ಶಾಲಾ – ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ಸು ವ್ಯವಸ್ಥೆ ಕಲ್ಪಿಸಲು ಒತ್ತಾಯ

ತಿಪಟೂರು : ತಾಲ್ಲೂಕಿನ ಗ್ರಾಮೀಣ ಭಾಗದಿಂದ ನಗರ ಪ್ರದೇಶದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗಾಗಿ ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದಾರೆ. ತಾಲ್ಲೂಕಿನ ಅರಳುಗುಪ್ಪೆ ಗ್ರಾಮದಿಂದ ತಿಪಟೂರು ನಗರಕ್ಕೆ ಬೆಳಗಿನ ಸಮಯದಲ್ಲಿ ಬರುವ ಬಸ್ಸು ಅರಳುಗುಪ್ಪೆ ಇಂದಲೇ ಭರ್ತಿಯಾಗಿ ಬರುತ್ತಿದ್ದು ಹೆಚ್ಚುವರಿ ಮತ್ತೆರಡು ಬಸ್ಸನ್ನು ಈ ಭಾಗಕ್ಕೆ ಬಿಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಈಗಾಗಲೇ ಬೆಳಗಿನ ಸಮಯ ಶಾಲಾ ಕಾಲೇಜಿಗೆ ತೆರಳುವ ನೂರಾರು ಮಕ್ಕಳಿಗೆ ಕೇವಲ ಒಂದು ಬಸ್ಸು ಪೂರ್ತಿ ಭರ್ತಿಯಾಗಿರುವುದರಿಂದ ರಸ್ತೆ ಅಕ್ಕಪಕ್ಕದಲ್ಲಿ ಬೇರೆ ಬಸ್ಸುಗಳಿಗಾಗಿ ಕಾಯುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ದೊರಕದೆ ಇರುವುದರಿಂದ ಶಾಲಾ-ಕಾಲೇಜಿಗೆ ತೆರಳಲು ಮತ್ತೊಂದು ಬಸ್ಸಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ ಬೆಳಿಗ್ಗೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೋಸ್ಕರ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಗೊರಗೊಂಡನಹಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸುದರ್ಶನ್ ಅವರು ಶಿಕ್ಷಣ ಸಚಿವರಿಗೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ತಿಪಟೂರು ಘಟಕದ ವ್ಯವಸ್ಥಾಪಕರಿಗೆ ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.

You May Also Like

error: Content is protected !!