ಎಲ್‌ಕೆಜಿ-ಯುಕೆಜಿ ತರಗತಿಗೆ ತೆರಳಿದ ಚಿಣ್ಣರು

ತುಮಕೂರು: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಅಂಗನವಾಡಿ ಮತ್ತು ಎಲ್‌ಕೆಜಿ, ಯುಕೆಜಿ ತರಗತಿಗಳು ಇಂದಿನಿಂದ ಆರಂಭವಾಗಿದ್ದು, ಹಾಲುಗಲ್ಲದ ಚಿಣ್ಣರು ಅಂಗನವಾಡಿ ಮತ್ತು ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಖುಷಿಯಿಂದ ತೆರಳಿದರು.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಂಗನವಾಡಿ ಮತ್ತು ಎಲ್‌ಕೆಜಿ, ಯುಕೆಜಿ ತರಗತಿಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಟಾನಿಟೈಸ್ ಮಾಡಲಾಗಿದ್ದು, ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇಂದು ಬೆಳಗ್ಗೆ 1೦ ಗಂಟೆಯಿಂದ ಚಿಣ್ಣರು ಅಂಗನವಾಡಿ ಮತ್ತು ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಶಾಲಾ ಬ್ಯಾಗ್ ಧರಿಸಿ, ಪೋಷಕರೊಂದಿಗೆ ಶಾಲೆಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಈಗಾಗಲೇ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳನ್ನು ತರಗತಿಗಳಿಗೆ ಬರ ಮಾಡಿಕೊಳ್ಳಲು ಸಕಲಸಿದ್ಧತೆ ಮಾಡಿಕೊಂಡಿದ್ದ ಶಾಲೆಗಳು ಇಂದು ಬೆಳಗ್ಗೆ ಮಕ್ಕಳಿಗೆ ಸಂತಸ, ಸಂಭ್ರಮದಿಂದ ತರಗತಿಗಳಿಗೆ ಸ್ವಾಗತಿಸಿದ್ದು ವಿಶೇಷವಾಗಿತ್ತು.

ನಗರದ ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಗೆ ಮಕ್ಕಳು ತಮ್ಮ ಪೋಷಕರೊಂದಿಗೆ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಷಣ್ಮುಖ ಮಾತನಾಡಿ, ಪ್ರಸ್ತುತ ಈವರ್ಷದಲ್ಲಿ ಎಲ್‌ಕೆಜಿಗೆ 3೦ ಮಂದಿ ಯುಕೆಜಿ ಗೆ 3೦ ಮಂದಿ ಮಕ್ಕಳು ದಾಖಲಾತಿಯನ್ನು ಪಡೆದುಕೊಂಡಿದ್ದಾರೆ. ಹೆಚ್ಚುವರಿಯಾಗಿ 3೦+3೦ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಿ ಎಂದು ಬಿಇಒ ಕಚೇರಿಯ ನಿರ್ದೇಶನದ ಮೇರೆಗೆ ಈಗ ಅರ್ಜಿಗಳನ್ನು ತೆಗೆದುಕೊಂಡು ದಾಖಲಾತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು.

ಇಂದು ಪ್ರಸ್ತುತ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ನಮ್ಮ ಕೆಪಿಎಸ್ ಸಂಸ್ಥೆಯಲ್ಲಿ ಪ್ರಾರಂಭವಾಗಿದ್ದು, ಎಲ್‌ಕೆಜಿಗೆ 1೦ ವಿದ್ಯಾರ್ಥಿಗಳು, ಯುಕೆಜಿಗೆ 12 ವಿದ್ಯಾರ್ಥಿಗಳು ತರಗತಿಗೆ ಹಾಜರಾತಿಯನ್ನು ಪಡೆದಿದ್ದಾರೆ. ಪೋಷಕರು ಬಂದು ಮಕ್ಕಳನ್ನು ಶಾಲೆಗೆ ಬಿಟ್ಟಿಹೋಗಿದ್ದು, ಪೋಷಕರೇ ಮಕ್ಕಳಿಗೆ ಬಿಸಿನೀರು ಮತ್ತು ಉಪಹಾರದ ವ್ಯವಸ್ಥೆಯ ಜೊತೆಗೆ ಮಕ್ಕಳನ್ನು ಶಾಲೆಗೆ ಬಿಟ್ಟುಹೋಗುತ್ತಿದ್ದಾರೆ ಎಂದ ಅವರು, ಮಕ್ಕಳ ಆರೋಗ್ಯ ದೃಷ್ಠಿಯಿಂದ ಎಲ್ಲಾ ತರಗತಿಗಳಿಗೆ ಸ್ಯಾನಿಟೈಸ್ ಮಾಡಿ ಮಕ್ಕಳನ್ನು ಆಹ್ವಾನಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ತಿಳಿಸಿದರು.

ಎಂಪ್ರೆಸ್ ಕೆಪಿಎಸ್ ಶಾಲೆಯ ಯುಕೆಜಿ ತರಗತಿ ಶಿಕ್ಷಕಿ ಆಶಾ ಮಾತನಾಡಿ, ಇಂದು ಶಾಲೆಯ ಆರಂಭದ ಮೊದಲ ದಿನವಾಗಿದ್ದು, ಪೋಷಕರೊಂದಿಗೆ ಮಕ್ಕಳು ಶಾಲೆಗೆ ಬಂದಿದ್ದು, ಪೋಷಕರ ಬಳಿಯಿಂದ ಅನುಮತಿ ಪತ್ರ ಪಡೆದು ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಲಾಯಿತು. ಇನ್ನೊಂದು ವಾರ ಮಕ್ಕಳಿಗೆ ವಿವಿಧ ರೀತಿಯ ತರಬೇತಿಗಳನ್ನು ನೀಡಿ, ಮಕ್ಕಳು ಸಿದ್ಧವಾದ ನಂತರ ಮುಂದಿನ ವಾರದಿಂದ ಮಕ್ಕಳಿಗೆ ಶಿಕ್ಷಣ ಕಲಿಸಲಾಗುವುದು ಎಂದು ತಿಳಿಸಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!