ಚನ್ನಸಾಗರ ಚೆಕ್‌ಡ್ಯಾಂಗೆ ಗಂಗಾಪೂಜೆ ಮತ್ತು ಬಾಗೀನಾ ಅರ್ಪಿಸಿದ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್

ಕೊರಟಗೆರೆ:- ಕೊರಟಗೆರೆ ಕ್ಷೇತ್ರದ ಜನತೆ ನನಗೆ ನೀಡಿದ ಅಧಿಕಾರ ಅವರ ಸೇವೆಗಾಗಿ ಹಗಲುರಾತ್ರಿ ಮನೆಮಗನಾಗಿ ದುಡಿದಿದ್ದೇನೆ. ೨೦೧೩ರಿಂದ ೨೦೧೮ರ ಅವಧಿಯಲ್ಲಿ ಅಂತರ್ಜಲ ಅಭಿವೃದ್ದಿಗೆ ನಾನು ಮಾಡಿರುವ ಕೆಲಸಗಳೇ ಇಂದು ಸಾಕ್ಷಿಯಾಗಿವೆ. ಬತ್ತಿಹೊಗಿದ್ದ ಸಾವಿರಾರು ಕೊಳವೆಬಾವಿಯ ಅಂರ್ತಜಲ ಮಟ್ಟ ಇಂದು ಏರಿಕೆಯಾಗಿ ರೈತರ ಮುಖದಲ್ಲಿ ಮತ್ತೇ ಮಂದಹಾಸ ಮೂಡಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರ ಪುರವಾರ ಹೋಬಳಿ ಕೊಡಗದಾಲ ಗ್ರಾಪಂ ವ್ಯಾಪ್ತಿಯ ಚನ್ನಸಾಗರ ಸಮೀಪದಲ್ಲಿ ಹರಿಯುವ ಸುವರ್ಣಮುಖಿ ನದಿಗೆ ಅಡ್ಡಲಾಗಿ ಕಟ್ಟಿರುವ ಚೆಕ್‌ಡ್ಯಾಂ ಕಂ ಬ್ರೀಡ್ಜ್‌ಗೆ ರೈತರ ಜೊತೆಗೂಡಿ ಇತ್ತೀಚಿಗೆ ಗಂಗಾಪೂಜೆ ಮತ್ತು ಬಾಗೀನಾ ಅರ್ಪಿಸಿ ನಂತರ ರೈತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಾಧುಸಂತರ ತಪೋಭೂಮಿ ಸಿದ್ದರಬೇಟ್ಟದ ತಪ್ಪಲಿನಲ್ಲಿ ಹುಟ್ಟಿಹರಿಯುವ ಸುವರ್ಣಮುಖಿ ನದಿ ಮತ್ತು ಜಯಮಂಗಳಿ ನದಿಗಳಿಗೆ ಅಡ್ಡಲಾಗಿ ೨೦ಕೋಟಿಗೂ ಅಧಿಕ ವೆಚ್ಚದಲ್ಲಿ ೧೫ಕ್ಕೂ ಅಧಿಕ ಚೆಕ್‌ಡ್ಯಾಂ ಕಟ್ಟಿಸಿದ್ದೇನೆ. ಥರಟಿ ಮತ್ತು ಬರಕ ಬಳಿ ಕೆರೆಗಳ ನಿರ್ಮಾಣ ಆಗಿವೆ. ಹಳ್ಳಕೊಳ್ಳಗಳಿಗೆ ಅಡ್ಡಲಾಗಿ ೩೦ಕೋಟಿಗೂ ಅಧಿಕ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದೇನೆ. ಮಳೆರಾಯನ ಕೃಪೆಯಿಂದ ಇಂದು ಅವೇಲ್ಲವು ತುಂಬಿ ಹರಿಯುತ್ತೀವೆ ಎಂದು ಸಂತಷ ವ್ಯಕ್ತಪಡಿಸಿದರು.

ಕೊಡಗದಾಲ ಗ್ರಾಪಂ ಮಾಜಿ ಅಧ್ಯಕ್ಷ ಗೋವರ್ಧನ್ ಮಾತನಾಡಿ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಪರವಾರ ಹೋಬಳಿ ಒಂದರಲ್ಲೇ ಸುಮಾರು ೧೦ಕೋಟಿ ವೆಚ್ಚದಲ್ಲಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ಚೆಕ್‌ಡ್ಯಾಂ ಕಂ ಬ್ರೀಡ್ಜ್ ನಿರ್ಮಾಣ ಮಾಡಿಸಿರುವ ಪರಿಣಾಮ ಬತ್ತುಹೋಗಿದ್ದ ಕೊಳವೆಬಾವಿಯಲ್ಲಿ ನೀರು ಬರುತ್ತೀದೆ. ಕೊರಟಗೆರೆ ಕ್ಷೇತ್ರದ ಆಧುನಿಕ ಭಗೀರಥನ ರೀತಿಯಲ್ಲಿ ೨೦೧೩ರಿಂದ ೨೦೧೮ರ ಅವಧಿಯಲ್ಲಿ ರೈತರ ಪರವಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಪುರವಾರ ಹೋಬಳಿ ಒಂದರಲ್ಲೇ ೧೦ಕೋಟಿಗೂ ಅಧಿಕ ವೆಚ್ಚದಲ್ಲಿ ಚನ್ನಸಾಗರ, ಬಡಚೌಡನಹಳ್ಳಿ, ಸಂಕಾಪುರ, ಕೋಡ್ಲಾಪುರ, ಚುಂಚೇನಹಳ್ಳಿ, ಪುರವಾರ ಬಳಿಯ ಸುವರ್ಣಮುಖಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಚೆಕ್‌ಡ್ಯಾಂ ಕಂ ಬ್ರೀಡ್ಜ್‌ನಿಂದ ಅಂತರ್ಜಲ ಮಟ್ಟ ಏರಿಕೆ ಕಂಡ ಹಿನ್ನಲೆಯಲ್ಲಿ ಪುರವಾರ ಭಾಗದ ರೈತರೇ ವಿಶೇಷ ಕಾರ್ಯಕ್ರಮ ಆಯೋಜಿಸಿ ಮಾಜಿ ಶಾಸಕರಾದ ಪಿ.ಆರ್.ಸುಧಾಕರಲಾಲ್‌ಗೆ ಸನ್ಮಾನಿಸಿ ಗೌರವಿಸಿ ಕೊರಟಗೆರೆ ಕ್ಷೇತ್ರದ ಆಧುನಿಕ ಅಂರ್ತಜಲ ಭಗೀರಥ ಎಂಬ ಬಿರುದು ನೀಡಿದ ಘಟನೆ ನಡೆದಿದೆ.

ಕಾರ್ಯಕ್ರಮದಲ್ಲಿ ಪುರವಾರ ಜೆಡಿಎಸ್ ಅಧ್ಯಕ್ಷ ಸತೀಶ್, ವಿದ್ಯಾರ್ಥಿ ಜನತಾದಳ ಅಧ್ಯಕ್ಷ ಸಂತೋಷ್, ಕೊಡಗದಾಲ ಗ್ರಾಪಂ ಮಾಜಿ ಅಧ್ಯಕ್ಷ ಗೋವರ್ಧನ್, ಸದಸ್ಯರಾದ ಲಿಂಗರಾಜು, ಮುಖಂಡರಾದ ಕಾಂತರಾಜು, ವೇಣುಗೋಪಾಲ್, ಮಲ್ಲಕಾರ್ಜುನ್, ಹನುಮಂತರಾಜು, ಕುಮಾರ್ ಸೇರಿದಂತೆ ಇತರರು ಇದ್ದರು.

You May Also Like

error: Content is protected !!