ಎಟಿಎಂ ಕಾರ್ಡ್ ದುರುಪಯೋಗ- ಆರೋಪಿ ಬಂಧನ: ಪೋಲಿಸ್ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಎಸ್ ಪಿ ರಾಹುಲ್ ಕುಮಾರ್ ಶಹಪೂರ್ ವಾಡ್

ಕುಣಿಗಲ್ : ದಿನಾಂಕ 25-08-2021 ರಂದು ಬೆಳಿಗ್ಗೆ ಸುಮಾರು 11-20 ಗಂಟೆ ಸಮಯದಲ್ಲಿ ಕುಣಿಗಲ್ ತಾಲ್ಲೂಕ್, ಕೆಂಪನಹಳ್ಳಿ ವಾಸಿಯಾದ ನರಸಿಂಹಯ್ಯ ಬಿನ್ ಲೇಟ್ ಚಿಕ್ಕಯ್ಯ ರವರು ಕುಣಿಗಲ್ ಟೌನ್ ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಬಂದಿದ್ದಾಗ ಎಟಿಎಂ ಒಳಗಿದ್ದ ಒಬ್ಬ ಅಪರಿಚಿತನು ಹಣ ಡ್ರಾ ಮಾಡಿ ಕೊಡುವ ನೆಪದಲ್ಲಿ ನರಸಿಂಹಯ್ಯ ರವರ ಬಳಿಯಿಂದ ಎಟಿಎಂ ಕಾರ್ಡ್ ಪಡೆದು ಅವರಿಗೆ ಬೇರೆ ಎಟಿಎಂ ಕಾರ್ಡ್ ಅನ್ನು ಬದಲಾಯಿಸಿ ಕೊಟ್ಟು, ನಂತರ ಇವರ ಎಟಿಎಂ ಅನ್ನು ಬಳಸಿ ಬೇರೆ ಕಡೆಗಳಲ್ಲಿ ಒಟ್ಟು 1,04000/- ರೂ ಮೌಲ್ಯದ ಹಣ ಹಾಗೂ ವಡವೆಗಳನ್ನು ತೆಗೆದುಕೊಂಡಿರುವುದಾಗಿ ಅರ್ಜಿದಾರ ರಮೇಶ್ ಕುಣಿಗಲ್ ಠಾಣೆಯಲ್ಲಿ ದಿನಾಂಕ 27-08-2021 ರಂದು ದೂರು ನೀಡಿರುತ್ತಾರೆ.ಈ ದೂರಿನ ಮೇರೆಗೆ ಮೊ.ಸಂ 236/2021 ಕಲಂ 420 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಸದರಿ ಪ್ರಕರಣದ ಪತ್ತೆಗಾಗಿ ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ಶಹಪೂರ್ ವಾಡ್ .ಐ.ಪಿ.ಎಸ್. ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ್ ಹಾಗೂ ಕುಣಿಗಲ್‌ ಪೊಲೀಸ್ ಉಪಾಧೀಕ್ಷಕ ಜಿ.ಆರ್, ರಮೇಶ್ ರವರ ಮಾರ್ಗದರ್ಶನದಲ್ಲಿ ಕುಣಿಗಲ್ ಠಾಣಾ ಪಿ.ಐ .ರಾಜು,ಡಿ,ಎಲ್ ರವರ ನೇತೃತ್ವದಲ್ಲಿ ತಂದ ರಚಿಸಿದ್ದು, ಈ ತಂಡವು ದಿನಾಂಕ 07-09-2021 ರಂದು 32 ವರ್ಷದ ಆರೋಪಿ ಅರುಣಕುಮಾರ ಬಿನ್ ಲೇಟ್ ಮಲ್ಲೇಶಪ್ಪ ಎಂದು ಗೊತ್ತಾಗಿದೆ. ಈತ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಮಾದೇನಹಳ್ಳಿ ಗ್ರಾಮದವನ್ನು ಇವನ್ನು ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.ಆರೋಪಿ ಅರುಣಕುಮಾರ ಎಂಬಾತನನ್ನು ವಶಕ್ಕೆ ಪಡೆದು ಈ ಪ್ರಕರಣವನ್ನು ಪತ್ತೆ ಮಾಡಿ ತನಿಖೆ ನಡೆಸಿ ಆರೋಪ ಸಾಬೀತದ ಹಿನ್ನಲೆಯಲ್ಲಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಲಾಗಿದೆ.

ಆರೋಪಿ ಅರುಣಕುಮಾರ ಕೃತ್ಯಕ್ಕೆ ಬಳಸಿದ್ದ ಒಂದು ಕೆಎ-03-ಎಂ,ಎಲ್-0164 ನೇ ಚೆವರೊಲೆಟ್ ಕಾರ್ ಅನ್ನು ಹಾಗೂ ಈತನು ಪಿರ್ಯಾದಿ ಎಟಿಎಂ ಕಾರ್ಡಿನಿಂದ ಖರೀದಿ ಮಾಡಿದ್ದ, ಒಂದು ಸಾದಾ ಚಿನ್ನದ ಸರ, 12 ಗ್ರಾಂ, 200 ಮಿ.ಲಿ. ತೂಕ, ಒಂದು ಸ್ಯಾಂ ಸಂಗ್ ಬ್ಲೂ ಟೂತ್ ಹೆಡ್ ಸೆಟ್,10,000/- ರೂ ನಗದು ಹಣ, ಇವುಗಳನ್ನು ವಶಪಡಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿದ್ದಾರೆ.

ಆರೋಪಿಯನ್ನು ಮತ್ತು ಕಳವು ಮಾಲುಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಕುಣಿಗಲ್ ಠಾಣಾ ಪಿ.ಐ ,ರಾಜು ಡಿ.ಎಲ್ ಹಾಗೂ ಇವರ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ಶಹಪೂರ್ ವಾಡ್ . ಐ.ಪಿ.ಎಸ್ ರವರು ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!