58 ಸೇವೆಗಳು ಮನೆ ಬಾಗಿಲಿಗೆ: ಸಿ.ಎಂ.ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತದ ಭಾರಿ ಸುಧಾರಣೆಗೆ ಮುಂದಾಗಿದ್ದಾರೆ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸಲು ಕ್ರಮ ಕೈಗೊಂಡಿದ್ದಾರೆ. ಪಡಿತರ ಸೇರಿದಂತೆ ಸರ್ಕಾರದ 58 ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುವುದು

ಜನರ ಮನೆಬಾಗಿಲಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲು ಜನಸೇವಕ, ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆಗೆ ಜನಸ್ಪಂದನ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಯೋಜನೆ ಆರಂಭವಾಗಲಿದ್ದು, ಜನವರಿ 26 ರಿಂದ ರಾಜ್ಯದ ಎಲ್ಲ ಗ್ರಾಮಗಳಿಗೆ ವಿಸ್ತರಣೆಯಾಗಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಪಡಿತರ ಚೀಟಿ, ಆಧಾರ್ ಕಾರ್ಡ್, ವಿವಿಧ ಪ್ರಮಾಣಪತ್ರ, ಪಿಂಚಣಿ ಸೇರಿದಂತೆ 8 ಇಲಾಖೆಗಳ 58 ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಜನಸೇವಕ ಯೋಜನೆ (ಮಾಹಿತಿಗೆ www.janasevaka.karnataka.gov.in, 080 44554455) ರೂಪಿಸಲಾಗಿದೆ. ಸರ್ಕಾರಿ ಸೇವೆಗಳ ಬಗ್ಗೆ ದೂರು, ಕುಂದುಕೊರತೆ ಹೇಳಿಕೊಳ್ಳಲು ಜನಸ್ಪಂದನ(1092) ಯೋಜನೆ ತರಲಾಗಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!