ನ.16ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ

ತುಮಕೂರು:: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು HLT Software Solutions Private Limited ಸಂಸ್ಥೆಯ ಸಹಭಾಗಿತ್ವದಲ್ಲಿ ನಿರುದ್ಯೋಗಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸುವ ಸಲುವಾಗಿ ನವೆಂಬರ್ 16ರಂದು ಬೆಳಿಗ್ಗೆ 1೦.3೦ ಗಂಟೆಗೆ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ.

ಬಿಕಾಂ/ಬಿಬಿಎಂ, ಎಂಕಾಂ/ಎಂಬಿಎ ಇನ್ ಮಾರ್ಕೆಟಿಂಗ್, ಬಿಸಿಎ, ಎಂಸಿಎ, ಬಿಇ ಇನ್ ಸಿಎಸ್‌ಇ/ಐಎಸ್‌ಇ/ಇಸಿಇ ಪಾಸಾದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಈ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದ್ದು, ಆಯ್ಕೆಯಾದವರಿಗೆ ವಾರ್ಷಿಕ 1.5 ಲಕ್ಷ ರೂ.ಗಳಿಂದ 4.8 ಲಕ್ಷ ರೂ.ಗಳವರೆಗೆ ವೇತನ ದೊರೆಯಲಿದೆ.

ಆಸಕ್ತರು ತಮ್ಮ ಸ್ವವಿವರಗಳೊಂದಿಗೆ ನಿಗಧಿತ ದಿನದಂದು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂ.0816-2278488 ಅಥವಾ ಜಾಲತಾಣ https://tinyurl.com/j53tcpzz

ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!