೆ, ದರ್ಶನ್ ಸುದೀಪ್ ಒಂದಾಗುತ್ತಾರೆ ಎಂಬ ಆಸೆಯಿಂದ ಕಾಯುತ್ತಿದ್ದಾರೆ.

ಇದೀಗ ದರ್ಶನ್ ಸುದೀಪ್ ಮತ್ತೆ ಒoದಾಗಬೇಕು ಎಂದು ಟ್ವಿಟರ್ ನಲ್ಲಿ ಅಭಿಯಾನ ಶುರುವಾಗಿದೆ. ಸ್ಯಾಂಡಲ್ ವುಡ್ ನಿರ್ಮಾಪಕ ಸೂರಪ್ಪ ಬಾಬು ಅವರ ಟ್ವಿಟರ್ ಖಾತೆಯಿಂದ ದರ್ಶನ್ ಮತ್ತು ಸುದೀಪ್ ಜೊತೆಯಾಗಿರುವ ಫೋಟೋ ಪೋಸ್ಟ್ ಮಾಡಿ ಇವರಿಬ್ಬರು ಒಂದಾಗಬೇಕು ಎಂದು ಹ್ಯಾಶ್ ಟ್ಯಾಗ್ ಶುರು ಮಾಡಲಾಗಿದೆ. ಈ ಹೊಸ ಹ್ಯಾಶ್ ಟ್ಯಾಗ್ ಬಳಸಿ 10 ಸಾವಿರಕ್ಕೂ ಹೆಚ್ಚು ಟ್ವೀಟ್ ಮಾಡಲಾಗಿದೆ. ಇಬ್ಬರು ನಟರ ಅಭಿಮಾನಿಗಳು ಇವರಿಬ್ಬರನ್ನು ಮತ್ತೊಮ್ಮೆ ಜೊತೆಯಾಗಿ ನೋಡಲು ಬಯಸಿದ್ದಾರೆ.

ಇದೆ ವಿಚಾರದ ಕುರಿತು ಹಿರಿಯಣತ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಕೂಡ ಟ್ವೀಟ್ ಮಾಡಿದ್ದಾರೆ. ಆದರೆ ಸೂರಪ್ಪ ಬಾಬು ಮತ್ತು ರವಿಚಂದ್ರನ್ ಇಬ್ಬರ ಟ್ವಿಟರ್ ಅಕೌಂಟ್ ಗಳು ಕೂಡ ಫೇ-#ಕ್ ಅಕೌಂಟ್ ಎಂದು ತಿಳಿದುಬಂದಿದೆ. ಯಾವುದೇ ಸೆಲೆಬ್ರಿಟಿ ಆಗಲಿ ಈ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಆದರೆ ಅಭಿಮಾನಿಗಳು ಇವರಿಬ್ಬರ ಸ್ನೇಹ ಮತ್ತೊಮ್ಮೆ ಚಿ-ಗುರಲಿ ಎಂದು ಕಾಯುತ್ತಿದ್ದಾರೆ. ಈ ಟ್ವೀಟ್ ಇಂದಾಗಿ ಏನಾದರೂ ಬದಲಾವಣೆ ಆಗಲಿ ಎಂಬುದು ಅಭಿಮಾನಿಗಳ ಆಸೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!