ಜಿಲ್ಲಾವಾರು ‘ಜನತಾ ಪರ್ವ’ ಕಾರ್ಯಾಗಾರಕ್ಕೆ ಜೆಡಿಎಸ್ ತಯಾರಿ

ಬೆಂಗಳೂರು: ಜನತಾ ಪರ್ವ ಮುಂದುವರೆದ ಭಾಗವಾಗಿ ಮುಂಬರುವ 2023ರ ವಿಧಾನಸಭೆ ಚುನಾವಣೆ ಸಂಬಂಧ ಸಮಾಲೋಚಿಸಲು ನ.8ರಿಂದ ಜನತಾ ಸಂಗಮ ಕಾರ್ಯಾಗಾರವನ್ನು ಜೆಡಿಎಸ್ ಆರಂಭಿಸಲಿದೆ. ನಗರದ ಜೆಪಿಭವನದಲ್ಲಿ ನ.8ರಿಂದ 17ರವರೆಗೆ ಜನತಾ ಪರ್ವ-1ರಡಿ ಜನತಾ ಸಂಗಮ ಎಂಬ ಜಿಲ್ಲಾವಾರು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಿದೆ. ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸುವ ಅಭ್ಯರ್ಥಿ ಮತ್ತು ಪಕ್ಷದ ನಡುವೆ ಸಮನ್ವಯತೆ ಮತ್ತು ಹೊಂದಾಣಿಕೆ ಕುರಿತಂತೆ ವಿವರವಾಗಿ ಸಮಾಲೋಚಿಸಲು ಜನತಾ ಸಂಗಮವನ್ನು ಆಯೋಜಿಸಲಾಗಿದೆ. ಈ ಕಾರ್ಯಾಗಾರಕ್ಕೆ ಪಕ್ಷದ ಎಲ್ಲ ಶಾಸಕರು, ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷರಿಗೆ ಆಹ್ವಾನವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ. ಸೋಮವಾರ ಬೆಳಗ್ಗೆ 10.30ಕ್ಕೆ ಜನತಾ ಪತ್ರಿಕೆಯನ್ನು ಲೋಕಾರ್ಪಣೆ ಮಾಡಿ ಜಿಲ್ಲಾವಾರು ಕಾರ್ಯಾಗಾರಕ್ಕೆ ಚಾಲನೆ ನೀಡಲಾಗುತ್ತದೆ. ಅಂದು ಮಧ್ಯಾಹ್ನ ರಾಜ್ಯಮಟ್ಟದ ವಿವಿಧ ಘಟಕಗಳ ಮುಖ್ಯಸ್ಥರು ಮತ್ತು ಪದಾಧಿಕಾರಿಗಳನ್ನು ಒಳಗೊಂಡ ಸಭೆಯನ್ನು ನಡೆಸಲಾಗುತ್ತದೆ. ಆನಂತರ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕಾರ್ಯಾಗಾರ ನಡೆಸಲಾಗುತ್ತದೆ. ನ.9ರಿಂದ ನ.17ರವರೆಗೂ ನಿರಂತರವಾಗಿ ಪ್ರತಿದಿನ ಮೂರ್ನಾಲ್ಕು ಜಿಲ್ಲೆಗಳ ಕಾರ್ಯಾಗಾರವನ್ನು ನಡೆಸಲು ಉದ್ದೇಶಿಸಲಾಗಿದೆ. ಇತ್ತೀಚೆಗೆ ಬಿಡದಿ ಬಳಿಯ ಎಚ್.ಡಿ.ಕುಮಾರಸ್ವಾಮಿ ಅವರ ತೋಟದಲ್ಲಿ ಮಿಷನ್-123 ಗುರಿ, ಪಕ್ಷದ ದ್ಯೇಯೋದ್ದೇಶಗಳನ್ನು ಒಳಗೊಂಡಿರುವ ಪಂಚರತ್ನ ಯೋಜನೆಗಳ ವಿವಿಧ ಕಾರ್ಯಾಗಾರಗಳಲ್ಲಿ ಚರ್ಚಿಸಲಾಗಿತ್ತು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಲಿರುವ ಅಭ್ಯರ್ಥಿ ತಾಲ್ಲೂಕು ಮತ್ತು ವಿವಿಧ ಘಟಕಗಳ ನಡುವೆ ಸಮನ್ವಯತೆ ಮಾಡಿಕೊಳ್ಳಲು ಕನಿಷ್ಟ ಎರಡು ಸಭೆಗಳನ್ನು ನಡೆಸುವಂತೆ ಸಲಹೆ ಮಾಡಲಾಗಿತ್ತು. ಆ ಸಭೆಗಳಲ್ಲಿ ಭಾಗವಹಿಸಿದ ವಿಭಾಗಗಳ ಮುಖ್ಯಸ್ಥರು, ಪ್ರಮುಖರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಗಳನ್ನೊಳಗೊಂಡ ವಿವರಗಳನ್ನು ಪಕ್ಷದ ಕಚೇರಿಗೆ ನೀಡಲು ಕೋರಲಾಗಿತ್ತು. ಕಾರ್ಯಾಗಾರದ ಮುಂದುವರೆದ ಭಾಗವಾಗಿ ಜನತಾ ಸಂಗಮವನ್ನು ಬಿಡದಿ ಬಳಿ ಬದಲಾಗಿ ಬೆಂಗಳೂರಿನಲ್ಲೇ ಆಯೋಜಿಸಲಾಗುತ್ತಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!