ಮಾತನಾಡದೆ ಮೌನದಲ್ಲೇ
ಎಲ್ಲ ಹೇಳುತ್ತಿದ್ದ ಮನದರಸಿ ನೀ
ನಿನ್ನ ಮೌನವ ಮನವನರಿಯಲು
ಹೋಗಿ ಮಾತುಗಳೇ ಮರೆತಿರುವೆ..
ನನ್ನ ಮನದ ಮ೦ದಿರದಲ್ಲಿ
ಬೆಳಗಿದ ಪ್ರೀತಿಯ ದೀಪ ನೀನು
ಹೃದಯ ಸಿಂಹಾಸ ದಲ್ಲಿ ಸಿಕ್ಕ
ನನ್ನ ಪ್ರೀತಿಯ ಮುತ್ತು ನೀನು…
ನನ್ನ ಕಣ್ಣ ಕೊಳದಲ್ಲಿ ಅರಳಿದ
ಮನದ ಪ್ರೀತಿಯ ಪುಷ್ಪ ನೀನು
ನಾ ಸೋತು ಹೋಗುವ ಮುನ್ನ
ನೀನೊಮ್ಮೆ ಬರಬಾರದೇ ಗೆಳತಿ..
ಟಿ.ಎಸ್.ಕೃಷ್ಣಮೂರ್ತಿ
ತುಮಕೂರು