ಮಟ್ಕಾ ಡಾನ್ ಗಳ ಪೇರೆಡ್ – ಮಟ್ಕಾ ದಂಧೆ ತಕ್ಷಣ ಬಂದ್ ಮಾಡಿ ಸಿಪಿಐ ಲಕ್ಷ್ಮಿಕಾಂತ್ ಎಚ್ಚರಿಕೆ

ಪಾವಗಡ : ತಾಲ್ಲೂಕಿನಲ್ಲಿ ಮಟ್ಕ್ ಕಿಂಗ್ ಪಿನ್ ಹಾಗೂ ಮಟ್ಕ್ ಡೌನ್ ಎಂದೆ ಹೆಸರುವಾಸಿಯಾದ ಮಟ್ಕ್ ದೂರೆ ಅಶ್ವತ್ಪಪ್ಪ ನೂರಿ,ರಂಜಿತ್,ಗಂಗಧರ್,ರಾಮಾಂಜಿನಪ್ಪ ಮತ್ತು ರಾಮಕೃಷ್ಣಪ್ಪ ಎಂಬುವರಿಗೆ ಸಿಪಿಐ ಲಕ್ಷ್ಮಿಕಾಂತ್ ಖಡಕ್ ಸೂಚನೆ ನೀಡಿದರು.

ಕಾನೂನು ಬೀಗಿಯಾಗಿದೆ ಯಾವುದೇ ಕಾರಣಕ್ಕೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ತಮ್ಮ ಮನೆಗಳಲ್ಲಿ ಇರುವ ಹೆಣ್ಣು ಮಕ್ಕಳೂಂದಿಗೆ ಈ ದಂದೆ ನಡೆಸಿದ ವಿಷಯ ಗೊತ್ತಾದರು ಸಹ ಗಡಿ ಪಾರು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಆಧಾರ್ ಕಾರ್ಡ್ ಮನೆ ಅಡ್ರೆಸ್ ನಲ್ಲಿಯೇ ವಾಸ ಇದ್ದಿರಾ ? ಶನಿವಾರ ಡಿವೈಎಸ್ ಪಿ ರವರು ನಡೆಸಿದ ಪರೇಡ್ ಗೆ ಏಕೆ ಹಾಜರಾಗಲಿಲ್ಲ ಹತ್ತತ್ತು ಮೊಬೈಲ್ ನಂಬರ್ ಗಳನ್ನು ಬಳಕೆ ಮಾಡುತ್ತೀಯ ಎಂದು ನೂರಿ ಎಂಬಾತನನ್ನು ತರಾಟೆಗೆ ತೆಗೆದುಕೊಂಡರು.

ಮಟ್ಕ್ ಇಸ್ಪಿಟ್ ಇಂತಹ ದಂದೆಯ ವಿಚಾರವಾಗಿ ಪೋಲೀಸ್ ಅಧಿಕಾರಿಗಳ ಮೇಲೆ ಸಾರ್ವಜನಿಕರ ಗೌರವ ಕಡಿಮೆಯಾಗುತ್ತಿದೆ. ಕೋವಿಡ್ ಸೋಂಕು ಹೋದರು ಮಟ್ಕಾ ಸೋಂಕು ಮಾತ್ರ ಕಡಿಮೆಯಾಗಿಲ್ಲ ಎಂಬಂತಾಗಿದೆ ತಾಲೂಕಿನ ಸಾರ್ವಜನಿಕರ ಅಭಿಪ್ರಾಯ. ಈ ಹಿಂದೆ ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಈ ದಂದೆಯ ಬಗ್ಗೆ ಸದ್ದು ನಡೆಯುತ್ತಿತ್ತು ,ಅದರೆ ಹಲವು ಬಾರಿ ಇದರ ಬಗ್ಗೆ ಸ್ಥಳಿಯ ಪೋಲೀಸ್ ಅಧಿಕಾರಿಗಳು ಮಟ್ಟ ಹಾಕುವುದರಲ್ಲಿ ವಿಫಲವಾದ ಕಾರಣದಿಂದ ಜಿಲ್ಲಾ ವರಿಷ್ಟಧಿಕಾರಿಗಳು ತಾಲೂಕಿನ ಕಡೆ ಗಮನ ಹರಿಸಿ ಮಟ್ಕ ದಂದೆ ಮಟ್ಟ ಹಾಕಲು ಮುಂದಾಗಿದ್ದಾರೆ.

ಅದರೆ ತಂತ್ರಜ್ಞಾನ ಮುಂದುವರೆದಿದ್ದು ಮಟ್ಕ ದಂದೆ ತಂತ್ರಜ್ಞಾನ ಮೊರೆಹೋದ ಕಾರಣ ವಿವಿಧ ರೀತಿಯಲ್ಲಿ ಪೋಲೀಸ್ ಅಧಿಕಾರಿಗಳು ಇದರ ನಿಯಂತ್ರಣಕ್ಕಾಗಿ ಹರಸಾಹಸ ಪಡುವಂತಾಗಿದೆ.

ಶನಿವಾರ ಪೋಲೀಸ್ ಠಾಣೆಯಲ್ಲಿ
ತಾಲೂಕಿನ ಮೋಲೆ ಮೋಲೆಗಳಲ್ಲಿ ಈ ಹಿಂದೆ ಮಟ್ಕ ಹಾಗೂ ಇಸ್ಪೀಟು ದಂದೆಯಲ್ಲಿ ಭಾಗಿಯಾಗಿದ್ದ ಬಿಟರ್ ಗಳನ್ನು ಕರೆಸಿ ಮಧುಗಿರಿ ಡಿವೈಎಸ್ ರಾಮಕೃಷ್ಣ ರವರು ಪೆರೈಡ್ ನಡೆಸಿ ವಾರ್ನಿಗ್ ನೀಡಿದ್ದರು. ಅದರಲ್ಲಿ ಕೆಲವರು ಎಸ್ಕೇಪ್ ಆದಂತವರಿಗೆ ಸೋಮವಾರ ಸಿಪಿಐ ಲಕ್ಷ್ಮೀಕಾಂತ್ ಕಡಕ್ ಎಚ್ಚರಿಕೆ ನೀಡಿದ ಘಟನೆ ನಡೆಯಿತು.

You May Also Like

error: Content is protected !!