ಬಿಜೆಪಿ ಜತೆ ಜೆಡಿಎಸ್ ಮ್ಯಾಚ್ ಫಿಕ್ಸಿಂಗ್‌. ವಿಪಕ್ಷ ನಾಯಕ ಸಿದ್ದರಾಮಯ್ಯ

ತುಮಕೂರು : ಜೆಡಿಎಸ್​ನವರ ಟಾರ್ಗೆಟ್​ ಬಿಜೆಪಿಯಲ್ಲ, ಬದಲಾಗಿ ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ಸೋಲಿಸಿದರೆ ಅವರಿಗೆ ಲಾಭ ಎಂದುಕೊಂಡಿದ್ದಾರೆ. ಅವರು ಮೂರ್ಖರು. ಅಲ್ಪಸಂಖ್ಯಾತರು ಪ್ರಬುದ್ಧರಿದ್ದಾರೆ. ಅವರಿಗೆ ಗೊತ್ತು. ಜೆಡಿಎಸ್​ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂಬ ಅರಿವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬಿಜೆಪಿ ಜೊತೆ ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ : ತುಮಕೂರಿನಲ್ಲಿ ಮಾಜಿ ಶಾಸಕ ರಫೀಕ್ ಅಹಮದ್ ಅವರ ಕಾಲೇಜಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಬಿಜೆಪಿ ಜೊತೆ ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ. ಎರಡೂ ಕಡೆ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಜೆಡಿಎಸ್‌ನವರು ಕಣಕ್ಕೆ ಇಳಿಸಿದ್ದಾರೆ. ಹಿಂದೆ ಎಂದೂ ಕೂಡ ಹಾಕಿಲ್ಲ. ಮುಸ್ಲಿಂ ಮತಗಳನ್ನು ಬೇರ್ಪಡಿಸಲು ಜೆಡಿಎಸ್ ತಂತ್ರಗಾರಿಕೆ ಅಡಗಿದೆ. ಈ ಮೂಲಕ ಬಿಜೆಪಿ ಬೆಂಬಲಿಸಲು ಬಯಸಿದ್ದರು ಎಂದರು.

ಈ ಉಪ ಚುನಾವಣೆಗಳು ದಿಕ್ಸೂಚಿ ಅಲ್ಲ : ಈ ಉಪ ಚುನಾವಣೆಗಳು ದಿಕ್ಸೂಚಿ ಅಲ್ಲ. ಸರಕಾರದ ಮೇಲೆ ಆಕ್ರೋಶವಿದೆ. ಸಿಎಂ ಬಸವರಾಜ ಬೊಮ್ಮಾಯಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಹಾನಗಲ್​ನಲ್ಲಿ ಯಾವುದೇ ಕೆಲಸಗಳು ಆಗಿಲ್ಲ. ಬಿಜೆಪಿ ಸರಕಾರ ಬಂದ ನಂತರ ಒಂದೇ ಒಂದು ಮನೆ ಮಂಜೂರು ಮಾಡಲು ಆಗಿಲ್ಲ. ಜನರಿಗೆ ಬಿಜೆಪಿ ಸರಕಾರದ ಬಗ್ಗೆ ಬೇಸರವಿದೆ. ಹಾನಗಲ್​ನಲ್ಲಿ 5 ದಿನ ಪ್ರಚಾರ ಮಾಡಿದ್ದೇನೆ. ಅಲ್ಲಿ ಉತ್ತಮ ಪ್ರತಿಕ್ರಿಯೆ ಜನರಿಂದ ಲಭಿಸಿದೆ ಎಂದು ತಿಳಿಸಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!