ಬಾಗಿನ ಬಿಡಲು ಹೋಗಿ ಕೆರೆಯಲ್ಲಿ ಈಜಾಡಿದ ಶಾಸಕ ಡಾ. ರಂಗನಾಥ್

ಕುಣಿಗಲ್: ತುಂಬಿದ ಕೆರೆಗೆ ಬಾಗಿನ ಕೊಡಲು ಹೋಗಿದ್ದ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ರಂಗನಾಥ್, ಮಳೆಯಲ್ಲೇ ಕೆರೆಗೆ ಹಾರಿ ಈಜಿ ಮಿಂದೆದ್ದರು.

ದೀಪಾವಳಿ ಹಬ್ಬದಂದು ಕುಣಿಗಲ್ ಕ್ಷೇತ್ರದ ಕೆ.ಹೆಚ್. ಹಳ್ಳಿ ಕೆರೆಗೆ ಬಾಗಿನ ಅರ್ಪಿಸಲು ಹೋಗಿದ್ದರು.

ಈ ವೇಳೆ ಬಾಗಿನ ನೀಡಲು ಮಳೆ ಅಡ್ಡಿಯಾಗಿತ್ತು.

ಸ್ಥಳೀಯರು ಮಳೆಗೆ ಬೆದರಿ ಸೂರಿನಡಿ ನಿಲ್ಲಲು ಹೋದರು. ಆದರೆ ಶಾಸಕ ರಂಗನಾಥ್, ಮಳೆಯ ನಡುವೆಯೇ ಬಾಗಿನ ಅರ್ಪಿಸಿ ಅದೇ ಕೆರೆಗಿಳಿದು ಈಜಾಡಿ ಎಂಜಾಯ್ ಮಾಡಿದರು.

ಒಂದು ಗಂಟೆಗೂ ಹೆಚ್ಚು ಹೊತ್ತು ಕೆರೆಯಲ್ಲೇ ಈಜುತ್ತಾ ಆಟವಾಡುತ್ತಾ ಕಾಲ ಕಳೆದರು. ಶಾಸಕರ ಈಜಾಟದ ಉತ್ಸಾಹ ನೋಡಿ ಸ್ಥಳೀಯರು ಕೂಡ ಕರೆಗಿಳಿದು ನೀರಲ್ಲಿ ಆಟವಾಡಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!