ಒನಕೆ ಓಬವ್ವಳನ್ನು ನೆನೆದ ಪ್ರಧಾನಿ ಮೋದಿ

ನವದೆಹಲಿ: ಕರ್ನಾಟಕದ ವೀರ ವನಿತೆ ಒನಕೆ ಓಬವ್ವ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಮನ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾದ ಆಚಾರ್ಯ ಕೃಪಲಾನಿ ಮತ್ತು ಮೌಲಾನಾ ಅಬ್ದುಲ್ ಕಲಾಮ್ ಆಜಾದ್ ಅವರ ಜನ್ಮ ದಿನಾಚರಣೆ ಅಂಗವಾಗಿ ಇಬ್ಬರಿಗೂ ಗೌರವ ಸಲ್ಲಿಸಿರುವ ಮೋದಿ ಅವರು ಇದೇ ಸಂದರ್ಭದಲ್ಲಿ ಒನಕೆ ಓಬವ್ವ ಅವರನ್ನು ಸ್ಮರಿಸಿಕೊಂಡು ಟ್ವಿಟ್ ಮಾಡಿದ್ದಾರೆ.

ತನ್ನೂರಿನ ಜನರ ರಕ್ಷಣೆಗಾಗಿ ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಿದ ಹೈದರ್ ಆಲಿ ಸೈನ್ಯದ ವಿರುದ್ಧ ವಿರೋಚಿತ ಹೋರಾಟ ನಡೆಸಿ ವೀರ ಮರಣವನ್ನಪ್ಪಿದ ವೀರ ವನಿತೆ ಒನಕೆ ಓಬವ್ವ ಅವರು ಭಾರತೀಯ ನಾರಿಶಕ್ತಿಯ ಧ್ಯೋತಕವಾಗಿದ್ದಾರೆ ಎಂದು ಮೋದಿ ಬಣ್ಣಿಸಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!