ಮಟ್ಕಾ ದಂದೆ ಕಡಿವಾಣಕ್ಕೆ ಆಗ್ರಹ

ಪಾವಗಡ : ತಾಲೂಕಿನಾದ್ಯಂತ ಮಟ್ಕಾ ದಂದೆ ರಾಜಾರೋಷವಾಗಿ ನಡೆಯುತ್ತಿದ್ದು, ಪ್ರತಿನಿತ್ಯ ಕೊಟ್ಯಾಂತರ ರೂಗಳ ವ್ಯವಹಾರ ಮೊಬೈಲ್ ಮೂಲಕ ನಡೆಯುತ್ತಿದ್ದು, ದಂದೆಗೆ ಕೆಲವೊಂದು ಪೋಲಿಸರೇ ಸಹಕಾರ ನೀಡುತ್ತಿದ್ದಾರೆಂದು ಜೆಡಿಎಸ್ ಐಟಿ ಘಟಕದ ಮುಖಂಡರು ಆರೊಪಿಸಿದ್ದಾರೆ.
ಪಾವಗಡ ಪಟ್ಟಣದ ಸಿಪಿಐ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿ ಇದೇ ವೇಳೆ ಮುಖಂಡರಾದ ಕಾವಲಗೇರೆ ರಾಮಾಂಜಿನಪ್ಪ ಮಾತನಾಡಿ ಪಾವಗಡ ಪಟ್ಟಣ ಹಾಗೂ ತಾಲೂಕಿನ ನಾಲ್ಕು ಹೊಬಳಿ ಕೇಂದ್ರಗಳಲ್ಲಿ ಮಟ್ಕಾ ಅಶ್ವತ್ತಪ್ಪ, ಕೃಷ್ಣಪ್ಪ, ಸುಜಾತ, ರಾಮಾಂಜಿನಪ್ಪ, ಲಕ್ಷ್ಮಿ, ರಂಜೀತ್, ಬಿ.ಇ.ಶಿಲ್ಪ, ಗಂಗಾಧರಪ್ಪ ಇವರುಗಳು ತಮ್ಮ ಅನುಚರರನ್ನು ನೇಮಿಸಿಕೊಂಡು ಪ್ರತಿ ನಿತ್ಯ 1 ಕೋಟಿಗೂ ಹೆಚ್ಚು ವ್ಯವಹಾರವನ್ನ ನಡೆಸುತ್ತಿದ್ದು, ಮತ್ತಷ್ಠು ಪರಣಾಮಕಾರಿಯಾಗಿ ಜನತೆಯನ್ನ ತಲುಪಲು ಮೊಬೈಲ್ ಮೂಲಕ ವ್ಯವಹಾರ ನಡೆಸುತ್ತಿದ್ದು ಇವರಿಗೆ ಪೋಲಿಸ್ ಠಾಣಿಗಳಲ್ಲಿ ಕೆಲವೊಂದು ಸಿಬ್ಬಂದಿಯ ಸಹಕಾರವಿರುವ ಕಾರಣ ದಾಳಿ ನಡೆಯುವ ಮಾಹಿತಿ ತಿಳಿದ ತಕ್ಷಣ ಇವರುಗಳು ನಾಪತ್ತೆಯಾಗುತ್ತಾರೆಂದರು.


ಮಾಜಿ ಪುರಸಭಾ ಸದಸ್ಯರಾದ ಮನುಮಹೇಶ್ ಮಾತನಾಡಿ ಪಾವಗಡ ಪಟ್ಟಣ ಹಾಗೂ ಹೊಬಳಿ ಕೇಂದ್ರಗಳಲ್ಲಿ ನಿರಂತರವಾಗಿ ಮಟ್ಕಾ ದಂದೆ ನಡೆಯುತ್ತಿದ್ದು, ಪೋಲಿಸ್ ಇಲಾಖೆಯ ಕೆಲವೊಂದು ಸಿಬ್ಬಂದಿ ದಾಳಿ ಯಾವ ಸಮಯದಲ್ಲಾರು ನಡೆಯಲು ಜಿಲ್ಲಾ ಮಟ್ಟದ ಸಂಪರ್ಕದಿಂದ ಮಾಹಿತಿ ಪಡೆದು ಇವರುಗಳಿಗೆ ರವಾನಿಸುತ್ತಿರುವ ಹಿನ್ನೆಲೆಯಲ್ಲಿ ಮಟ್ಕಾ ದಂದೆಯನ್ನ ಬುಡ ಸಮೇತ ಕೀಳಲು ಸಾಧ್ಯವಾಗದಿರುವುದಕ್ಕೆ ಇಲಾಖೆಯೇ ಮೂಲ ಕಾರಣವಾಗಿದ್ದು, ಬಡ ಶೋಷಿತ ವರ್ಗಗಳ ರಕ್ತವನ್ನ ಹೀರುತ್ತಿರುವ ಮಟ್ಕಾ ಕಂಪನಿಗಳ ಮಾಲೀಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜೆಡಿಎಸ್ ಐಟಿ ಘಟಕದ ವತಿಯಿಂದ ಉಗ್ರಹೋರಾಟ ನಡೆಸಲಾಗುವುದೆಂದು ತಿಳಿಸಿದ್ದಾರೆ.
ಮನವಿ ಪತ್ರವನ್ನ ಸ್ವೀಕರಿಸಿದ ಸಿಪಿಐ ಲಕ್ಷ್ಮಿಕಾಂತ್ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.


ಈ ಸಂದರ್ಭದಲ್ಲಿ ಲೋಕೇಶ್ ಪಾಳ್ಳೇಗಾರ್, ಕೃಷ್ಣಗಿರಿ ಶಿವಕುಮಾರ್, ತಿಮ್ಮರಾಜು, ಗಂಗಾಧರ್ ನಾಯ್ಡ್, ನರಸಿಂಹ್ಮ, ಶ್ರೀನಿವಾಸ ನೇಕಾರ್, ಶಿವ, ಪಳವಳ್ಳಿ ಅಗ್ನಿ, ಮಂಜುನಾಥ್, ಮಾಜಿ ಪುರಸಭೆ ಸದಸ್ಯರಾದ ರೋಪ್ಪ ಗೋಪಾಲ, ನಾಗೇಂದ್ರ, ಕಡಮಲಕುಂಟೆ ಓಬಳೇಶ್ ಉಪಸ್ಥಿತರಿದ್ದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!